ಬೆಂಗಳೂರು: ಎಚ್ಎಎಲ್ನ ನವೀಕೃತ ವೈಮಾನಿಕ ವಸ್ತು ಸಂಗ್ರಹಾಲಯವು ಸೋಮವಾರ ದಿಂದ (ಏಪ್ರಿಲ್ 13) ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.

2001ರಲ್ಲಿ ಆರಂಭವಾದ ಈ ಕೇಂದ್ರವು ವೈಮಾನಿಕ ಜಗತ್ತಿನ ಸಂಶೋಧನೆ ಮತ್ತು ಅಭಿವೃದ್ಧಿ, ತಯಾರಿಕೆಯಲ್ಲಿನ ಹಂತಗಳನ್ನು ವಿವರಿಸುವ ದೇಶದ ಏಕೈಕ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನವೀಕರಣಕ್ಕಾಗಿ ಇದನ್ನು ಈಚೆಗೆ ಸ್ಥಗಿತಗೊಳಿಸಲಾಗಿತ್ತು.

ಹಲವು ತಿಂಗಳ ಕಾಮಗಾರಿಗಳ ನಂತರ ಇದೇ 10ರಂದು ನವೀಕೃತ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸ ಲಾಗಿದೆ.

ಆದರೆ ಸೋಮವಾರದಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಎಚ್ಎಎಲ್ ಪ್ರಕಟಣೆ ತಿಳಿಸಿದೆ.

ನಗರದ ಮಾರತ್ಹಳ್ಳಿಯಲ್ಲಿರುವ ಎಚ್ಎಎಲ್ ಆವರಣದಲ್ಲಿ ಈ ಸಂಗ್ರಹಾಲಯ ಇದ್ದು, ವಾರದ ದಿನಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ. ಇಲ್ಲಿ ವಿವಿಧ ಮಳಿಗೆಗಳು ಮತ್ತು ರೆಸ್ಟೋರೆಂಟ್ ಸಹ ಲಭ್ಯವಿದೆ.

‘ದೇಶದ ಯುವ ತಲೆಮಾರನ್ನು ಆಕರ್ಷಿಸುವ ರೀತಿಯಲ್ಲಿ ಈ ವಸ್ತು ಸಂಗ್ರಹಾಲಯವನ್ನು ರೂಪಿಸಲಾಗಿದೆ. ದೇಶಕ್ಕೆ ಎಚ್ಎಎಲ್ ಏನೆಲ್ಲಾ ಕೊಡುಗೆ ನೀಡಿದೆ ಎಂಬುದನ್ನು ವಿವರಿಸುವುದರ ಜತೆಗೆ, ಎಂಜಿನಿಯರಿಂಗ್ ಕೌಶಲವನ್ನೂ ಜನರಿಗೆ ಮನವರಿಕೆ ಮಾಡಿಕೊಡುವಂತೆ ಮರುವಿನ್ಯಾಸ ಮಾಡಲಾಗಿದೆ’ ಎನ್ನುತ್ತಾರೆ ಎಚ್ಎಎಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಕೆ.ಸುನಿಲ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-4-922586801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.