ಬೆಂಗಳೂರು: ಲಾಲ್ಬಾಗ್ನಲ್ಲಿ ‘ಮಾವು ಮತ್ತು ಹಲಸು ಮೇಳ’ ಜೂನ್ 4ರಿಂದ ಆರಂಭವಾಗಲಿದ್ದು, ಈ ತಿಂಗಳ ಅಂತ್ಯದವರೆಗೂ ನಡೆಯಲಿದೆ.

ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ‘ಮಾವು ಮತ್ತು ಹಲಸು ಮೇಳ– 2026’ ಆಯೋಜಿಸಿದ್ದು, ನೈಸರ್ಗಿಕವಾಗಿ ಮಾಗಿಸಿದ, ರಾಸಾಯನಿಕ ಮುಕ್ತ ಹಣ್ಣುಗಳನ್ನು ರೈತರಿಂದಲೇ ಗ್ರಾಹಕರಿಗೆ ನೇರವಾಗಿ ತಲುಪಿಸುವುದು ನಮ್ಮ ಉದ್ದೇಶ’ ಎಂದು ನಿಗಮದ ಅಧ್ಯಕ್ಷ ಬಿ.ಸಿ. ಮುದ್ದು ಗಂಗಾಧರ್ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಮೇಳದ ಮೂಲಕ ನೇರ ಮಾರುಕಟ್ಟೆ ಒದಗಿಸುವುದರಿಂದ ರೈತರ ಶ್ರಮಕ್ಕೆ ನ್ಯಾಯಯುತ ಬೆಲೆ ಸಿಗಲಿದ್ದು, ಗ್ರಾಹಕರಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಹಣ್ಣುಗಳು ಲಭ್ಯವಾಗಲಿವೆ ಎಂದರು.

ಮಾವು ಬೆಳೆಗಾರರಿಗೆ 168 ಮಳಿಗೆ ಹಾಗೂ ಹಲಸು ಬೆಳೆಗಾರರಿಗೆ 17 ಮಳಿಗೆಗಳನ್ನು ಸಂಪೂರ್ಣ ಉಚಿತವಾಗಿ ನೀಡಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಕೊಪ್ಪಳ ಹಾಗೂ ಧಾರವಾಡ ಸೇರಿದಂತೆ ಪ್ರಮುಖ ಜಿಲ್ಲೆಗಳ ರೈತರು ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಬಾರಿಯ ಮೇಳದಲ್ಲಿ 65ಕ್ಕೂ ಹೆಚ್ಚು ವಿವಿಧ ತಳಿಯ ಮಾವು ಹಾಗೂ 15ಕ್ಕೂ ಹೆಚ್ಚು ತಳಿಯ ಹಲಸಿನ ಹಣ್ಣುಗಳನ್ನು ಪ್ರದರ್ಶಿಸಲಾಗುತ್ತಿದೆ. ಬಾದಾಮಿ, ರತ್ನಗಿರಿ ಆಲ್ಫಾನ್ಸೋ, ರಸಪುರಿ, ಮಲ್ಲಿಕಾ, ಸಿಂಧೂರ, ಇಮಾಮ್ ಪಸಂದ್, ಕೇಸರ್, ಶುಗರ್ ಬೇಬಿ, ದಶೇರಿ, ಬೇನಿಷಾನ್ ಮತ್ತು ಮಲಗೋವಾ ತಳಿಯ ಹಣ್ಣುಗಳು ಖರೀದಿಗೆ ಲಭ್ಯವಾಗಲಿವೆ. ಹಲಸಿನಲ್ಲಿ ತೂಬಗೆರೆ, ಲಾಲ್ಬಾಗ್ ಮಧುರ, ರುದ್ರಾಕ್ಷಿ, ಶಿವರಾತ್ರಿ, ಸೂರ್ಯ ಮತ್ತು ಚಂದ್ರ ತಳಿಗಳು ಪ್ರಮುಖ ಆಕರ್ಷಣೆಯಾಗಿವೆ ಎಂದು ಹೇಳಿದರು.

ರೈತರ ಆದಾಯ ಹೆಚ್ಚಿಸುವ ಉದ್ದೇಶ ದಿಂದ ಹಣ್ಣುಗಳಿಂದ ತಯಾರಿಸಿದ ಉಪ ಉತ್ಪನ್ನಗಳ ಮಾರಾಟಕ್ಕೂ ಮೇಳದಲ್ಲಿ ಅವಕಾಶ ನೀಡಲಾಗಿದೆ. ಮಾವು ಮತ್ತು ಹಲಸಿನಿಂದ ತಯಾರಿಸಿದ ಜ್ಯೂಸ್, ಜಾಮ್, ಉಪ್ಪಿನಕಾಯಿ, ಒಣಗಿಸಿದ ಹಣ್ಣಿನ ಚೂರುಗಳು, ಚಿಪ್ಸ್, ಪಲ್ಪ್, ಕ್ಯಾಂಡಿ ಹಾಗೂ ವಿಶೇಷ ಐಸ್ ಕ್ರೀಮ್ ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು.

ಮೇಳಕ್ಕೆ ಶುಲ್ಕವಿಲ್ಲ: ಲಾಲ್ಬಾಗ್ ಉದ್ಯಾನ ಪ್ರವೇಶಿಸಲು ವಯಸ್ಕರಿಗೆ ₹50 ಹಾಗೂ ಮಕ್ಕಳಿಗೆ ₹30 ಶುಲ್ಕವಿರುತ್ತದೆ. ಶಾಲಾ ಸಮವಸ್ತ್ರದಲ್ಲಿ ಬರುವ 10ನೇ ತರಗತಿಯೊಳಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ. ಮಾವು–ಹಲಸು ಮೇಳಕ್ಕೆ ಯಾವುದೇ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ. ವಾಯುವಿಹಾರಕ್ಕೆ ಬರುವವರೂ ಹಣ್ಣುಗಳನ್ನು ಖರೀದಿಸಲಿ ಎಂಬ ಉದ್ದೇಶದಿಂದ ಬೆಳಗ್ಗೆ 6ರಿಂದಲೇ ಮೇಳ ಆರಂಭವಾಗಲಿದ್ದು, ಸಂಜೆ 7ರವರೆಗೆ ನಡೆಯಲಿದೆ ಎಂದರು.

‘ಈ ಬಾರಿ ಮಳೆಯಿಂದ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಕಳೆದ ವರ್ಷ 1.39 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿತ್ತು. ಈ ವರ್ಷ 1.45 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದರೂ, ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಇಳುವರಿ ಕಡಿಮೆಯಾಗಿದೆ. ಮೇಳದಲ್ಲಿ 150 ಟನ್ಗೂ ಹೆಚ್ಚು ಮಾವು, 15 ಟನ್ಗೂ ಹೆಚ್ಚು ಹಲಸು ಮಾರಾಟವಾಗುವ ನಿರೀಕ್ಷೆ ಇದೆ. ₹1.8 ಕೋಟಿ ವಹಿವಾಟಿನ ಗುರಿ ಹೊಂದಲಾಗಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ವೇದಮೂರ್ತಿ ತಿಳಿಸಿದರು.

ರಫ್ತು: ಮಾಡಿಕೆರೆ ಮಾವು ಅಭಿವೃದ್ಧಿ ಕೇಂದ್ರದ ಪ್ಯಾಕ್ಹೌಸ್ನ ಮೂಲಕ ಅಮೆರಿಕ, ಜರ್ಮನಿ, ಯುಕೆ, ಐರ್ಲೆಂಡ್, ಲಂಡನ್ಗೆ 85 ಟನ್ ಮಾವು ರಫ್ತು ಮಾಡಲಾಗಿದೆ. ಜೂನ್ ಅಂತ್ಯಕ್ಕೆ ಈ ಪ್ರಮಾಣ 100 ಟನ್ಗೆ ತಲುಪಲಿದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-4-1673889991

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.