ಬೆಂಗಳೂರು: ಸ್ನೇಹಿತೆ ಕೊಟ್ಟಿದ್ದ ಆಭರಣಗಳನ್ನು ಕಳವು ಮಾಡಿ ಅಡಮಾನ ಇರಿಸಿದ್ದ ದಂಪತಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಇಎಂಎಲ್ ಲೇಔಟ್ ನಿವಾಸಿ ಶರ್ಮಿಳಾ(50) ಮತ್ತು ಅವರ ಪತಿ ಗಣೇಶ್(54) ಬಂಧಿತರು.

ಪದ್ಮಜಾ ರಾವ್ ಎಂಬವರು ಕೊಟ್ಟ ಚಿನ್ನಾಭರಣಗಳನ್ನು ಆರೋಪಿಗಳು ಕಳವು ಮಾಡಿ ದುರುಪಯೋಗ ಪಡಿಸಿಕೊಂಡಿದ್ದರು. ಬನಶಂಕರಿ ನಿವಾಸಿ ಪದ್ಮಜಾ ರಾವ್ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪದ್ಮಜಾ ರಾವ್ಗೆ ಮದುವೆಯಾಗಿದ್ದು, ಪುತ್ರಿ ಕೂಡ ಇದ್ದಾರೆ. ಆದರೆ, ಕೌಟುಂಬಿಕ ಕಾರಣಕ್ಕೆ ಪತಿ ಮತ್ತು ಪುತ್ರಿ ದೂರವಾಗಿದ್ದಾರೆ. ಹೀಗಾಗಿ, ತನ್ನ ಆತ್ಮೀಯ ಸ್ನೇಹಿತೆ ಶರ್ಮಿಳಾ ಮನೆಯಲ್ಲಿ ಎಂಟು ವರ್ಷಗಳಿಂದ ಪದ್ಮಜಾ ರಾವ್ ವಾಸವಾಗಿದ್ದರು. ಈ ಮಧ್ಯೆ ಆರೋಪಿಗಳು ಪದ್ಮಜಾ ರಾವ್ ಬಳಿ ಇರುವ ಹಣ ಮತ್ತು ಚಿನ್ನಾಭರಣಗಳ ಮೇಲೆ ಆಸೆ ಪಟ್ಟು ಹೋಟೆಲ್ ಉದ್ಯಮ ನಡೆಸಲು ಹಣದ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಆದರೆ, ಪದ್ಮಜಾ ರಾವ್ ಅವರು ಕೊಟ್ಟಿರಲಿಲ್ಲ. ಅದರಿಂದ ಬೇಸರಗೊಂಡಿದ್ದ ಆರೋಪಿಗಳು ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದರು.

ಬ್ಯಾಂಕ್ನ ಲಾಕರ್ವೊಂದರಲ್ಲಿ ಇರಿಸಿದ್ದ ಚಿನ್ನಾಭರಣ ಮತ್ತು ₹49.50 ಲಕ್ಷವನ್ನು ಪದ್ಮಜಾ ರಾವ್ ಅವರು ಬಿಡಿಸಿ ಸ್ನೇಹಿತೆ ಶರ್ಮಿಳಾ ಮನೆಯ ಬೀರುವಿನಲ್ಲಿ ಇರಿಸಿದ್ದರು. ಕೆಲವು ದಿನಗಳ ಹಿಂದೆ ಲಾಕರ್ ತೆರೆದು ಪರಿಶೀಲಿಸಿದಾಗ ಆಭರಣ ಮತ್ತು ನಗದು ನಾಪತ್ತೆ ಆಗಿತ್ತು. ಬಳಿಕ ಸ್ನೇಹಿತೆಗೆ ಕೇಳಿದಾಗ ‘ಹಣದ ಅವಶ್ಯಕತೆ ಇದ್ದು, ಅದಕ್ಕಾಗಿ ಜ್ಯುವೆಲ್ಲರಿ ಮಳಿಗೆಯಲ್ಲಿ ಅಡಮಾನ ಇರಿಸಿದ್ದೇವೆ. ವಾಪಸ್ ಕೊಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದರು. ಅದಾದ ಮೇಲೆ ಪದ್ಮಜಾ ರಾವ್ ಅವರು ಸ್ನೇಹಿತೆಯ ಮನೆ ತೊರೆದು ಬನಶಂಕರಿಯಲ್ಲಿ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದರು. ಬಳಿಕ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

ಹೋಟೆಲ್ ತೆರೆಯಲು ಸಿದ್ಧತೆ

ಪದ್ಮಜಾ ರಾವ್ ಅವರ ಚಿನ್ನಾಭರಣ ಮತ್ತು ನಗದು ಬಳಸಿಕೊಂಡು ಗೋವಾದಲ್ಲಿ ಹೋಟೆಲ್ ಉದ್ಯಮ ಆರಂಭಿಸಲು ಆರೋಪಿಗಳು ಸಿದ್ಧತೆ ನಡೆಸಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.