ಬೆಂಗಳೂರು: ಸರಸ್ವತೀ ಸಂಗೀತ ವಿದ್ಯಾಲಯ ನೀಡುವ ‘ಗೋವಿಂದ ಲಕ್ಷ್ಮೀ ಪುರಸ್ಕಾರ’ಕ್ಕೆ ತಬಲಾ ವಿದ್ವಾಂಸ ಎನ್.ಎಸ್. ಗುಂಡಾಶಾಸ್ತ್ರಿ ಹಾಗೂ ‘ಶ್ಯಾಮಲಾ ಸ್ಮೃತಿ ಸಮ್ಮಾನ್ ಪುರಸ್ಕಾರ’ಕ್ಕೆ ಮ್ಯಾಂಡೊಲಿನ್ ವಿದ್ವಾಂಸ ಎನ್.ಎಸ್. ಪ್ರಸಾದ್ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಗಳು ತಲಾ ₹11 ಸಾವಿರ ನಗದು ಒಳಗೊಂಡಿವೆ. ವಿದ್ಯಾಲಯವು ಇದೇ 7ರಂದು ಸಂಜೆ 4.30ಕ್ಕೆ ಜಯನಗರದ 9ನೇ ಬ್ಲಾಕ್ನಲ್ಲಿರುವ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಭಾರತೀಯ ನಾದ ಸೌರಭ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.

ನವದೆಹಲಿಯ ಆಕಾಶವಾಣಿ ಕೇಂದ್ರದ ನಿವೃತ್ತ ಉಪ ಮಹಾನಿರ್ದೇಶಕ ಕೆ.ವಾಗೀಶ್ ಹಾಗೂ ತಬಲಾ ವಾದಕ ಸತೀಶ್ ಹಂಪಿಹೊಳಿ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಈ ಸಂಗೀತೋತ್ಸವದಲ್ಲಿ ವಾಗೀಶ ಭಟ್ ಅವರು ಹಿಂದೂಸ್ತಾನಿ ಗಾಯನ ಪ್ರಸ್ತುತಪಡಿಸಲಿದ್ದು, ಮಧುಸೂದನ್ ಮುತಾಲಿಕ್ (ತಬಲಾ), ಶಿವಕುಮಾರ್ ಮಹಂತ (ಹಾರ್ಮೋನಿಯಂ), ಸ್ಮೃತಿ ಎಸ್. ಭಟ್ (ಗಾಯನ), ಎಂ. ಪ್ರಣವ್ ಪೈ (ತಬಲಾ) ಹಾಗೂ ಪ್ರಣವ್ ಪಡಿಯಾರ್ (ಹಾರ್ಮೋನಿಯಂ) ಅವರಿಂದ ಸಂಗೀತ ಕಛೇರಿ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-1863518822

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.