ಬನ್ನೇರುಘಟ್ಟ (ಆನೇಕಲ್) : ಇಲ್ಲಿಗೆ ಸಮೀಪದ ಬ್ಯಾಟರಾಯನದೊಡ್ಡಿ ಗ್ರಾಮದಲ್ಲಿ ಕಬ್ಬಾಳಮ್ಮ, ಮಸಿಯಮ್ಮ ದೇವಿ ಅಗ್ನಿಕೊಂಡೋತ್ಸವ ಮತ್ತು ಸಿದ್ದಪ್ಪಾಜಿ ಜಾತ್ರ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಅಗ್ನಿಕೊಂಡ ನೋಡಲು ಬನ್ನೇರುಘಟ್ಟ ಗ್ರಾಮದ ಸುತ್ತಮುತ್ತಲ ಗ್ರಾಮಗಳ ಭಕ್ತರು ಜಮಾಯಿಸಿದ್ದರು.

ಬ್ಯಾಟರಾಯನದೊಡ್ಡಿ ಕಬ್ಬಾಳಮ್ಮ ದೇವಿ ದೇವಾಲಯ ಮುಂಭಾಗದಲ್ಲಿ ಹಾಕಲಾಗಿದ್ದ ಅಗ್ನಿಕೊಂಡ ಹಾಯ್ದರು. ಜಾತ್ರೆ ಮಹೋತ್ಸವ ಹಿನ್ನೆಲೆಯಲ್ಲಿ ಮಹಿಳೆಯರು ಅಲಂಕೃತ ದೀಪಗಳನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವರಿಗೆ ಸಮರ್ಪಿಸಿದರು. ಕಬ್ಬಾಳಮ್ಮ ಮತ್ತು ಸಿದ್ದಪ್ಪಾಜಿ ಅಲಂಕೃತ ಮೂರ್ತಿಗಳನ್ನು ಹೊತ್ತು ಭಕ್ತರು ಮೆರವಣಿಗೆ ನಡೆಸಿದರು.

ದೇವಾಲಯದ ಲಕ್ಷ್ಮೀನಾರಾಯಣ್ ಮಾತನಾಡಿ, ಕ್ಷೇತ್ರ ಎರಡನೇ ಕಬ್ಬಾಳು ಎಂದು ಖ್ಯಾತಿ ಪಡೆದಿದೆ. ಜಾತ್ರೆಯಲ್ಲಿ ನೂರಾರು ಮಂದಿ ಭಕ್ತರು ಆಗಮಿಸುತ್ತಾರೆ. ದಿನದಿಂದ ದಿನಕ್ಕೇ ದೀಪಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇಲ್ಲಿ ದೀಪಗಳನ್ನು ಹೊರುವುದರಿಂದ ಉತ್ತಮ ಆರೋಗ್ಯ ಮತ್ತು ಉತ್ತಮ ಜೀವನ ಸಿಗಲಿದೆ ಎಂಬುದು ಭಕ್ತರ ನಂಬಿಕೆಯಾಗಿದೆ ಎಂದರು.

ಅಗ್ನಿಕೊಂಡ ಮಹೋತ್ಸವದಲ್ಲಿ ಅರ್ಚಕರು ವಿವಿಧ ಧಾರ್ಮಿಕ ಕಾರ್ಯ ನೆರವೇರಿಸಿ ಅಗ್ನಿಕೊಂಡ ಪ್ರವೇಶಿಸಿದರು. ವೈಭವದ ಜಾತ್ರಾ ಮಹೋತ್ಸವದಲ್ಲಿ ಮಕ್ಕಳ ಸಿಡಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-15-851987594

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.