ಬೆಂಗಳೂರು: ‘ಹೃದ್ರೋಗಕ್ಕೆ ಒಳಗಾದವರಿಗೆ ನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಹೃದಯ ಚಿಕಿತ್ಸೆಯಲ್ಲಿ ಬೆಂಗಳೂರು ಪ್ರಮುಖ ಚಿಕಿತ್ಸಾ ಕೇಂದ್ರವಾಗಿ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಳ್ಳುತ್ತಿದೆ’ ಎಂದು ನಾರಾಯಣ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ನ ಹೃದ್ರೋಗ ತಜ್ಞ ಡಾ.ಸಂಜಯ್ ಮೆಹ್ರೋತ್ರ ಅಭಿಪ್ರಾಯಪಟ್ಟರು.

ಹೃದ್ರೋಗ ತಜ್ಞರು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು ‘ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಾದ ‘ಟಿಎವಿಆರ್’ (ಟ್ರಾನ್ಸ್ ಕ್ಯಾತಿಟರ್ ಅಯೋರ್ಟಿಕ್ ವಾಲ್ವ್ ರಿಪ್ಲೇಸ್ಮೆಂಟ್) ಮತ್ತು ‘ಟಿಎಂವಿಆರ್’ (ಟ್ರಾನ್ಸ್ಕ್ಯಾತಿಟರ್ ಮಿಟ್ರಲ್ ವಾಲ್ವ್ ರಿಪ್ಲೇಸ್ಮೆಂಟ್) ಅನ್ನು ಇಲ್ಲಿ ಬಳಸಲಾಗುತ್ತಿದೆ. ಈ ವಿಧಾನಗಳು ತೆರೆದ ಹೃದಯ ಚಿಕಿತ್ಸೆಗಳಿಲ್ಲದೆ, ಸಂಕೀರ್ಣ ಸಮಸ್ಯೆಗಳನ್ನೂ ಪರಿಹರಿಸುತ್ತಿವೆ. ಯುವಕರು, ವೃದ್ಧರಿಗೂ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದು ಹೇಳಿದರು.

‘ಈ ಹಿಂದೆ ಹೃದಯದ ಕವಾಟ ಚಿಕಿತ್ಸೆ ವಿಫಲವಾಗಿದ್ದ ರೋಗಿಯೊಬ್ಬರಿಗೆ ಹೊಸ ವಿಧಾನದ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ರಕ್ತ ಪರಿಚಲನೆಗೆ ಸಹಕರಿಸುವ ಅತ್ಯುತ್ತಮ ಹೃದಯ ಕವಾಟಗಳನ್ನು ರೋಬೊಟಿಕ್ ತಂತ್ರಜ್ಞಾನ ಬಳಸಿ ಅಳವಡಿಸಲಾಯಿತು. ಈ ವಿಧಾನದಿಂದ ರೋಗಿಗಳು ಅಲ್ವಾವಧಿಯಲ್ಲಿ ಚೇತರಿಸಿಕೊಂಡು ತೆರಳುತ್ತಿದ್ದಾರೆ. ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಚಿಕಿತ್ಸಾ ವೆಚ್ಚ ಕಡಿಮೆ ಇದೆ’ ಎಂದು ವಿವರಿಸಿದರು.

‘ದೇಶದಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಸುರಕ್ಷಿತ, ಸುಧಾರಿತ ಚಿಕಿತ್ಸೆ ನೀಡುವ ಬೆಂಗಳೂರಿನ ಸಾಮರ್ಥ್ಯವು ಭಾರತದ ಹೃದ್ರೋಗ ಚಿಕಿತ್ಸಾ ಕ್ಷೇತ್ರದ ಭವಿಷ್ಯವನ್ನೇ ರೂಪಿಸುತ್ತಿದೆ. ಹೃದ್ರೋಗ ತಜ್ಞರು, ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು ತಂಡವಾಗಿ ಕೆಲಸ ಮಾಡಿ ಚಿಕಿತ್ಸೆ ಸುಲಭಗೊಳಿಸುತ್ತಿದ್ದಾರೆ’ ಎಂದರು.

‘ದೇಶದಲ್ಲಿ ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿ ಕಾಯಿಲೆಗಳಿಗೆ ಒಳಪಡುತ್ತಿರುವವರ ಸಂಖ್ಯೆ ಏರಿಕೆಯಾಗಿದೆ. ಚಿಕಿತ್ಸೆ ನಂತರ ದೀರ್ಘಕಾಲ ಬದುಕುತ್ತಿದ್ದಾರೆ. ವೈದ್ಯರು ಮುಂದಿನ 20ರಿಂದ 30 ವರ್ಷ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸಾ ಯೋಜನೆ ರೂಪಿಸುತ್ತಿದ್ದಾರೆ. ಅಮೆರಿಕ, ಚೀನಾ ಸಹಿತ ಹಲವು ದೇಶಗಳಿಗೆ ಹೋಲಿಸಿದರೆ ಭಾರತದ ಆರೋಗ್ಯ ಸೇವೆಯಲ್ಲಿ ಇನ್ನಷ್ಟು ಸುಧಾರಣೆಯಾಗಬೇಕಿದೆ. ಆರೋಗ್ಯ ವಲಯದ ಮೂಲಸೌಕರ್ಯ ವೃದ್ಧಿಗೆ ಒತ್ತು ನೀಡಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.