ಬೆಂಗಳೂರು: ನಗು ಬರೀ ಮನರಂಜನೆಯಲ್ಲ, ಅದು ಉತ್ತಮ ಆರೋಗ್ಯ ಮತ್ತು ಸಂತೋಷದ ಬದುಕಿನ ಮೂಲಮಂತ್ರ ಎಂಬ ಸಂದೇಶವನ್ನು ನಗರದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಭಾನುವಾರ ನಡೆದ ಜಾಣಜಾಣೆಯರ ನಗೆ ಉತ್ಸವ ಸಾರಿತು.

ಜಾಣಜಾಣೆಯರ ಸಾಹಿತಿ ಕಲಾವಿದರ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ ನಗೆರಸದ ಸವಿಯನ್ನು ಆಸ್ವಾದಿಸಿದರು.

ಸಂಗೀತ ನಿರ್ದೇಶಕ ಗುರುಕಿರಣ್, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ, ವಕೀಲ ಚಂದ್ರಮೌಳಿ, ಹಾಸ್ಯ ಕಲಾವಿದರಾದ ಮಿಮಿಕ್ರಿ ದಯಾನಂದ್, ಎಂ.ಕೃಷ್ಣೇಗೌಡ, ಗೋಪಿ, ವೈ.ವಿ. ಗುಂಡೂರಾವ್, ಎಂ.ಎಸ್. ನರಸಿಂಹ ಮೂರ್ತಿ, ಟ್ರಸ್ಟಿ ಉದಯ್ ಎಂ., ವಿದುಷಿ ಸುಮಾ ಸುಧೀಂದ್ರ ಪಾಲ್ಗೊಂಡಿದ್ದರು.

‘ಇಂದಿನ ಡಿಜಿಟಲ್ ಯುಗದಲ್ಲಿ ಜನರು ಮೊಬೈಲ್ ಫೋನ್ಗಳ ಪರದೆಗಳಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದು, ಮುಖಾಮುಖಿಯಾಗಿ ಮಾತನಾಡುವ, ಬೆರೆಯುವ ಮತ್ತು ಒಟ್ಟಾಗಿ ನಗುವ ಸಂಸ್ಕೃತಿ ನಿಧಾನವಾಗಿ ಮರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗೆ ಉತ್ಸವವು ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಮಾನವೀಯ ಸಂಬಂಧಗಳ ಮಹತ್ವ ಮತ್ತು ನಗುವಿನ ಆರೋಗ್ಯಕರ ಪರಿಣಾಮ ನೆನಪಿಸಿದೆ’ ಎಂದು ಅತಿಥಿಗಳು ಹೇಳಿದರು.

ಸಂಗೀತ ನಿರ್ದೇಶಕ ಗುರುಕಿರಣ್ ಕಲಾವಿದರ ಸೇವೆಯನ್ನು ಶ್ಲಾಘಿಸಿದರು. ಐಪಿಎಲ್ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಡ್ರಮ್ಸ್ ದೇವ್ ಅವರ ಪ್ರದರ್ಶನ ಚಪ್ಪಾಳೆ ಗಳಿಸಿತು.

ಸಮಾಜದಲ್ಲಿ ಸಾಹಿತ್ಯ, ಕಲೆ, ಕಲಾವಿದರ ಕಲ್ಯಾಣಕ್ಕಾಗಿ ಜಾಣ ಜಾಣೆಯರ ಸಾಹಿತಿ ಕಲಾವಿದರ ಟ್ರಸ್ಟ್ ಸ್ಥಾಪನೆಯಾಗಿದ್ದು, ಕಾರ್ಯಕ್ರಮದ ಅಂಗವಾಗಿ 60 ಕಲಾವಿದರಿಗೆ ತಲಾ ₹10 ಲಕ್ಷ ಆರೋಗ್ಯ ವಿಮೆಯ ಪಾಲಿಸಿ ವಿತರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-4-1929174656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.