ಬೆಂಗಳೂರು: ಮನೆಯ ಬೀಗ ಒಡೆದು ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದ ಇಬ್ಬರು ಬಾಲಕರು ಸೇರಿ ಐದು ಮಂದಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಿಲಕ್ನಗರ ನಿವಾಸಿಗಳಾದ ಸೈಯದ್ ರಫೀಕ್, ತೌಸಿಫ್, ಇಮಾಯುನುಲ್ಲಾ ಹಾಗೂ ಇಬ್ಬರು ಬಾಲಕರನ್ನು ಬಂಧಿಸಿ, ಒಟ್ಟು ₹6 ಲಕ್ಷ ಮೌಲ್ಯದ 10 ಗ್ರಾಂ ಚಿನ್ನದ ನಾಣ್ಯ, ಎಂಟು ವಾಚ್ಗಳು ಹಾಗೂ ಪಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಾಲಕರನ್ನು ಬಾಲಮಂದಿರಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದರು.

ಮೇ 19ರಂದು ಜಯನಗರ 4ನೇ ಟಿ ಬ್ಲಾಕ್ನ ಆಟದ ಮೈದಾನವೊಂದರ ಎದುರಿನ ಮನೆಯ ಬೀಗ ಒಡೆದು, ಬೀರುವಿನಲ್ಲಿಟ್ಟಿದ್ದ ₹20 ಸಾವಿರ ನಗದು, ವಿವಿಧ ಕಂಪನಿಯ ವಾಚ್ಗಳು, ಮೊಬೈಲ್, ಬೆಳ್ಳಿಯ ವಸ್ತು, ಚಿನ್ನದ ನಾಣ್ಯ ಕಳವು ಮಾಡಲಾಗಿತ್ತು. ಈ ಸಂಬಂಧ ಮನೆಯ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ಇಬ್ಬರು ವ್ಯಕ್ತಿಗಳನ್ನು ಜಯನಗರದ 1ನೇ ಬ್ಲಾಕ್ನ ಬೈರಸಂದ್ರದ ಬಳಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ಇಬ್ಬರು ಬಾಲಕರು ಜತೆ ಇನ್ನೂ ನಾಲ್ವರು ವ್ಯಕ್ತಿಗಳು ಸೇರಿ ಮನೆಗಳ್ಳತನ ಮಾಡಿರುವುದು ಗೊತ್ತಾಯಿತು.

ಆರೋಪಿಗಳ ಮಾಹಿತಿಯಂತೆ ತನಿಖೆ ಮುಂದುವರೆಸಲಾಯಿತು. ಮತ್ತಿಬ್ಬರನ್ನು ನಗರ ಠಾಣೆ ಬಳಿ ಬಂಧಿಸಿ ವಿಚಾರಣೆ ಒಳಪಡಿಸಿದಾಗ, ಕಳವು ಮಾಡಿದ್ದ ವಾಚ್ಗಳು ಮತ್ತು ಇತರೆ ವಸ್ತುಗಳನ್ನು ಸಹಚರನ ಮನೆಯಲ್ಲಿ ಇಟ್ಟಿರುವುದಾಗಿ ಹೇಳಿದರು. ಎಂಟು ವಾಚ್ಗಳು, ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.