‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ನಾಟಕ

ಬೆಂಗಳೂರು: ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡವು ಇದೇ 24ರಂದು ಸಂಜೆ 7ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಚಂದ್ರಶೇಖರ ಕಂಬಾರ ಅವರ ಕಾದಂಬರಿ ಆಧಾರಿತ ನಾಟಕ ಇದಾಗಿದೆ. ಭಾಸ್ಕರ್ ನೀನಾಸಂ ಅವರ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನ ಕಾಣಲಿದೆ. ಈ ಕಾದಂಬರಿಯ ವಸ್ತು ಪ್ರೀತಿ ಮತ್ತು ಪ್ರೇಮ. ಪ್ರತಿಷ್ಠಿತ ಕಾಲೇಜೊಂದರ ಪ್ರಾಂಶುಪಾಲರು ತಮ್ಮದೇ ಕಾಲೇಜಿನ ವಿದ್ಯಾರ್ಥಿನಿ ‘ರೋಜಾ’ ಎನ್ನುವ ಹುಡುಗಿಯ ಪ್ರೇಮದ ಬಲೆಯಲ್ಲಿ ಬಿದ್ದು, ಅವರ ಜೀವನದಲ್ಲಿ ಮುಂದೆ ಏನೆಲ್ಲ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ಈ ನಾಟಕ ಅನಾವರಣ ಮಾಡಲಿದೆ.

ನಾಟಕದ ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯವೆಂದು ಪ್ರಕಟಣೆ ತಿಳಿಸಿದೆ. ಸಂಪರ್ಕಕ್ಕೆ: 9945977184

‘ಕಲಾ ಸ್ಪಂದನ’ ಸಂಗೀತ–ನೃತ್ಯ

ಬೆಂಗಳೂರು: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಮತ್ತು ಅಲಂಕೃತ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಇದೇ 23ರಂದು ಸಂಜೆ 6ಕ್ಕೆ ಜಯನಗರದ 4ನೇ ಬ್ಲಾಕ್ನಲ್ಲಿರುವ ಸನಾತನ ಕಲಾಕ್ಷೇತ್ರದಲ್ಲಿ ‘ಕಲಾ ಸ್ಪಂದನ’ ಶಾಸ್ತ್ರೀಯ ಸಂಗೀತ, ನೃತ್ಯ ತಿಂಗಳ ಕಾರ್ಯಕ್ರಮ ಹಮ್ಮಿಕೊಂಡಿದೆ.

ಪಾರ್ಥ ಪಿ. ಕೆರೂರ ಅವರಿಂದ ಭರತನಾಟ್ಯ, ವಸುಧಾ ಬಾಲಕೃಷ್ಣ (ಗಾಯನ), ಬಾಲಕೃಷ್ಣ (ಮೃದಂಗ), ಕಾರ್ತಿಕ್ ಸಾಥವಳ್ಳಿ (ಕೊಳಲು), ನಿಖಿತಾ ಮಂಜುನಾಥ್ (ನಟುವಾಂಗಂ) ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೀವ್ ಕೊರ್ತಿ ಅವರ ಶಿಷ್ಯರಾದ ಚಕ್ಷಶ್ರವ ಕಶ್ಯಪ್, ಚೈತ್ರ ಅರ್ಚಕ್, ದ್ವೈತ ಜೋಶಿ, ದರ್ಶನ್ ಹೆಗ್ಡೆ, ಅನೀಷ್ ರಾವ್, ರೋಹನ್ ಕುಮಾರ್ ಅವರಿಂದ ಸಿತಾರ್ ವಾದನ ನಡೆಯಲಿದೆ.

ಸಂಗೀತ ಕಛೇರಿ

ಬೆಂಗಳೂರು: ಕೆ.ಎನ್. ಕೃಷ್ಣಮೂರ್ತಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ವಿದ್ವಾನ್ ಶ್ರೀ ಕೆ.ಎನ್.ಕೃಷ್ಣಮೂರ್ತಿ ಗುರುವಂದನಾ ಸಮಿತಿ ಟ್ರಸ್ಟ್ ಇದೇ 23 ಮತ್ತು 24 ರಂದು ಮಲ್ಲೇಶ್ವರದ ಸೇವಾ ಸದನದಲ್ಲಿ ಸಂಗೀತ ಕಛೇರಿ ಹಮ್ಮಿಕೊಂಡಿದೆ.

23ರಂದು ಸಂಜೆ 4 ಗಂಟೆಗೆ ಮೈಸೂರು ವಿಜಯಸೂರ್ಯ ಮತ್ತು ಚಂದ್ರಶೇಖರ ಜಿ. ಅವರಿಂದ ನಾದಸ್ವರ, ಬಿಕ್ಕಂಬಟ್ಟಿ ಬಿ.ಆರ್. ವೆಂಕಟೇಶ್, ಬೆಂಗಳೂರು ಎಂ. ಮುರುಗೇಶ್ ಅವರಿಂದ ತವಿಲ್ ವಾದನ ನಡೆಯಲಿದೆ. ಸಂಜೆ 5.30ರಿಂದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಂಜೆ 6.30ರಿಂದ ಸಂಗೀತ ಕಛೇರಿ ನಡೆಯಲಿದ್ದು, ಎಂ.ಎಸ್. ಶೀಲಾ ಅವರಿಂದ ಗಾಯನ ನಡೆಯಲಿದೆ. ಅಪೇಕ್ಷಾ ಅಪ್ಪಲಾ ಅವರು ಗಾಯನದಲ್ಲಿ ಸಾಥ್ ನೀಡಲಿದ್ದಾರೆ. ಎಚ್.ಎಂ. ಸ್ಮಿತಾ ಅವರಿಂದ ಪಿಟೀಲು, ಕೆ.ಯು. ಜಯಚಂದ್ರ ಅವರಿಂದ ಮೃದಂಗ ಹಾಗೂ ಯು. ಗಿರಿಧರ ಉಡುಪ ಅವರಿಂದ ಘಟ ವಾದನ ನಡೆಯಲಿದೆ.

24ರಂದು ಬೆಳಿಗ್ಗೆ 9.30ರಿಂದ ಸಂಜೆ 7ರ ವರೆಗೆ ಸಂಗೀತ ಕಛೇರಿ ನಡೆಯಲಿದೆ. ಆನೂರು ಅನಂತಕೃಷ್ಣ ಶರ್ಮ, ಮೈಸೂರು ಎಂ. ನಾಗರಾಜ್, ಮೈಸೂರು ಎಂ. ಮಂಜುನಾಥ್ ಸೇರಿ ಹಲವರು ಪಾಲ್ಗೊಳ್ಳಲಿದ್ದಾರೆ.

‘ಸೀತಾ ಸ್ವಯಂವರಂ’ ನಾಟಕ

ಬೆಂಗಳೂರು: ಅಭಿಜ್ಞಾ ತಂಡವು ಇದೇ 23ರಂದು ಮಧ್ಯಾಹ್ನ 3.30 ಹಾಗೂ ಸಂಜೆ 7.30ಕ್ಕೆ ರಂಗಶಂಕರದಲ್ಲಿ ‘ಸೀತಾಸ್ವಯಂವರಂ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಮಂಜುನಾಥ್ ಎಲ್. ಬಡಿಗೇರ್ ಅವರು ಈ ನಾಟಕ ನಿರ್ದೇಶಿಸಿದ್ದಾರೆ. ಇದು ರಾಮಾಯಣ ಆಧಾರಿತ ಕಥಾವಸ್ತುವನ್ನು ಒಳಗೊಂಡಿದ್ದು, ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ.

‘ಅನವರತ’ ನಾಟಕ

ಬೆಂಗಳೂರು: ಬೆಂಗಳೂರು ಪ್ಲೇಯರ್ಸ್ ರಂಗ ತಂಡವು ಇದೇ 23ರಂದು ಸಂಜೆ 7ಕ್ಕೆ ‘ಅನವರತ’ ಸಂಗೀತ ನೃತ್ಯ ರೂಪಕ ನಾಟಕ ಪ್ರದರ್ಶನವನ್ನು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದೆ.

ಚಿದಾನಂದ ಎಸ್. ಅವರು ಈ ನಾಟಕವನ್ನು ರಚಿಸಿ, ನಿರ್ದೇಶಿಸಿದ್ದಾರೆ. ಟಿಕೆಟ್ಗಳು ಬುಕ್ ಮೈ ಶೋ ದಲ್ಲಿ ಲಭ್ಯ.

ಪೂರ್ವಿ ಕಶ್ಯಪ್ ರಂಗಪ್ರವೇಶ

ಬೆಂಗಳೂರು: ನಾಟ್ಯ ನಿಕೇತನ ನೃತ್ಯ ಶಾಲೆಯು ಇದೇ 24ರಂದು ಸಂಜೆ 6ಕ್ಕೆ ದೊಡ್ಡಕಲ್ಲಸಂದ್ರದಲ್ಲಿರುವ ಮೀನಾಕ್ಷಿ ರಂಗಮಂಚದಲ್ಲಿ ಪೂರ್ವಿ ಕಶ್ಯಪ್ ಅವರ ಭರತನಾಟ್ಯ ರಂಗಪ್ರವೇಶ ಹಮ್ಮಿಕೊಂಡಿದೆ.

ಭರತನಾಟ್ಯ ಕಲಾವಿದ ಪಿ. ಪ್ರವೀಣ್ ಕುಮಾರ್, ಕುಮಾರನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನಿರ್ದೇಶಕಿ ದೀಪಾ ಶ್ರೀಧರ್ ಹಾಗೂ ನೃತ್ಯ ವಿಮರ್ಶಕ ನಂಜುಂಡ ರಾವ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪೂರ್ವಿ ಅವರು 12 ವರ್ಷಗಳಿಂದ ರೇವತಿ ನರಸಿಂಹನ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಜ್ರ ಮಹೋತ್ಸವ ಸಂಭ್ರಮಾಚರಣೆ

ಬೆಂಗಳೂರು: ಉದಯಭಾನು ಕಲಾಸಂಘವು ತನ್ನ ವಜ್ರಮಹೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಇದೇ 24ರಿಂದ 29ರವರೆಗೆ ಪ್ರತಿ ದಿನ ಸಂಜೆ 6.30ಕ್ಕೆ ಗವಿಪುರದಲ್ಲಿರುವ ಉದಯಭಾನು ಸಾಂಸ್ಕೃತಿಕ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ.

24ರಂದು ಆರ್.ಕೆ. ಶಂಕರ್ ಮತ್ತು ತಂಡದಿಂದ ವೀಣಾನಾದ ವೈಭವ, 25 ರಂದು ನೃತ್ಯಕೂಟ ತಂಡದಿಂದ ನೃತ್ಯ ವೈಭವ, 26ರಂದು ಬೆಳ್ಳಿಗೆಜ್ಜೆ ನಾಟ್ಯಾಲಯ ತಂಡದವರಿಂದ ಸುಗಮ ಸಂಗೀತ ಹಾಗೂ ಭರತನಾಟ್ಯ, 27ರಂದು ಉದಯಭಾನು ಕಲಾಸಂಘದ ಭರತನಾಟ್ಯ ತರಬೇತಿ ಕೇಂದ್ರದಿಂದ ಭರತನಾಟ್ಯ, 28 ರಂದು ಸೃಷ್ಠಿಕಲಾ ವಿದ್ಯಾಲಯ ತಂಡದಿಂದ ಭಾರತೀಯ ಜಾನಪದ ನೃತ್ಯ, 29 ರಂದು ಆನಿ ಮ್ಯೂಸಿಕ್ ಅಕಾಡೆಮಿ ತಂಡದವರಿಂದ ಕನ್ನಡ ಚಲನಚಿತ್ರ ಗೀತೆಗಳ ಗಾಯನ ನಡೆಯಲಿದೆ.

‘ಅಯೋಮಯ’ ನಾಟಕ ಪ್ರದರ್ಶನ

ಬೆಂಗಳೂರು: ಯುವಕ ಸಂಘದ ‘ಫ್ರೀ ಸ್ಪೇಸ್’ ವೇದಿಕೆಯು ಇದೇ 23ರಂದು ಸಂಜೆ 7ಕ್ಕೆ ಎನ್.ಆರ್. ಕಾಲೊನಿಯಲ್ಲಿರುವ ಸಿ. ಅಶ್ವಥ್ ಕಲಾಭವನದಲ್ಲಿ ‘ಅಯೋಮಯ - ಜಾನಕಿ ರಾಮ್ ಸ್ಟೋರಿ’ ಎಂಬ ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಗೌರೀಶ್ ಜೋಶಿ ಅವರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ಈ ನಾಟಕವು ಆಧುನಿಕ ಬದುಕಿನ ಜಂಜಾಟದಲ್ಲಿ ಕಳೆದುಹೋಗುವ ಸಾಮಾನ್ಯ ವ್ಯಕ್ತಿಯೊಬ್ಬರ ಕಥೆಯನ್ನು ಒಳಗೊಂಡಿದೆ. ಜೀವನದ ವಾಸ್ತವತೆ ಮತ್ತು ಟಿವಿ ಧಾರಾವಾಹಿಗಳ ಪ್ರಭಾವದ ನಡುವಿನ ಗೊಂದಲಗಳನ್ನು ಹಾಸ್ಯಭರಿತವಾಗಿ ಬಿಂಬಿಸಲಾಗಿದೆ.

ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.