ಬೆಂಗಳೂರು: ಸರಿದಾರಿಯಲ್ಲಿ ಸಾಗಿ ಪಡೆಯುವ ಅರ್ಹ ಯಶಸ್ಸು ಮತ್ತು ಅಡ್ಡಮಾರ್ಗದಲ್ಲಿ ಗಳಿಸಿದ ಯಶಸ್ಸು ಎರಡರ ನಡುವಿನ ವ್ಯತ್ಯಾಸ ತಿಳಿದು ಕೊಳ್ಳಬೇಕು. ಆ ಅರಿವಿನ ಮೂಲಕ ಜ್ಞಾನವನ್ನು ಮೌಲ್ಯಯುತವಾಗಿಸಿಕೊಳ್ಳ ಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಹೇಳಿದರು.

ಎಂ.ಪಿ. ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

‘ಅಕ್ಷರಸ್ಥರು ಸಾಮಾಜಿಕ ಹೊಣೆಗಾರಿಕೆಯಿಂದ ವಿಮುಖರಾಗುತ್ತಿರುವುದು ಸಮಾಜದ ಬಹುದೊಡ್ಡ ಅಪಾಯ. ಮೌಲ್ಯವಿಲ್ಲದ ಜ್ಞಾನಕ್ಕೆ ಬೆಲೆಇಲ್ಲ ಎನ್ನುವುದನ್ನು ನಮ್ಮ ಪರಂಪರೆಯಲ್ಲಿ ಖಚಿತವಾಗಿ ಹೇಳಲಾಗಿದೆ. ವಿದ್ಯೆಯು ಜವಾಬ್ದಾರಿಯುತ ನಾಗರಿಕರಾಗಲು ಪ್ರೇರಣೆ ನೀಡಬೇಕು. ಆಗ ನಮ್ಮ ಪ್ರಜಾಪ್ರಭುತ್ವವು ಸುರಕ್ಷಿತವಾಗಿ ಉಳಿಯಲು ಸಾಧ್ಯ’ ಎಂದು ತಿಳಿಸಿದರು.

ಉಳ್ಳವರು, ಇಲ್ಲದವರ ನಡುವೆಕಂದಕ ವಿಸ್ತಾರವಾಗುತ್ತಾ ಹೋದರೆಸಮಾಜದಲ್ಲಿ ಅಶಾಂತಿ ಉಂಟಾಗಬಹುದು ಎಂದು ಎಚ್ಚರಿಸಿದರು.

ಎಂ.ಪಿ. ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಚೇರ್ಮನ್ ಎನ್. ರಾಮಾನುಜ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಎಂ.ಬಿ.ಎ ಎನ್ನುವುದು ಶ್ರೀಮಂತರ ಸೊತ್ತಾಗಿ ಮಧ್ಯಮ ವರ್ಗದವರ ಪಾಲಿಗೆ ಗಗನ ಕುಸುಮವಾಗಿದ್ದ ಕಾಲದಲ್ಲಿ ನಮ್ಮ ಸಂಸ್ಥೆ ಆರಂಭವಾಯಿತು. ಮಾನವೀಯ ನೆಲೆಯಲ್ಲಿ ವ್ಯವಹಾರ ಕಲಿಸುವ ಪಠ್ಯಕ್ಕೆ ಸೀಮಿತವಾಗದೆ ಪರಿಸರದೊಡನೆ ಒಡನಾಡುವ ಸಹಜ ಮತ್ತು ವಿಶ್ವಾಸಾರ್ಹ ಮಾರ್ಗವನ್ನು ಅಳವಡಿಸಿಕೊಳ್ಳಲಾಗಿದೆ. ವ್ಯವಹಾರದೊಂದಿಗೆ ನೈತಿಕತೆಯನ್ನೂ ಕಲಿಸುವ ಏಕೈಕ ಸಂಸ್ಥೆ ನಮ್ಮದು’ ಎಂದು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲ ಎಸ್.ಸತ್ಯನಾರಾಯಣ, ಡಾ.ಮನಮೋಹನ ಸಿಂಗ್ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಎಚ್. ಕೃಷ್ಣರಾವ್, ಸಂಸ್ಥೆಯ ಉಪ ಅಧ್ಯಕ್ಷ ವಿ.ಮುರಳೀಧರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-4-931619767

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.