ಬೆಂಗಳೂರು: ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಸಂಪರ್ಕಿಸುವ ಅತಿವೇಗದ (ಹೈಸ್ಪೀಡ್–ಬುಲೆಟ್) ರೈಲು ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸಿದ ಮೂರು ತಿಂಗಳ ನಂತರ ಭಾರತೀಯ ರೈಲ್ವೆಯು ಎರಡೂ ಮಾರ್ಗಗಳನ್ನು ಅಂತಿಮಗೊಳಿಸಿ ನಕ್ಷೆ ಬಿಡುಗಡೆ ಮಾಡಿದೆ.

ಬಜೆಟ್ನಲ್ಲಿ ಸೇರ್ಪಡೆಯಾಗದಿದ್ದರೂ ಬೆಂಗಳೂರು-ಮೈಸೂರು ಬುಲೆಟ್ ರೈಲು ಮಾರ್ಗದ ಅಂದಾಜು ನಕ್ಷೆಯನ್ನೂ ಸಿದ್ಧಪಡಿಸಲಾಗಿದೆ.

ನಕ್ಷೆಯ ಪ್ರಕಾರ, ಬೆಂಗಳೂರು-ಚೆನ್ನೈ ಮಾರ್ಗವು (306 ಕಿಮೀ) ಬೈಯಪ್ಪನಹಳ್ಳಿಯಿಂದ ಪ್ರಾರಂಭವಾಗಲಿದೆ. ವೈಟ್ಫೀಲ್ಡ್, ಕೋಡಿಹಳ್ಳಿ (ಹೊಸಕೋಟೆ ಬಳಿ) ಮತ್ತು ಕೋಲಾರ ಮೂಲಕ ಆಂಧ್ರ ಪ್ರದೇಶವನ್ನು ಪ್ರವೇಶಿಸಲಿದೆ. ಚಿತ್ತೂರು, ಪರಂದೂರು ಮತ್ತು ಪೂನಮಲ್ಲೆ ಮೂಲಕ ಹಾದುಹೋಗಲಿದೆ. ನಂತರ ಚೆನ್ನೈ ಸೆಂಟ್ರಲ್ನಲ್ಲಿ ಕೊನೆಗೊಳ್ಳಲಿದೆ.

ತಮಿಳುನಾಡು ಸರ್ಕಾರ ಚೆನ್ನೈಗೆ ಹತ್ತಿರವಾಗಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಯೋಜಿಸಿರುವ ಕಾಂಚೀಪುರಂ ಜಿಲ್ಲೆಯ ಪರಂದೂರು ಈ ರೈಲು ಯೋಜನೆಯಲ್ಲಿ ಮೊದಲು ಇರಲಿಲ್ಲ. ಪ್ರಸ್ತುತ ಬಿಡುಗಡೆ ಮಾಡಲಾದ ಮಾರ್ಗದಲ್ಲಿ ಸೇರ್ಪಡೆ ಮಾಡಲಾಗಿದೆ.

ಬೆಂಗಳೂರು–ಹೈದರಾಬಾದ್ ಮಾರ್ಗವು ಹಿಂದೂಪುರ, ದುದ್ದೇಬಂಡಾ (ಪೆನುಕೊಂಡ ಬಳಿ), ಅನಂತಪುರ, ಗೂಟಿ, ಧೋನೆ (ದ್ರೋಣಾಚಲಂ), ಕರ್ನೂಲ್, ಮನ್ನನೂರು (ನಾಗರ್ಕರ್ನೂಲ್), ಭಾರತ್ ಸಿಟಿ (ಹೈದರಾಬಾದ್ ಬಳಿಯ ಯೋಜಿತ ಪಟ್ಟಣ) ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳ (ಶಂಶಾಬಾದ್) ಮೂಲಕ ಹಾದು ಹೋಗಿ ಹೈದರಾಬಾದ್ನಲ್ಲಿ ಕೊನೆಗೊಳ್ಳಲಿದೆ.

ಬೆಂಗಳೂರಿನ ಪ್ರಮುಖ ಸಾರಿಗೆ ಕೇಂದ್ರವಾದ ಮೆಜೆಸ್ಟಿಕ್ ಅನ್ನು ಎರಡೂ ಕಾರಿಡಾರ್ಗಳು ಸಂಪರ್ಕಿಸದೇ ನಗರದ ಹೊರಗಿನಿಂದಲೇ ಸಂಚರಿಸುತ್ತಿರುವುದು ರೈಲ್ವೆ ಪ್ರಯಾಣಿಕರಿಗೆ ನಿರಾಸೆ ತಂದಿದೆ.

ಮೈಸೂರು ಮಾರ್ಗ: ಬೆಂಗಳೂರು-ಮೈಸೂರು ಮಾರ್ಗವು (157.34 ಕಿ.ಮೀ.) ಮಂಡ್ಯ, ರಾಮನಗರ, ಕೆಂಗೇರಿ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ (ಹುಸ್ಕೂರು ಬಳಿ) ನಿಲ್ದಾಣಗಳನ್ನು ಒಳಗೊಂಡಿದೆ. ರಾಮನಗರ ನಿಲ್ದಾಣವು ಮೊದಲು ಇರಲಿಲ್ಲ. ಆಮೇಲೆ ಸೇರ್ಪಡೆ ಮಾಡಲಾಗಿದ್ದು, ಮೈಸೂರು ಮಾರ್ಗವು ಕೋಡಿಹಳ್ಳಿಯಲ್ಲಿ ಚೆನ್ನೈ ಮಾರ್ಗವನ್ನು ಸಂಧಿಸಲಿದೆ.

ಹೈದರಾಬಾದ್-ಪುಣೆ ಮಾರ್ಗವು ಕಲಬುರಗಿಯಲ್ಲಿ ನಿಲ್ದಾಣವನ್ನು ಹೊಂದಿರುತ್ತದೆ. ಎಲ್ಲ ಮಾರ್ಗಗಳಿಗೂ ಸಮೀಕ್ಷೆಗಳು ನಡೆಯುತ್ತಿವೆ ಎಂದು ಯೋಜನೆಗಳನ್ನು ಕಾರ್ಯಗತಗೊಳಿಸುವ ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮ ಲಿಮಿಟೆಡ್ನ (ಎನ್ಎಚ್ಎಸ್ಆರ್ಸಿಎಲ್) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಸ್ಥಳ ದತ್ತಾಂಶ, ಸಂಚಾರ, ಪರಿಸರದ ಮೇಲೆ ಬೀರುವ ಪರಿಣಾಮದ ಬಗ್ಗೆ ಮೌಲ್ಯಮಾಪನ ಅಧ್ಯಯನಗಳನ್ನು ಒಳಗೊಂಡಿರುವ ಲಿಡರ್ (ಎಲ್ಐಡಿಎಆರ್) ಸಮೀಕ್ಷೆಗಳು ಪೂರ್ಣಗೊಂಡಿವೆ ಎಂದು ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು ತಿಳಿಸಿದ್ದಾರೆ.

‘ಅಗತ್ಯವಿರುವ ಜಮೀನುಗಳನ್ನು ಗುರುತಿಸಲಾಗಿದೆ. ಕೋಲಾರಕ್ಕೆ ಒಂದು ನಿಲ್ದಾಣ ಸಿಗುತ್ತದೆ. 2027-28ರ ಸುಮಾರಿಗೆ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.