ಬೆಂಗಳೂರು: ಮನೆಗೆ ನುಗ್ಗಿ ಚಿನ್ನದ ಆಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಪರಾರಿ ಆಗುತ್ತಿದ್ದ ಬಾಲಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಕೋಣನಕುಂಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಾಳೇನ ಅಗ್ರಹಾರ ಒಂದನೇ ಕ್ರಾಸ್ ನಿವಾಸಿ ಎಸ್.ಪುನೀತ್ ಕುಮಾರ್ ಅಲಿಯಾಸ್ ಅಭಿ (22),ಕೆಂಪೇಗೌಡ ಬಡಾವಣೆಯ ಶಶಿಕುಮಾರ್ (41), ತೆಲಂಗಾಣ ರಾಜ್ಯದ ಅಕ್ಷಯ್ (21) ಬಂಧಿತರು. ಇದೇ ಪ್ರಕರಣದಲ್ಲಿ ಮೊದಲ ಆರೋಪಿ ಬಾಲಕ ಆಗಿದ್ದು, ಆತನನ್ನು ಬಂಧಿಸಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಬಂಧಿತರಿಂದ ₹14 ಲಕ್ಷ ಮೌಲ್ಯದ 113 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಗೊಟ್ಟಿಗೆರೆ ಶಂಕರ್ನಾಗ್ ರಸ್ತೆಯ ನಿವಾಸಿ ರೇಣುಕಾ ಮನೆಯಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದರು. ರೇಣುಕಾ ನೀಡಿದ ದೂರಿನ ಮೇಲೆಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿ ಆಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.

ಮಾರ್ಚ್ 13ರಂದು ರೇಣುಕಾ ಅವರು ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಕೀ ಅನ್ನು ಕಿಟಕಿ ಬಳಿ ಇಟ್ಟು ತೆರಳಿದ್ದರು. ಕಿಟಕಿಯ ಬಳಿ ಕೀ ಇರುವುದನ್ನು ಗಮನಿಸಿದ್ದ ಆರೋಪಿಗಳು, ಬಾಗಿಲು ತೆರೆದು ಎರಡು ಜೊತೆ ಚಿನ್ನದ ಓಲೆ, ಎರಡು ಚಿನ್ನದ ಉಂಗುರ, ಎರಡು ಬೆಳ್ಳಿಯ ನಾಣ್ಯಗಳು, ನಗದು ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

ಕೆ.ಎಸ್. ಬೃಂದಾಶ್ರೀ ಎಂಬುವರ ಮನೆಗೂ ಇದೇ ಆರೋಪಿಗಳು ನುಗ್ಗಿ ಆಭರಣ ದೋಚಿ ಪರಾರಿ ಆಗಿದ್ದರು. ಮನೆಯಲ್ಲಿದ್ದ ಎರಡು ಜೊತೆ ಚಿನ್ನದ ಓಲೆ, ಒಂದು ಚಿನ್ನದ ಉಂಗುರ, ಒಂದು ನೆಕ್ಲೇಸ್ ಕಳವು ಮಾಡಿದ್ದರು. ಕಾರ್ಯಕ್ರಮಕ್ಕೆಂದು ಬೃಂದಾಶ್ರೀ ಕುಟುಂಬಸ್ಥರು ಮೈಸೂರಿಗೆ ತೆರಳಿದ್ದ ವೇಳೆ ಆರೋಪಿಗಳು ಕಳ್ಳತನ ಮಾಡಿದ್ದರು ಎಂದು ಪೊಲೀಸರು ಹೇಳಿದರು.

ಬಂಧಿತರ ವಿರುದ್ಧ ಬೆಂಗಳೂರಿನ ಕೋಣನಕುಂಟೆ ಹಾಗೂ ತೆಲಂಗಾಣದ ಮಂಜಿರಿಯಲ್ ಟೌನ್ ಪೊಲೀಸ್ ಠಾಣೆಯಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.