ಬೆಂಗಳೂರು: ನಗರದ ಜಯಮಹಲ್ ಮುಖ್ಯರಸ್ತೆಯಲ್ಲಿರುವ ಗೋಡೆಯೊಂದು ಅಲ್ಲಲ್ಲಿ ಕುಸಿದಿದ್ದು, ಬೀಳುವ ಹಂತದಲ್ಲಿದೆ. ಮಿಲ್ಲರ್ಸ್ ರಸ್ತೆಯಿಂದ ರೈಲ್ವೆ ಕೆಳಸೇತುವೆ ದಾಟಿಕೊಂಡು ಮುಂದೆ ಬಂದರೆ ಕೆಲವು ಕ್ರೀಡಾ ಚಟುವಟಿಕೆ ಇರುವ ಸಂಕೀರ್ಣ ಸಿಗುತ್ತದೆ. ಆ ಸಂಕೀರ್ಣಕ್ಕೆ ಹೊಂದಿಕೊಂಡಂತೆ ಎತ್ತರದ ಗೋಡೆಯನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಸಂಪೂರ್ಣ ಹಳೆಯದಾಗಿದೆ.

ಸುಮಾರು 700 ಮೀಟರ್ವರೆಗೂ ಕಲ್ಲು–ಇಟ್ಟಿಗೆಯ ಗೋಡೆ ಇದ್ದು, ಕೆಲವು ಕಡೆ ಕಲ್ಲು– ಇಟ್ಟಿಗೆಗಳು ಕೆಳಕ್ಕೆ ಬಿದ್ದಿವೆ. ಒಂದು ಕಡೆಯಂತು ದೊಡ್ಡ ಮರ ಗೋಡೆಗೆ ಆತುಗೊಂಡಿದ್ದು, ಯಾವಾಗಲಾದರೂ ಗೋಡೆ ವಾಲಬಹುದು ಎನ್ನುವ ಆತಂಕವಿದೆ.

ಈ ರಸ್ತೆಯಲ್ಲಿ ಪಾದಚಾರಿ ಮಾರ್ಗವೂ ಇದೆ. ಗೋಡೆ ಪಕ್ಕದಲ್ಲಿಯೇ ಜನ ಹಾದು ಹೋಗಬೇಕು. ನಾಲ್ಕೈದು ಕಡೆ ವ್ಯಾಪಾರವನ್ನು ಬೀದಿ ಬದಿ ವ್ಯಾಪಾರಸ್ಥರು ಮಾಡುತ್ತಾರೆ. ಬೇಸಿಗೆಯಾಗಿರುವುದರಿಂದ ಎಳೆನೀರು ಸೇವಿಸಲು ಇಲ್ಲಿಗೆ ಬರುತ್ತಾರೆ. ಈ ವೇಳೆ ಕನಿಷ್ಠ ಹತ್ತು ಮಂದಿಯೂ ಇಲ್ಲಿ ನಿಂತಿರುತ್ತಾರೆ.

ರಸ್ತೆಯ ಮತ್ತೊಂದು ಬದಿಯಲ್ಲಿ ಸಚಿವರಾದ ರಹೀಂ ಖಾನ್, ಶಿವರಾಜ ತಂಗಡಗಿ ಅವರ ಸಹಿತ ಹಲವು ಗಣ್ಯರ ಮನೆಗಳಿವೆ. ಅರಮನೆ ಕಡೆ ಹೋಗುವ ಈ ರಸ್ತೆ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ‘ಕೆಲ ದಿನಗಳ ಹಿಂದೆ ಮಳೆ ಬಂದಾಗ ಗೋಡೆಯ ಒಂದು ಭಾಗ ಕುಸಿದಿದೆ. ಇನ್ನೂ ಮೂರ್ನಾಲ್ಕು ಕಡೆ ಅನಾಹುತ ಆಗಬಹುದು ಎನ್ನುವ ಆತಂಕವಿದೆ. ರಸ್ತೆಯಲ್ಲಿ ಹೆಚ್ಚು ವಾಹನಗಳು ಸಂಚರಿಸುವುದರಿಂದ ನಾವೂ ಜೀವ ಹಿಡಿದುಕೊಂಡೇ ಗೋಡೆ ಪಕ್ಕದ ಪಾದಚಾರಿ ಮಾರ್ಗದಲ್ಲಿ ನಡೆದು ಹೋಗುತ್ತೇವೆ’ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.