ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಜಯಮಹಲ್ ಪ್ಯಾಲೆಸ್ ಹೋಟೆಲ್ ಸಭಾಂಗಣದಲ್ಲಿ ‘ದಿ ಇಂಡಿಯನ್ ಆರ್ಟಿಸಾನ್ಸ್ ಹಾಟ್’ (ಟಿಐಎಎಚ್) ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇ 1ಕ್ಕೆ ಆರಂಭಗೊಳ್ಳಲಿದೆ.

ಮೇ 10ರವರೆಗೆ ಪ್ರದರ್ಶನ ಇರಲಿದ್ದು,ದೇಶದಾದ್ಯಂತ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸಲು, ಪ್ರಚಾರ ಮಾಡಲು ಮತ್ತು ಮಾರಾಟ ಮಾಡಲು ವೇದಿಕೆಯಾಗಲಿದೆ. ಉತ್ಪನ್ನಗಳ ಪ್ರದರ್ಶನ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಮತ್ತು ಭಾರತದ ವಿವಿಧ ಭಾಗಗಳಿಂದ ರುಚಿಕರವಾದ ಭಕ್ಷ್ಯಗಳನ್ನು ಪೂರೈಸುವ ಆಹಾರ ಮಳಿಗೆಗಳು ಹಬ್ಬದ ವಾತಾವರಣವನ್ನು ಸೃಷ್ಟಿಸಲಿವೆ.

ಪ್ರಮುಖವಾಗಿ ಚನ್ನಪಟ್ಟಣದ ಆಟಿಕೆಗಳು, ಉತ್ತರ ಪ್ರದೇಶದ ಖುರ್ಜಾದ ಮಣ್ಣಿನ ಪಾತ್ರೆ ಹಾಗೂ ಆಲಂಕಾರಿಕ ವಸ್ತುಗಳು, ಜೈಪುರದ ನೀಲಿ ಮಡಕೆಗಳು, ಜೈಪುರ ಲೋಹ, ಒಡಿಶಾದ ಕಲ್ಲಿನ ವಿಗ್ರಹಗಳು, ಬೇವಿನ ಮರದ ಪಾತ್ರೆ, ಪಟಚಿತ್ರ, ಬಿಹಾರದ ಮಧುಬನಿ ವರ್ಣಚಿತ್ರಗಳು, ತಮಿಳುನಾಡಿನ ತಂಜಾವೂರು ವರ್ಣಚಿತ್ರ ಪಶ್ಚಿಮ ಬಂಗಾಳದ ಕಾಲಿಘಾಟ್ ವರ್ಣಚಿತ್ರ, ಸೋಲಾ ಹೂವು, ಮಹಾರಾಷ್ಟ್ರದ ರಾಳದ ಕಲೆ, ಸಂಗೀತ ವಾದ್ಯಗಳು, ಆಂಧ್ರ ಪ್ರದೇಶದ ಚರ್ಮದ ಬೊಂಬೆ ಮತ್ತು ದೀಪ, ಆಗ್ರಾದ ಅಮೃತಶಿಲೆ ಕೆತ್ತನೆ, ಮಧ್ಯಪ್ರದೇಶದ ಭೀಲ್ ಚಿತ್ರಕಲೆ, ಕರ್ನಾಟಕದ ಸುರಪುರ ಸುಣ್ಣದ ಕಲೆ, ಹರಿಯಾಣದ ಕಲ್ಲಿನ ಧೂಳಿನ ಚಿತ್ರಕಲೆ, ಮಧ್ಯಪ್ರದೇಶದ ಗೊಂಡ್ ಚಿತ್ರಕಲೆ, ಹರಿಯಾಣದ ಮರದ ಕೆತ್ತನೆ, ಕೇರಳದ ಮರದ ಕೆತ್ತನೆಗಳು ಸೇರಿದಂತೆ ಹಲವು ಸಾಂಪ್ರದಾಯಿಕ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ ಇರಲಿವೆ.

ಪಶ್ಚಿಮ ಬಂಗಾಳದ ಆಕ್ಸಿಡೀಕೃತ ಆಭರಣ, ಕರ್ನಾಟಕದ ಟೆರಾಕೋಟಾ ಆಭರಣ, ಲಂಬಾಣಿ ಆಭರಣ, ಪಶ್ಚಿಮ ಬಂಗಾಳದ ಸಮುದ್ರ ಚಿಪ್ಪು ಮತ್ತು ಮುತ್ತಿನ ಆಭರಣ, ರಾಜಸ್ಥಾನದ ಮೀನಕರಿ ಆಭರಣಗಳು, ಪಂಜಾಬಿ ಚಪ್ಪಲಿಗಳು, ಚರ್ಮದ ಚೀಲಗಳು, ಒಂಟೆ ಚರ್ಮದ ಚಪ್ಪಲಿ, ಕೋಲ್ಹಾಪುರಿ ಚಪ್ಪಲಿ, ಕೈಯಿಂದ ತಯಾರಿಸಿದ ಚರ್ಮದ ಚೀಲ, ಗುಜರಾತ್ನ ಪ್ಯಾಚ್ವರ್ಕ್ ಚೀಲ, ಗುಜರಾತ್ನ ಕೈ ಕಸೂತಿ ಚೀಲಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇರಲಿವೆ.

ರಾಜಸ್ಥಾನದ ಅಪ್ಲಿಕ್ ವರ್ಕ್ ಕೈಮಗ್ಗ, ಬಿಳಿ ಖಾದಿ ಟಾಪ್ಸ್, ಬಿಹಾರದ ಬಾಗಲ್ಪುರಿ ಸೀರೆ, ಗುಜರಾತ್ನ ಕಚ್ನ ಅಜರಖ್ ಬಾಂಧನಿ, ಉತ್ತರ ಪ್ರದೇಶದ ಚಿಕನ್ಕಾರಿ, ಒಡಿಶಾದ ಸಂಬಲ್ಪುರ್ ಸೀರೆ, ಪಶ್ಚಿಮ ಬಂಗಾಳದ ಕೈಮಗ್ಗದ ಸೀರೆ, ಜಾಮ್ದಾನಿ ಸೀರೆ, ತೆಲಂಗಾಣದ ಇಕ್ಕತ್ ಸೀರೆ ಮತ್ತು ಉಡುಗೆಗಳು, ಕಾಶ್ಮೀರದ ಕೈಮಗ್ಗ, ಮಿರ್ಜಾಪುರದ ಕಾರ್ಪೆಟ್ಗಳು, ಡಾರಿಸ್ ಮತ್ತು ಕಂಬಳಿ, ಉತ್ತರ ಪ್ರದೇಶದ ಸೀತಾಪುರ ಕಂಬಳಿ, ಕರ್ನಾಟಕದ ಇಳಕಲ್ ಸೀರೆ, ತಮಿಳುನಾಡಿನ ಕಾಂಚೀಪುರಂ ಸೀರೆಗಳು ಆಕರ್ಷಿಸಲಿವೆ.

ರಾಜಸ್ಥಾನದ ಪ್ರಾಚೀನ ಪೀಠೋಪಕರಣ, ಆಂಧ್ರ ಪ್ರದೇಶದ ತಿರುಪತಿ ಪ್ರಾಚೀನ ಕೆತ್ತನೆಗಳು, ಪಶ್ಚಿಮ ಬಂಗಾಳದ ಗೋಲ್ಡನ್ ಗ್ರಾಸ್ ಮ್ಯಾಟ್, ಉತ್ತರ ಪ್ರದೇಶದ ಸಹಾರನ್ಪುರ ಪೀಠೋಪಕರಣ ಇರಲಿವೆ.

ರಾಜಸ್ಥಾನದ ಜನಪದ ಗಾಯಕ ಉಸ್ತಾದ್ ಲತೀಫ್ ಖಾನ್ ಅವರು 10 ದಿನ ಗಾಯನ ಕಾರ್ಯಕ್ರಮ ನೀಡಲಿದ್ದಾರೆ. ಪ್ರತಿದಿನ ಬೆಳಿಗ್ಗೆ 10.30ರಿಂದ ರಾತ್ರಿ 8.30ರವರೆಗೆ ಸಾರ್ವಜನಿಕರಿಗೆ ತೆರೆದಿರಲಿದೆ ಎಂದು ‘ದಿ ಇಂಡಿಯನ್ ಆರ್ಟಿಸಾನ್ಸ್ ಹಾಟ್’ ಸಹ ಸಂಸ್ಥಾಪಕರಾದ ನಾಗರಾಜ್ ಹುಂಡೆಕರ್, ಅಹ್ಮದ್ ಖಾನ್ ತಿಳಿಸಿದರು.

ಮಾಹಿತಿಗಾಗಿ 9880331685, 988650 7007, 9972670107 ಸಂಪರ್ಕಿಸಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-4-691404708

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.