ಬೆಂಗಳೂರು: ಕೆ.ಆರ್.ಪುರ ಬಳಿಯ ಲೋರಿ ಕೆಳ ಸೇತುವೆಯ ಚಪ್ಪಡಿ (ಸ್ಲ್ಯಾಬ್) ಬದಲಿಸುವ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಜೂನ್ 4ರಿಂದ 9ರವರೆಗೆ ಕೆಳ ಸೇತುವೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಕೃಷ್ಣರಾಜಪುರ, ರಾಮಮೂರ್ತಿ ನಗರ, ಐಟಿಐ ಕಾಲೊನಿ ಕಡೆಗೆ ಸಾಗುವ ರಸ್ತೆ ತಾತ್ಕಾಲಿಕವಾಗಿ ಬಂದ್ ಆಗಲಿದೆ. ಈ ಅವಧಿಯಲ್ಲಿ ಐಟಿಐ ಕಾಲೊನಿ, ರಾಮಮೂರ್ತಿ ನಗರ ಮತ್ತು ಕೃಷ್ಣರಾಜಪುರ ತಲುಪಲು ಕೆ.ಆರ್. ಪುರ ಕೇಬಲ್-ಸ್ಟೇಯ್ಡ್ ಸೇತುವೆಯನ್ನು ಬಳಸಲು ರಸ್ತೆ ಬಳಕೆದಾರರಿಗೆ ಸೂಚಿಸಲಾಗಿದೆ.

ಐಟಿಪಿಎಲ್, ವೈಟ್ಫೀಲ್ಡ್ ಕಡೆಗೆ ಹೋಗುವ ರಸ್ತೆಯ ಸಂಚಾರವೂ ಸ್ಥಗಿತಗೊಳ್ಳುವುದರಿಂದ ಆ ಕಡೆಗೆ ಸಾಗುವವರು ಕೆ.ಆರ್. ಪುರ ಕೇಬಲ್-ಸ್ಟೇಯ್ಡ್ ಸೇತುವೆಯನ್ನು ಬಳಸಬಹುದು. ಕೆ.ಆರ್. ಪುರ–ಐಟಿಪಿಎಲ್ ಮುಖ್ಯ ರಸ್ತೆಯನ್ನು ಜೂನ್ 7 ಮತ್ತು 8ರಂದು ಬಂದ್ ಮಾಡಲಾಗುವುದು. ರಸ್ತೆ ಕೆಳ ಸೇತುವೆಯ ಬಳಿ ಒದಗಿಸಲಾದ ಬದಲಿ ಮಾರ್ಗವನ್ನು ಬಳಸಿ ಸಂಚರಿಸಬೇಕು ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-4-674800583

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.