ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳು ಎಂಜಿನಿಯರ್ ಒಬ್ಬರಿಗೆ ₹2.73 ಕೋಟಿ ಮತ್ತು ಆಭರಣ ಮಳಿಗೆಯ ಗ್ರಾಹಕರೊಬ್ಬರಿಗೆ ₹1.18 ಕೋಟಿ ವಂಚಿಸಿರುವ ಘಟನೆ ನಡೆದಿದೆ

ಬೆಂಗಳೂರು: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡಲಾಗುವುದು ಎಂಬುದಾಗಿ ಎಂಜಿನಿಯರ್ಗೆ ನಂಬಿಸಿದ ಸೈಬರ್ ವಂಚಕರು, ಅವರಿಂದ ₹2.73 ಕೋಟಿ ದೋಚಿದ್ದಾರೆ. ಈ ಬಗ್ಗೆ ವೈಟ್ಫೀಲ್ಡ್ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಕೃಷ್ಣ ರೆಡ್ಡಿ ಲೇಔಟ್ನಲ್ಲಿ ನೆಲಸಿರುವ 54 ವರ್ಷ ಎಂಜಿನಿಯರ್, ಆನ್ಲೈನ್ ಮೂಲಕ ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ಅಪರಾಧ ಠಾಣೆ ಪೊಲೀಸರು ತಿಳಿಸಿದರು.

‘ಫೆ. 2ರಂದು ದೂರುದಾರರ ಮೊಬೈಲ್ ಸಂಖ್ಯೆಯನ್ನು ‘ಸ್ಟಾಕ್ ಟ್ರೇಡಿಂಗ್ ವರ್ಲ್ಡ್ ಬಿ–4’ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ಗೆ ಸೈಬರ್ ವಂಚಕರು ಸೇರ್ಪಡೆ ಮಾಡಿದ್ದರು. ಆ ಗ್ರೂಪ್ನಲ್ಲಿ ‘ಐಪಿಒ ಸ್ಟಾಕ್ ಟ್ರೇಡಿಂಗ್’ ಬಗ್ಗೆ ವಂಚಕರು ಚರ್ಚಿಸಿದ್ದರು. ಹೂಡಿಕೆ ಮಾಡಿದರೆ ಅಧಿಕ ಲಾಭ ಬರಲಿದೆ ಎಂಬುದಾಗಿಯೂ ಹೇಳಿದ್ದರು. ನಂತರ, ಅದೇ ಗ್ರೂಪ್ನಲ್ಲಿ ಲಿಂಕ್ವೊಂದನ್ನು ಕಳುಹಿಸಿ ಜಾಯಿನ್ ಆಗುವಂತೆ ದೂರುದಾರರಿಗೆ ಸೂಚಿಸಿದ್ದರು. ಆರೋಪಿಗಳ ಸೂಚನೆಯಂತೆ ‘ಮಾರ್ಕ್ ಸಿಎಂ ಮೊಬೈಲ್ ಆ್ಯಪ್’ಗೆ ಎಂಜಿನಿಯರ್ ಲಾಗಿನ್ ಆಗಿದ್ದರು’ ಎಂದು ಪೊಲೀಸರು ಹೇಳಿದರು.

‘ಅದಾದ ಮೇಲೆ ಸೈಬರ್ ವಂಚಕರು ದೇಶದ ಬೇರೆ ಬ್ಯಾಂಕ್ನಲ್ಲಿ ತೆರೆದಿದ್ದ 32 ನಕಲಿ ಖಾತೆಗಳ ವಿವರವನ್ನು ದೂರುದಾರರಿಗೆ ಕಳುಹಿಸಿದ್ದರು. ದೂರುದಾರರು ತಮ್ಮ ಎರಡು ಬ್ಯಾಂಕ್ ಖಾತೆಗಳಿಂದ ಆ ಖಾತೆಗಳಿಗೆ ಹಂತ ಹಂತವಾಗಿ ₹ 2.73 ಕೋಟಿಯನ್ನು ಆರ್ಟಿಜಿಎಸ್, ನೆಫ್ಟ್ ಹಾಗೂ ಐಎಂಪಿಎಸ್ ಮೂಲಕ ವರ್ಗಾವಣೆ ಮಾಡಿದ್ದರು’ ಎಂದು ಮೂಲಗಳು ಹೇಳಿವೆ.

‘ಹೂಡಿಕೆ ಮಾಡಿದ್ದ ಹಣ ವಾಪಸ್ ಪಡೆಯಲು ಎಂಜಿನಿಯರ್ ಇತ್ತೀಚೆಗೆ ಯತ್ನಿಸಿದ್ದರು. ಹಣ ವಾಪಸ್ ಪಡೆಯಬೇಕಾದರೆ ಇನ್ನೂ ಹೆಚ್ಚಿನ ಹೂಡಿಕೆ ಮಾಡಬೇಕು ಎಂಬುದಾಗಿ ವಂಚಕರು ಸೂಚಿಸಿದ್ದರು. ಬಳಿಕ ಸೈಬರ್ ವಂಚಕರು ಸಂಪರ್ಕಕ್ಕೆ ಸಿಕ್ಕಿಲ್ಲ. ಆಗ ವಂಚನೆ ನಡೆದಿ ರುವುದು ಗೊತ್ತಾಗಿ ದೂರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಬುಲಿಯನ್ ವ್ಯವಹಾರ’: ₹1.18 ಕೋಟಿ ದೋಖಾ

ಬೆಂಗಳೂರು: ‘ಬುಲಿಯನ್ (ಬಂಡವಾಳ ಹೂಡಿಕೆ ಚಿನ್ನ) ವ್ಯವಹಾರದಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಹಾಗೂ ಸುಲಭ ಎಂಬುದಾಗಿ ಗ್ರಾಹಕರೊಬ್ಬರಿಗೆ ನಂಬಿಸಿ, ಅವರಿಂದ ₹1.18 ಕೋಟಿ ಪಡೆದು ವಂಚಿಸಿರುವ ಆಭರಣ ಮಳಿಗೆಯ ಮೂವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲಸೂರು ಕಾರ್ ಸ್ಟ್ರೀಟ್ನ ವಿ.ಕೆ.ಶಶಿಕುಮಾರ್ ಅವರು ನೀಡಿದ ದೂರಿನ ಮೇಲೆ ಬಿನ್ನಿಪೇಟೆಯ ಪ್ರಕಾಶ್ ಚಂದ್, ಅವರ ಪತ್ನಿ ಭಾವಿಕಾ ಹಾಗೂ ಅವರ ಸಹೋದರ ಜೆ.ಭರತ್ ಕುಮಾರ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಬಿನ್ನಿಪೇಟೆಯಲ್ಲಿ ಮೂವರು ಚಿನ್ನ ಹಾಗೂ ಬೆಳ್ಳಿಯ ಆಭರಣ ಮಾರಾಟ ಮಾಡುತ್ತಿದ್ದಾರೆ. ಚಿನ್ನ ಹಾಗೂ ಬೆಳ್ಳಿಯ ವ್ಯವಹಾರದಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಹಾಗೂ ಹೆಚ್ಚು ಲಾಭದಾಯಕವಾಗಿದೆ ಎಂದು ದೂರುದಾರರಿಗೆ ನಂಬಿಸಿದ್ದರು. ಅಲ್ಲದೇ, ಚಿನ್ನ, ಬೆಳ್ಳಿಯ ಮೇಲೆ ಹೂಡಿಕೆ ಮಾಡುವಂತೆಯೂ ಪ್ರೇರೇಪಿಸಿದ್ದರು. ‘ಮಾರುಕಟ್ಟೆಯಲ್ಲಿ ಪ್ರತಿದಿನ ಚಿನ್ನದ ಮೇಲಿನ ಬೆಲೆ ಏರಿಳಿತವಾಗುತ್ತಿದ್ದು, ಬೆಲೆ ಕಡಿಮೆ ಇರುವಾಗ ನಿಮ್ಮ ಪರವಾಗಿ ನಾವೇ ಚಿನ್ನವನ್ನು ಖರೀದಿ ಮಾಡಿ ನಿಮಗೆ ನೇರವಾಗಿ ಭೌತಿಕ ಚಿನ್ನವನ್ನು ಒದಗಿಸುತ್ತೇವೆ ಎಂಬುದಾಗಿ ದೂರುದಾರರಿಗೆ ನಂಬಿಸಿದ್ದರು’ ಎಂದು ಶಶಿಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಿರಂತರ ಒತ್ತಡ: ‘ಚಿನ್ನದ ವ್ಯವಹಾರದಲ್ಲಿ ಅಪಾರ ಅನುಭವ ಇದೆ. ಉತ್ತಮ ದರದಲ್ಲಿ ಚಿನ್ನ ಖರೀದಿಸಿ ಕೊಡುತ್ತೇವೆ ಎಂಬುದಾಗಿಯೂ ಆರೋಪಿಗಳು ನಂಬಿಸಿದ್ದರು. ಆರೋಪಿಗಳ ಮಾತು ನಂಬಿದ್ದ ಶಶಿಕುಮಾರ್ ಅವರು ಚಿನ್ನದ ಮೇಲೆ ಹೂಡಿಕೆ ಮಾಡಿದ್ದರು. ಆನ್ಲೈನ್ ಮೂಲಕ ₹1.18 ಕೋಟಿಯನ್ನು ಹಂತಹಂತವಾಗಿ ವರ್ಗಾವಣೆ ಮಾಡಿದ್ದರು. ಅದಾದ ಮೇಲೆ ಹಣವನ್ನು ವಾಪಸ್ ನೀಡದೇ ವಂಚಿಸಲಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-4-1486285579

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.