ಬೆಂಗಳೂರು: ಪೂಜೇನಹಳ್ಳಿಯ ಸಮಗ್ರ ಶೀತಲ ಸರಪಳಿ ಘಟಕವನ್ನು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮವು (ಕೆಪೆಕ್) ಮಂಗಳವಾರ ಸ್ವಾಧೀನಕ್ಕೆ ಪಡೆದುಕೊಂಡಿದೆ.

ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಪೂಜೇನಹಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಘಟಕವನ್ನು ಕೆಪೆಕ್ ಸ್ಥಾಪಿಸಿತ್ತು. ಅದನ್ನು 2024ರ ಜೂನ್ 6ರಂದು ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ ಸಂಸ್ಥೆಗೆ ಹಸ್ತಾಂತರ ಮಾಡಿತ್ತು.

ಬಾಡಿಗೆ ಪಾವತಿಸದಿರುವುದು ಮತ್ತು ಒಪ್ಪಂದ ಉಲ್ಲಂಘಿಸಿ ಘಟಕವನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದ ಕಾರಣ ಘಟಕವನ್ನು ಹಿಂತಿರುಗಿಸಲು 2025ರ ಜುಲೈ 28ರಂದು ಒಪ್ಪಂದ ರದ್ದುಗೊಳಿಸಿ ಕೆಪೆಕ್ ನೋಟಿಸ್ ನೀಡಿತ್ತು.

ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಆಕ್ರಮಣದಾರರನ್ನು ಒಕ್ಕಲೆಬ್ಬಿಸುವ) ಕಾಯ್ದೆ, 1974ರ ಅಡಿಯಲ್ಲಿ ಸ್ವಾಧೀನ ಅಧಿಕಾರಿಯಾಗಿ ಸರ್ಕಾರವು ಸಿ.ಎನ್. ಶಿವಪ್ರಕಾಶ್ ಅವರನ್ನು ನೇಮಿಸಿತ್ತು. ಅವರು ತೆರವು ಮಾಡಲು ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ಗೆ 45 ದಿನಗಳ ಅವಕಾಶ ನೀಡಿ ಕಳೆದ ಏ.10ರಂದು ನೋಟಿಸ್ ನೀಡಿದ್ದರು.

‘ನಿಗದಿತ ಅವಧಿಯಲ್ಲಿ ಘಟಕವನ್ನು ಕೆಪೆಕ್ಗೆ ಹಸ್ತಾಂತರಿಸದ ಕಾರಣ ಸ್ವಾಧೀನಪಡಿಸಿಕೊಳ್ಳಲಾಗಿದೆ’ ಎಂದು ಸ್ವಾಧೀನ ಅಧಿಕಾರಿಯೂ ಆದ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-2012023897

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.