ರಾಜರಾಜೇಶ್ವರಿನಗರ: ‘ಕಾವೇರಿ ನೀರಿನ ಜತೆಗೆ ಚರಂಡಿ ನೀರು ಬರುತ್ತಿದೆ. ಹತ್ತು ನಿಮಿಷ ನೀರನ್ನು ಹೊರ ಚೆಲ್ಲಿ, ನಂತರ ನೀರು ಹಿಡಿಯಬೇಕು. ನೀರು ದುರ್ವಾಸನೆಯಿಂದ ಕೂಡಿರುತ್ತದೆ. ಶುದ್ಧ ನೀರು ಸರಬರಾಜು ಮಾಡಬೇಕು’ ಎಂದು ಗೃಹಿಣಿ ಸುನಂದ ಆಗ್ರಹಿಸಿದರು.

‘ವಾರಕ್ಕೊಮ್ಮೆ ಕಾವೇರಿ ನೀರು ಬರುತ್ತದೆ, ಮೇಲ್ಭಾಗದ ಮನೆಗಳಿಗೆ ನೀರು ಬರುವುದಿಲ್ಲ. ನೀರೇ ಬರುತ್ತಿಲ್ಲ, ಆದರೂ ಪ್ರತಿ ತಿಂಗಳು ಬಿಲ್ ಮಾತ್ರ ಬರುತ್ತದೆ’ ಎಂದು ದೊಡ್ಡ ಬಿದರಕಲ್ಲು ವಾರ್ಡ್ನ ಮುನೇಶ್ವರ ಬಡಾವಣೆ-ಮಾರಣ್ಣ ಬಡಾವಣೆ ನಿವಾಸಿಗಳು ಜಲಮಂಡಳಿ ವಿರುದ್ಗ ಆ ಆಕ್ರೋಶ ವ್ಯಕ್ತಪಡಿಸಿದರು.

ಮುನೇಶ್ವರ ಬಡಾವಣೆ-ಮಾರಣ್ಣ ಬಡಾವಣೆ ಮಾರ್ಗವಾಗಿ ಹಾದು ಹೋಗುವ ರಾಜಕಾಲುವೆಯ ತಡೆಗೋಡೆ ಮತ್ತು ಸೇತುವೆ ನಿರ್ಮಾಣಕ್ಕೆ ₹7 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಎಸ್.ಟಿ. ಸೋಮಶೇಖರ್ ಅವರು ಭೂಮಿಪೂಜೆ ನೆರವೇರಿಸಿದ ಸಂದರ್ಭದಲ್ಲಿ ಸ್ಥಳೀಯರು ದೂರು ನೀಡಿದರು.

ಎಸ್.ಟಿ.ಸೋಮಶೇಖರ್ ಮಾತನಾಡಿ, ‘ಜಲಮಂಡಳಿ, ಜಿಬಿಎ ಎಂಜಿನಿಯರ್ಗಳು, ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುತ್ತದೆ. ವಾರಕ್ಕೆ ಎರಡು ದಿವಸ ಶುದ್ದ ಕಾವೇರಿ ನೀರು ಬಿಡಬೇಕು. ಕಲುಷಿತ ನೀರು ಸೇರದಂತೆ ಕ್ರಮವಹಿಸಲಾಗುವುದು’ ಎಂ ದರು.

ಸಹಾಯಕ ಎಂಜಿನಿಯರ್ ಚಿಕ್ಕಗೂಳಿಗೌಡ ಸಮಜಾಯಿಷಿ ನೀಡಿ, ₹9 ಕೋಟಿ ಬಿಡುಗಡೆಯಾಗಿದ್ದು, ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-4-1175708518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.