ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಶುಕ್ರವಾರ ಸಂಜೆ ಬಿರುಗಾಳಿಯೊಂದಿಗೆ ಮಳೆಯಾಯಿತು.ಹಲವು ಪ್ರದೇಶಗಳಲ್ಲಿ ಮಧ್ಯರಾತ್ರಿಯವರೆಗೂ ತುಂತುರು ಮಳೆಯಾಯಿತು.

ಬನ್ನೇರುಘಟ್ಟ ರಸ್ತೆ ಸಾಗರ ಜಂಕ್ಷನ್, ಆರ್ಎಂ ರಸ್ತೆಯಿಂದ ಹಳೆಯ ವಿಮಾನ ನಿಲ್ದಾಣ, ಕೋರಮಂಗಲದ ಎನ್ಜಿವಿ ರಸ್ತೆ, ಜೆ.ಪಿ ನಗರದ 24ನೇ ಮುಖ್ಯರಸ್ತೆ, ಮಹಾರಾಣಿ ಕಾಲೇಜಿನ ಅಂಡರ್ಪಾಸ್, ಆರ್.ವಿ ಜಂಕ್ಷನ್ನಿಂದ ಲಾಲ್ಬಾಗ್, ಅರವಿಂದ ಜಂಕ್ಷನ್ನಿಂದ ಶಾಲಿನಿ ಜಂಕ್ಷನ್ಗಳಲ್ಲಿ ನೀರು ನಿಂತು ವಾಹನ ಸಂಚಾರ ನಿಧಾನಗತಿಯಲ್ಲಿತ್ತು. ಜಯನಗರದ ಕಾರ್ಮೆಲ್ ಕಾನ್ವೆಂಟ್ ಬಸ್ನಿಲ್ದಾಣದ ಬಳಿ ಮರ ಬಿದ್ದು ತಿಲಕ್ನಗರದ ಕಡೆಗಿನ ಸಂಚಾರ ಸ್ಥಗಿತಗೊಂಡಿತ್ತು.

ವನ್ನಾರಪೇಟೆಯಲ್ಲಿ 3.1 ಸೆಂ.ಮೀ, ಪಟ್ಟಾಭಿರಾಮನಗರದಲ್ಲಿ 2.8 ಸೆಂ.ಮೀ, ದೊರೆಸಾನಿಪಾಳ್ಯದಲ್ಲಿ 2.75 ಸೆಂ.ಮೀ, ಕೋರಮಂಗಲ, ದೊಡ್ಡಬಿದಿರೆಕಲ್ಲು, ಕೋಣನಕುಂಟೆಯಲ್ಲಿ ತಲಾ 2 ಸೆಂ.ಮೀ, ಹೆಮ್ಮಿಗೆಪುರ, ವಿಶ್ವೇಶ್ವರ ಪುರ, ವಿದ್ಯಾಪೀಠ, ಅರಕೆರೆಯಲ್ಲಿ ತಲಾ ಒಂದು ಸೆಂ.ಮೀ ಮಳೆಯಾಗಿದೆ.

ಹೇರೋಹಳ್ಳಿ, ಮಹಾಲಕ್ಷ್ಮಿ ಲೇಔಟ್, ಗಂಗಾನಗರ, ಮನೋರಾಯನಪಾಳ್ಯ, ಕುಶಾಲನಗರ, ಸುಬ್ರಹ್ಮಣ್ಯನಗರ, ಲಕ್ಷ್ಮೀದೇವಿನಗರ, ಕಮ್ಮನಹಳ್ಳಿ, ರಾಮಸ್ವಾಮಿಪಾಳ್ಯ, ಕಾವಲ್ಭೈರಸಂದ್ರ ಸುತ್ತಮುತ್ತಲಿನ ಪ್ರದೇಶದಲ್ಲಿ ತುಂತುರು ಮಳೆಯಾಯಿತು.

ಏಪ್ರಿಲ್ 29ರಿಂದ ಮೇ 1ರ ಸಂಜೆಯವರೆಗೆ ನಗರದಲ್ಲಿ ಒಟ್ಟು 376 ಮರಗಳು ಧರೆಗುರುಳಿದ್ದು, 318 ಮರಗಳನ್ನು ತೆರವು ಮಾಡಲಾಗಿದೆ. 981 ರೆಂಬೆ–ಕೊಂಬೆಗಳು ಬಿದ್ದಿದ್ದು, ಅದರಲ್ಲಿ 799 ರೆಂಬೆ–ಕೊಂಬೆಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಬಿಎ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.