ಬೆಂಗಳೂರು: ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡ ಗೆದ್ದ ಬೆನ್ನಲ್ಲೇ ರಸ್ತೆಗಿಳಿದು ನಿಯಮ ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, 87 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಪೊಲೀಸರ ಕಟ್ಟೆಚ್ಚರದ ನಡುವೆಯೂ ವ್ಹೀಲೆ, ತ್ರಿಬಲ್ ರೈಡಿಂಗ್ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ 83 ದ್ವಿಚಕ್ರ ವಾಹನ, ಮೂರು ಆಟೊ, ನಾಲ್ಕು ಚಕ್ರದ ಒಂದು ವಾಹನವನ್ನು ಪೊಲೀಸರು ಜಪ್ತಿ ಮಾಡಿದರು.

ಐಪಿಎಲ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಆರ್ಸಿಬಿ ಅಭಿಮಾನಿಗಳು ಎಲ್ಲೆಂದರಲ್ಲಿ ಸಂಭ್ರಮಾಚರಣೆ ಮಾಡಬಾರದು. ಪಟಾಕಿ ಸಿಡಿಸುವುದು, ಮೆರವಣಿಗೆ ಸೇರಿದಂತೆ ವಿಜಯೋತ್ಸವದ ಇತರೆ ಚಟುವಟಿಕೆಗಳನ್ನು ನಡೆಸದಂತೆ ಪೊಲೀಸರು ಮುಂಚಿತವಾಗಿ ಮಾರ್ಗಸೂಚಿ ಹೊರಡಿಸಿದ್ದರು.

ಆದರೂ ಯುವಕರ ಪಡೆಯು ಪೊಲೀಸರ ಮಾರ್ಗಸೂಚಿ ಲೆಕ್ಕಿಸದೆ ನಗರದ ವಿವಿಧೆಡೆ ರಸ್ತೆಗಿಳಿದು ಮನಸೋ ಇಚ್ಛೆ ವಾಹನ ಚಲಾಯಿಸುತ್ತಾ ಹುಚ್ಚಾಟ ಮೆರೆಯಿತು. ಕೆಲ ಯುವಕರು ವ್ಹೀಲೆ ಮಾಡುತ್ತಾ ಆರ್ಸಿಬಿ ತಂಡದ ಗೆಲುವನ್ನು ಸಂಭ್ರಮಿಸಿದರು.

ಈ ಮಧ್ಯೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ನಗರದೆಲ್ಲೆಡೆ ಆಯಕಟ್ಟಿನ ಸ್ಥಳಗಳಲ್ಲಿ ನಾಕಾಬಂದಿ ಹಾಕಿ ಕಟ್ಟೆಚ್ಚರ ವಹಿಸಿದ್ದರು. 99 ಕಡೆ ನಾಕಾಬಂದಿ ಹಾಕಲಾಗಿತ್ತು. 2,502 ದ್ವಿಚಕ್ರ ವಾಹನಗಳು, 556 ಆಟೊ, 458 ನಾಲ್ಕು ಚಿಕ್ರದ ವಾಹನಗಳನ್ನು ತಪಾಸಣೆ ಮಾಡಲಾಗಿದೆ.

ಉತ್ತರ ವಿಭಾಗದ 13 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು.

ರಸ್ತೆಗಳಲ್ಲಿ ತಡರಾತ್ರಿ ವ್ಹೀಲೆ ಮಾಡುತ್ತಿದ್ದ 83 ಸವಾರರ ವಿರುದ್ಧ ಪ್ರಕರಣ ದಾಖಲಿಸಿ ಬೈಕ್ಗಳನ್ನು ಜಪ್ತಿ ಮಾಡಿದರು. ಅಲ್ಲದೆ, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವಾಹನಗಳನ್ನು ತಡೆದು ತಪಾಸಣೆ ಮಾಡಿ 3 ಆಟೊ ಹಾಗೂ ಕಾರನ್ನು ವಶಕ್ಕೆ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-4-2126473669

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.