ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು ಚಿತ್ರಕಲಾ ಲೇಖಕರಿಂದ ಪ್ರಕಟಿತ ಪುಸ್ತಕಗಳ ಖರೀದಿಗೆ ಅರ್ಜಿ ಆಹ್ವಾನಿಸಿದೆ.

ದೃಶ್ಯಕಲೆ ಸಾಹಿತ್ಯ ಮತ್ತು ಲೇಖಕರನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. 2024ರಲ್ಲಿ ಪ್ರಕಟವಾದ ಅಥವಾ ಮರು ಮುದ್ರಣಗೊಂಡ ಪುಸ್ತಕಗಳನ್ನು ಪರಿಗಣಿಸಲಾಗುತ್ತದೆ. ಶೀರ್ಷಿಕೆಯೊಂದನ್ನು ₹5 ಸಾವಿರದ ಮಿತಿಯಲ್ಲಿ ಖರೀದಿಸಲಾಗುತ್ತದೆ. ಕಲಾ ಬರಹಗಾರರು ಎಷ್ಟು ಪುಸ್ತಕಗಳನ್ನು ಬೇಕಿದ್ದರೂ ಆಯ್ಕೆ ಕೋರಿ ಅರ್ಜಿ ಸಲ್ಲಿಸಬಹುದು. ಅಕಾಡೆಮಿ ಖರೀದಿಸ ಬಹುದಾದ ಪುಸ್ತಕಗಳನ್ನು ಆಯ್ಕೆ ಸಮಿತಿ ಪರಿಶೀಲಿಸಿ, ಅಕಾಡೆಮಿಗೆ ಶಿಫಾರಸು ಮಾಡುತ್ತದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತ ತಿಳಿಸಿದ್ದಾರೆ.

ಆಯ್ಕೆಯಾದ ಬರಹಗಾರರು ಅಕಾಡೆಮಿ ಸೂಚಿಸಿದ ದಿನಾಂಕ ದೊಳಗೆ ₹5 ಸಾವಿರ ಮೌಲ್ಯದ ಪುಸ್ತಕ ಗಳನ್ನು ತಲುಪಿಸಬೇಕು. ಅರ್ಜಿ ಯೊಂದಿಗೆ ಪ್ರಕಟವಾದ ಪುಸ್ತಕಗಳ ತಲಾ 3 ಪ್ರತಿಗಳನ್ನು ಇದೇ 25ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು–580 002 ಈ ವಿಳಾಸಕ್ಕೆ ಕಳುಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-342623061

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.