ಬೆಂಗಳೂರು: ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ‘ಲೌರಿ’ ಕೆಳಸೇತುವೆ ರಸ್ತೆಯಲ್ಲಿ (ಐ.ಟಿ.ಐ ಬಿಎಂಟಿಸಿ ಡಿಪೊ 24ರ ಕಡೆಯಿಂದ) ರೈಲ್ವೆ ಇಲಾಖೆಯಿಂದ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಜೂನ್ 4ರಿಂದ ಏಳು ದಿನ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ.

ವಾಹನ ಸಂಚಾರ ನಿರ್ಬಂಧಿತ ರಸ್ತೆ: ಐ.ಟಿ.ಐ ಬಿಎಂಟಿಸಿ 24ರ ಡಿಪೊ ‘ಲೌರಿ’ ಕೆಳಸೇತುವೆ ಕಡೆಯಿಂದ ವೈಟ್ಫೀಲ್ಡ್ ಹಾಗೂ ಹೊರ ವರ್ತುಲ ರಸ್ತೆ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ನಿರ್ಬಂಧಿಸಲಾದ ರಸ್ತೆಗೆ ಪರ್ಯಾಯ ಮಾರ್ಗ: ಐ.ಟಿ.ಐ ಬಿಎಂಟಿಸಿ 24ರ ಡಿಪೊ ‘ಲೌರಿ’ ಕೆಳಸೇತುವೆ ಕಡೆಯಿಂದ ವೈಟ್ಫೀಲ್ಡ್ ಮತ್ತು ಹೊರ ವರ್ತುಲ ರಸ್ತೆ ಕಡೆಗೆ ಹೋಗುವ ವಾಹನಗಳು ಕೆ.ಆರ್. ಪುರ ಹ್ಯಾಂಗಿಂಗ್ ಬ್ರಿಡ್ಜ್ – ಹಳೆ ಮದ್ರಾಸ್ ರಸ್ತೆಯ ಮೂಲಕ ಸಾಗಿ ಪೈಲೇಔಟ್ನಲ್ಲಿ ಯು–ಟರ್ನ್ ಪಡೆದು ಐಟಿಪಿಎಲ್ ಹಾಗೂ ಹೊರ ವರ್ತುಲ ರಸ್ತೆಯ ಕಡೆಗೆ ಸಂಚರಿಸಬಹುದಾಗಿದೆ.

ಹೊರ ವರ್ತುಲ ರಸ್ತೆ ಹಾಗೂ ಐಟಿಪಿಎಲ್ ಕಡೆಯಿಂದ ಐಟಿಐ ಕಾಲೊನಿ, ರಾಮಮೂರ್ತಿನಗರ, ಕೆ.ಆರ್.ಪುರ ಹೊರ ವರ್ತುಲ ರಸ್ತೆಯ ಕಡೆಗೆ ಹೋಗುವ ವಾಹನಗಳು ಪೈಲೇಔಟ್ನಲ್ಲಿ ಯು–ಟರ್ನ್ ಪಡೆದು ಹಳೆ ಮದ್ರಾಸ್ ರಸ್ತೆಯ ಕೆ.ಆರ್. ಪುರ ಹ್ಯಾಂಗಿಂಗ್ ಬ್ರಿಡ್ಜ್ ಮೂಲಕ ರಾಮಮೂರ್ತಿನಗರ ಹಾಗೂ ಕೆ.ಆರ್.ಪುರದ ಕಡೆಗೆ ಸಂಚರಿಸಬಹುದು ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-4-750106410

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.