ಬೆಂಗಳೂರು: ಕಂಪನಿ ಕಡೆಯಿಂದಲೇ ಭೋಗ್ಯಕ್ಕೆ ಮನೆಯನ್ನು ಕೊಡಿಸುವುದಾಗಿ ನಂಬಿಸಿ ಹಲವರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಪ್ರಕರಣವೊಂದು ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆ ಆಗಿದೆ.

‘ಜೋನ್ಸ್ ಅಸೆಟ್ ಮ್ಯಾನೇಜ್ಮೆಂಟ್’ ಹೆಸರಿನ ಮಧ್ಯವರ್ತಿ ಕಂಪನಿಯ ಮಾಲೀಕ ಸ್ಟೀಫನ್ ಆರ್ಥರ್ ಜೋನ್ಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್) ಸೆಕ್ಷನ್ 316((2), 318(4) ಅಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ.

ಹೆಣ್ಣೂರು ಮುಖ್ಯರಸ್ತೆಯ ನಿವಾಸಿ ಡಿ. ಕ್ಲಿಫರ್ಡ್ ರಾಯನ್ ದೂರು ನೀಡಿದ್ದಾರೆ. ಕ್ಲಿಫರ್ಡ್ ಅಲ್ಲದೆ ಆರ್.ಮಂಗಳಾ, ಎ.ರವಿಕುಮಾರ್, ಎಸ್.ಪ್ರಕಾಶ್ ಸೇರಿದಂತೆ ಸುಮಾರು 300 ಜನರಿಂದ ಹಣ ಪಡೆದು ಸ್ಟೀಫನ್ ಜೋನ್ಸ್ ವಂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಯನ್ ಅವರು 2025ರಲ್ಲಿ ಬಾಡಿಗೆಗೆ ಮನೆ ಹುಡುಕಾಟ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಜಾನ್ಸ್ ಅಸೆಟ್ ಮ್ಯಾನೇಜ್ಮೆಂಟ್ನ ಅಬ್ದುಲ್ ಹಾಗೂ ವ್ಯವಸ್ಥಾಪಕ ಸವಿತಾ ಪರಿಚಯವಾಗಿತ್ತು.ಕಂಪನಿ ಕಡೆಯಿಂದಲೇ ಭೋಗ್ಯಕ್ಕೆ ಮನೆ ಕೊಡಿಸುವುದಾಗಿ ನಂಬಿಸಿದ್ದರು. ಎಚ್ಡಿಎಫ್ಸಿ ಬ್ಯಾಂಕ್ನಲ್ಲಿದ್ದ ಜೋನ್ಸ್ ಪ್ರಾಪರ್ಟಿ ಮ್ಯಾನೇಜ್ಮೆಂಟ್ನ ಬ್ಯಾಂಕ್ ಖಾತೆಗೆ ವಿವಿಧ ಹಂತದಲ್ಲಿ ಆನ್ಲೈನ್ ಮೂಲಕ ₹21 ಲಕ್ಷವನ್ನು ವರ್ಗಾವಣೆ ಮಾಡಿದ್ದರು. 2025ರ ಆಗಸ್ಟ್ 12ರಂದು ಜೋನ್ಸ್ ಪ್ರಾಪರ್ಟಿ ಕಂಪನಿಯು ಮನೆಯ ಅಸಲಿ ಮಾಲೀಕರಾದ ರಾಜು ಬೆನೆಡಿಕ್ಟ್ಗೆ ಬಾಡಿಗೆ ಹಣ ನೀಡುವುದಾಗಿ ಒಪ್ಪಂದ ಮಾಡಿಕೊಂಡಿತ್ತು. ಅದಾದ ಮೇಲೆ ರಾಯನ್ ಕುಟುಂಬವು ಬಾಡಿಗೆ ಮನೆಗೆ ತೆರಳಿ ವಾಸವಿತ್ತು. 2026ರ ಮೇ 1ರಂದು ರಾಜು ಬೆನೆಡಿಕ್ಟ್ ಅವರು ರಾಯನ್ಗೆ ಕರೆ ಮಾಡಿ ಕಳೆದ ಆರು ತಿಂಗಳಿಂದ ಜೋನ್ಸ್ ಪ್ರಾಪರ್ಟಿ ಕಡೆಯಿಂದ ಬಾಡಿಗೆ ಪಾವತಿ ಆಗಿಲ್ಲ. ತಕ್ಷಣವೇ ಮನೆ ಖಾಲಿ ಮಾಡುವಂತೆ ಸೂಚಿಸಿದ್ದರು ಎಂಬ ದೂರು ಆಧರಿಸಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಆತಂಕಗೊಂಡಿದ್ದ ಬಾಡಿಗೆದಾರ ರಾಯನ್ ಅವರು ಕಂಪನಿಯ ಮಾಲೀಕರನ್ನು ವಿಚಾರಿಸಲು ಕಚೇರಿ ಬಳಿಗೆ ತೆರಳಿದ್ದರು. ಅಲ್ಲಿ ಯಾರೂ ಇರಲಿಲ್ಲ. ಕರೆಯನ್ನೂ ಸ್ವೀಕರಿಸಿರಲಿಲ್ಲ. ಬಳಿಕ ಠಾಣೆಗೆ ದೂರು ನೀಡಿದ್ದರು ಎಂದು ಮೂಲಗಳು ಹೇಳಿವೆ.

ತಲೆಮರೆಸಿಕೊಂಡಿರುವ ಆರೋಪಿ: ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿ ತಲೆಮರೆಸಿಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-4-1003253012

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.