ಬೆಂಗಳೂರು: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಘನತ್ಯಾಜ್ಯ ಟೆಂಡರ್ ಅಂತಿಮಗೊಳಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಮಂಡಳಿ (ಬಿಎಸ್ಡಬ್ಲ್ಯುಎಂಎಲ್) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕರೀಗೌಡ ಲಂಚಕ್ಕೆ ಬೇಡಿಕೆ ಇರಿಸಿದ್ದು ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಲು ಸಿದ್ಧ’ ಎಂದು ಗುತ್ತಿಗೆದಾರ ಎಸ್.ಎನ್.ಬಾಲಸುಬ್ರಮಣ್ಯಂ ಹೈಕೋರ್ಟ್ಗೆ ಅರುಹಿದ್ದಾರೆ.

‘ಕರೀಗೌಡ ವಿರುದ್ಧ ಎಫ್ಐಆರ್ ದಾಖಲಿಸಿ ಎಸ್ಐಟಿ ತನಿಖೆಗೆ ನಿರ್ದೇಶಿಸಬೇಕು’ ಎಂದು ಕೋರಿ ‘ಬೆಂಗಳೂರು ನಗರ ಸ್ವಚ್ಛತೆ, ಲಾರಿ ಮಾಲೀಕರ ಮತ್ತು ಗುತ್ತಿಗೆದಾರರ ಸಂಘ’ದ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಮಣ್ಯಂ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಾಲಸುಬ್ರಮಣ್ಯಂ ಪರ ಹೈಕೋರ್ಟ್ ವಕೀಲ ಪಿ.ಪ್ರಸನ್ನ ಕುಮಾರ್, ‘ಸಿ.ವಿ.ರಾಮನ್ ನಗರ ಪ್ಯಾಕೇಜ್-1, ಶಾಂತಿನಗರ ತ್ಯಾಜ್ಯ ವಿಲೇವಾರಿ ಟೆಂಡರ್ ಪ್ಯಾಕೇಜ್-2 ಹಾಗೂ ದಾಸರಹಳ್ಳಿ ಪ್ಯಾಕೇಜ್-3ಕ್ಕೆ ಅರ್ಜಿದಾರರು ಸಲ್ಲಿಸಿದ ಎಲ್–1 ಬಿಡ್ ಅಂಗೀಕರಿಸಲಾಗಿತ್ತು. ಆದರೆ, ಕರೀಗೌಡ ಅವರು ಮಾರ್ಚ್ 10ರಂದು ಅರ್ಜಿದಾರರನ್ನು ಕರೆಯಿಸಿಕೊಂಡು ಹಣ ನೀಡಬೇಕು. ಇಲ್ಲವಾದರೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಟೆಂಡರ್ ಅಂತಿಮಗೊಳಿಸುವುದಿಲ್ಲ ಎಂಬುದಾಗಿ ತಿಳಿಸಿದ್ದರು’ ಎಂದು ಆರೋಪಿಸಿದರು.

‘ಏಳು ವರ್ಷದ ಗುತ್ತಿಗೆಗೆ ಸರ್ಕಾರ ಹಾಗೂ ನಗರಾಭಿವೃದ್ದಿ ಇಲಾಖೆಗೆ ಶೇ 15ರಷ್ಟು ಲಂಚ ನೀಡಬೇಕೆಂದು ಕೇಳಿದ್ದಾರೆ. ಲಂಚ ನೀಡದಿದ್ದರೆ ಅರ್ಜಿದಾರರ ಇತರೆ ಗುತ್ತಿಗೆಗಳನ್ನೂ ರದ್ದುಪಡಿಸುತ್ತೇವೆ ಎಂದು ಬೆದರಿಸಿದ್ದಾರೆ. ಈ ಬಗ್ಗೆ ಮಾರ್ಚ್ 11ರಂದು ಮುಖ್ಯ ಕಾರ್ಯದರ್ಶಿಗೆ ದೂರನ್ನೂ ನೀಡಲಾಗಿದೆ. ಅಂತಿಮ ವಾಗಿ ಲಂಚದ ಬೇಡಿಕೆಗೆ ಒಪ್ಪದೇ ಹೋದ ಕಾರಣಕ್ಕೆ ಜುಲೈ 30ರಂದು ಕರೆಯಲಾಗಿದ್ದ ಟೆಂಡರ್ ಹಿಂಪಡೆದು ಹೊಸ ಟೆಂಡರ್ ಪ್ರಕಟಿಸಿ 2026ರ ಮಾರ್ಚ್ 25ರಂದು ಅಧಿಸೂಚನೆ ಹೊರಡಿಸಲಾಗಿದೆ’ ಎಂದು ಹೇಳಿದರು.

‘ಈ ಹಿನ್ನೆಲೆಯಲ್ಲಿ ಟೆಂಡರ್ ಅಧಿಸೂಚನೆ ರದ್ದುಪಡಿಸಬೇಕು. ಅಧಿಕಾರ ದುರುಪಯೋಗ ಮಾಡಿಕೊಂಡು, ಟೆಂಡರ್ ಅಧಿಸೂಚನೆ ಹಿಂಪಡೆದ ಹಾಗೂ ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆಗೆ ಆದೇಶಿಸಬೇಕು’ ಎಂದು ಕೋರಿದರು.

ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರು, ‘ಕರೀಗೌಡ ಅವರು ಮಾರ್ಚ್ 10ರಂದು ಬೆಂಗಳೂರಿನಲ್ಲೇ ಇರಲಿಲ್ಲ. ದೆಹಲಿಯಲ್ಲಿದ್ದರು. ಬೆಳಿಗ್ಗೆ ಹೋಗಿ ರಾತ್ರಿ ಬಂದರು. ಆ ದಿನ ದೆಹಲಿಯಲ್ಲಿದ್ದ ಬಗ್ಗೆ ವಿಮಾನ ಪ್ರಯಾಣದ ಬೋರ್ಡಿಂಗ್ ಪಾಸ್ ಇದೆ’ ಎಂದರು.

ಇದನ್ನು ಬಲವಾಗಿ ಅಲ್ಲಗಳೆದ ಪ್ರಸನ್ನ ಕುಮಾರ್, ‘ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಲಾಗುವುದು. ಒಂದು ವೇಳೆ ನಮ್ಮ ಆರೋಪ ಸುಳ್ಳು ಎಂದಾದರೆ ಮುಂದಿನ ಕಾನೂನು ಕ್ರಮಕ್ಕೆ ಸಿದ್ಧ’ ಎಂದು ಸವಾಲೆಸೆದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆ ಯನ್ನು ಶುಕ್ರವಾರಕ್ಕೆ (ಮಾ.24) ಮುಂದೂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-4-1953295950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.