ಬೆಂಗಳೂರು: ಹೆಸರಘಟ್ಟ ರಸ್ತೆಯ ಹಾವನೂರು ಬಡಾವಣೆಯ ಎಂ.ಬಿ.ಜ್ಯೂವೆಲರ್ಸ್ನ ಮಳಿಗೆಯಲ್ಲಿ 70 ಕೆ.ಜಿ ಬೆಳ್ಳಿ ಆಭರಣ ಹಾಗೂ ನಗದು ಸೇರಿದಂತೆ ಅಂದಾಜು ₹1.20 ಕೋಟಿ ಮೌಲ್ಯದ ವಸ್ತುಗಳನ್ನು ಕಳ್ಳರು ದರೋಡೆ ಮಾಡಿ ಪರಾರಿ ಆಗಿದ್ದಾರೆ.

ಹಾವನೂರು ಬಡಾವಣೆಯ ಆರ್ಎಸ್ಕೆ ವಾಣಿಜ್ಯ ಸಮುಚ್ಚಯದಲ್ಲಿ ಎಂ.ಬಿ.ಜ್ಯೂವೆಲರ್ಸ್ಗೆ ಸೇರಿದ ಮಳಿಗೆಯಿದೆ. ಈ ಮಳಿಗೆಗೆ ಹೊಂದಿಕೊಂಡಂತೆಯೇ ಹಿಂಬದಿಯಲ್ಲಿ ಸೆರಾಮಿಕ್ಸ್ ಅಂಗಡಿಯ ಗೋದಾಮು ಇದ್ದು, ಏ.27ರಂದು ರಾತ್ರಿ ಕಳ್ಳರು ಸೆರಾಮಿಕ್ಸ್ ಗೋದಾಮಿನ ರೋಲಿಂಗ್ ಶೆಟರ್ಗೆ ಹಾಕಲಾಗಿದ್ದ ಬೀಗ ಒಡೆದು, ಗೋದಾಮಿನ ಒಳ ಭಾಗದಿಂದ ಚಿನ್ನಾಭರಣ ಮಳಿಗೆಯ ಗೋಡೆ ಕೊರೆದು ಒಳಗೆ ನುಗ್ಗಿ ಬೆಳ್ಳಿ ಸಾಮಗ್ರಿ ಹಾಗೂ ನಗದು ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದಾರೆ ಎಂದು ಪೊಲೀಸರು ಹೇಳಿದರು.

ಚಿನ್ನಾಭರಣ ಮಳಿಗೆ ಮಾಲೀಕ ಜೆ.ಮಹೇಂದ್ರಕುಮಾರ್ ಅವರು ಏ.27ರಂದು ವಹಿವಾಟು ಮುಗಿದ ಬಳಿಕ ಅಂಗಡಿಯ ಬಾಗಿಲು ಮುಚ್ಚಿ ಮನೆಗೆ ಹೋಗಿದ್ದರು. ಏ.28ರಂದು ಬೆಳಿಗ್ಗೆ ಅಂಗಡಿಗೆ ಬಂದಾಗ ಕಳವು ನಡೆದಿರುವುದು ಗೊತ್ತಾಗಿದೆ.

ಆರ್ಎಸ್ಕೆ ವಾಣಿಜ್ಯ ಸಮುಚ್ಚಯದಲ್ಲಿ ಮಹೇಂದ್ರಕುಮಾರ್ ಅವರು ಕಳೆದ 14 ವರ್ಷಗಳಿಂದ ಚಿನ್ನಾಭರಣ ಮಳಿಗೆ ಇಟ್ಟುಕೊಂಡಿದ್ದಾರೆ. ಹಗಲು ವೇಳೆಯಲ್ಲಿ ಮಾತ್ರ ಮಳಿಗೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಇರುತ್ತಿದ್ದರು. ಮಳಿಗೆಯ ಒಳ ಭಾಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ, ಅವರು ತಾಂತ್ರಿಕ ದೋಷದ ಕಾರಣಕ್ಕೆ ಸ್ಥಗಿತ ಗೊಂಡಿದ್ದವು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.