ಬೆಂಗಳೂರು: ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಮೇನ್–2) ಫಲಿತಾಂಶದಲ್ಲೂ ಬೆಂಗಳೂರಿನ ನಾರಾಯಣ ಕೋ–ಕಾವೇರಿ ಭವನ ವಿದ್ಯಾರ್ಥಿ ಎ.ವಿಷ್ಣು ಸಾಯಿ ತೇಜ ಅವರು ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸೋಮವಾರ ಫಲಿತಾಂಶ ಪ್ರಕಟಿಸಿದೆ. ಜೆಇಇ ಮೇನ್–1ರಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದ ವಿಷ್ಣು ಸಾಯಿ ತೇಜ ಅವರೇ ಎರಡನೆಯದರಲ್ಲೂ ಸಾಧನೆ ಮುಂದುವರಿಸಿದ್ದಾರೆ.ಫಲಿತಾಂಶವನ್ನು ವೃದ್ಧಿಸಿಕೊಳ್ಳಲು ಪರೀಕ್ಷೆಬರೆದಿದ್ದ ಅವರು ಹಿಂದಿನ ಫಲಿತಾಂಶ ದಂತೆಯೇ ಮತ್ತೆ 99.99 ಪರ್ಸೆಂಟೈಲ್ ಗಳಿಸಿದ್ದಾರೆ. ಮೊದಲು ಅಖಿಲ ಭಾರತ ಮಟ್ಟದಲ್ಲಿ 14ನೇ ರ್ಯಾಂಕ್ ಗಳಿಸಿದ್ದ ಅವರು 28ನೇ ಸ್ಥಾನ ಪಡೆದಿದ್ದಾರೆ. ದೇಶದ ಪ್ರಮುಖ ಐಐಟಿಗಳಲ್ಲಿ ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ ಕೋರ್ಸ್ಗೆ ಪ್ರವೇಶ ಪಡೆಯುವ ಗುರಿ ಹೊಂದಿದ್ದಾರೆ. ವಿಷ್ಣು ಅವರ ತಂದೆ ರವಿಕುಮಾರ್ ಶೆಟ್ಟಿ ಬೆಂಗಳೂರಿನ ವಿಸ್ಟಿಯಾನ್ ಸಂಸ್ಥೆಯಲ್ಲಿ ಗ್ಲೋಬಲ್ ಎಂಜಿನಿಯರಿಂಗ್ ಲೀಡರ್ ಆಗಿದ್ದು, ತಾಯಿ ಪಲ್ಲವಿ ಎಂಬಿಎ ಪದವೀಧರೆ.

ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆನಡೆಸಲಾಗಿತ್ತು. ಏಪ್ರಿಲ್ 2ರಿಂದ 8ರವರೆಗೆ ದೇಶದ 319 ನಗರಗಳಲ್ಲಿ 584 ಕೇಂದ್ರ ಗಳಲ್ಲಿ ಹಾಗೂ ವಿದೇಶದ 15 ನಗರಗಳಲ್ಲಿ ಪರೀಕ್ಷೆ ನಡೆದಿದ್ದವು. ಸುಮಾರು 11 ಲಕ್ಷ ವಿದ್ಯಾರ್ಥಿ ಗಳು ನೋಂದಣಿ ಮಾಡಿಕೊಂಡಿದ್ದು, 10,34,330 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ದೇಶದ ವಿವಿಧ ರಾಜ್ಯಗಳ26 ವಿದ್ಯಾರ್ಥಿಗಳು 100 ಪರ್ಸೆಂಟೈಲ್ ಪಡೆದಿದ್ದಾರೆ. ಕರ್ನಾಟಕ ಯಾವ ವಿದ್ಯಾರ್ಥಿ ಗಳೂ 100 ಪರ್ಸೆಂಟೈಲ್ ಪಡೆಯಲು ಸಾಧ್ಯವಾಗಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-1753852890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.