ಬೆಂಗಳೂರು: ಕೋಡಿಹಳ್ಳಿಯ ಮನೆಯೊಂದರಲ್ಲಿ ಬಾಡಿಗೆ ಹೆಚ್ಚಳದ ವಿಚಾರವಾಗಿ ನಡೆದ ಗಲಾಟೆಯ ಸಂಬಂಧ ಜೀವನ್ವಿಮಾ ನಗರ ಪೊಲೀಸ್ ಠಾಣೆಯಲ್ಲಿ ದೂರು–ಪ್ರತಿದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮನೆಯ ಮಾಲೀಕರಾದ ಶೋಭಾ– ದೇವರಾಜ್ ಹಾಗೂ ಬಾಡಿಗೆದಾರರಾದ ಉತ್ತರ ಪ್ರದೇಶದ ನರೇಶ್, ಸಚಿನ್ ಹಾಗೂ ಅವರ ಸಹೋದರಿ ರೇಖಾ ವಿರುದ್ಧ ಪ್ರಕರಣ ದಾಖಲಾಗಿದೆ.

‘ಸೌಟು, ಚಾಕು ಹಿಡಿದು ಪರಸ್ಪರ ಹೊಡೆದಾಟ ಮಾಡಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಾಡಿಗೆದಾರರು ಮನೆಗೆ ಬಂದ ವಾರಕ್ಕೇ ಬಾಡಿಗೆ ಹೆಚ್ಚಳ ಮಾಡುವುದಾಗಿ ಹೇಳಿದ್ದು, ಮುಂಗಡವಾಗಿ ಬಾಡಿಗೆ ನೀಡುವಂತೆ ಕೇಳಿದ್ದು ಗಲಾಟೆಗೆ ಕಾರಣವಾಗಿದೆ’ ಎಂದು ಪೊಲೀಸರು ಹೇಳಿದರು.

‘ಉತ್ತರ ಪ್ರದೇಶದ ನರೇಶ್, ಸಚಿನ್ ಮತ್ತು ರೇಖಾ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಬಾಡಿಗೆ ಮನೆಯ ಹುಡುಕಾಟದಲ್ಲಿ ಇದ್ದರು. ಶೋಭಾ, ದೇವರಾಜ್ ಅವರ ಕಟ್ಟಡದ ಎರಡನೇ ಮಹಡಿಯಲ್ಲಿ ಒಂದು ಮಲಗುವ ಕೋಣೆಯುಳ್ಳ ಮನೆ ಸಿಕ್ಕಿತ್ತು. ಪ್ರತಿ ತಿಂಗಳು ₹8 ಸಾವಿರ ಬಾಡಿಗೆಗೆ ಒಪ್ಪಂದ ಆಗಿತ್ತು’ ಎಂದು ಪೊಲೀಸರು ಹೇಳಿದರು.

ಎಲ್ಪಿಜಿ ದರ ಹೆಚ್ಚಾಗಿದೆ ಎಂದು ಹೇಳಿ ಕಿರುಕುಳ?: ‘ಮನೆಗೆ ಬಂದು ಒಂದು ವಾರ ಆಗಿತ್ತು. ಅಷ್ಟರಲ್ಲಿಯೇ ಕಿರುಕುಳ ನೀಡಲು ಆರಂಭಿಸಿದ್ದರು. ಎಲ್ಪಿಜಿ ಸಿಲಿಂಡರ್ ದರ ಹೆಚ್ಚಾಗಿದೆ. ₹10 ಸಾವಿರ ಬಾಡಿಗೆ ನೀಡಬೇಕೆಂದು ಒತ್ತಾಯಿಸಿದ್ದರು. ಮನೆಗೆ ಬಂದು ಒಂದು ವಾರ ಅಷ್ಟೇ ಆಗಿದೆ. ಈಗಲೇ ಬಾಡಿಗೆ ಹೆಚ್ಚು ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದೆವು. ಆಗ ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದರು. ಅದಾದ ಮೇಲೆ 15 ದಿನ ಸಮಯ ಕೇಳಿದ್ದೆವು’ ಎಂದು ಬಾಡಿಗೆದಾರರು ದೂರಿದರು.

‘ಬಾಡಿಗೆದಾರರು ಸಮಯ ಕೇಳಿದ್ದಕ್ಕೆ ಮನೆಯ ಮಾಲೀಕರು ಒಪ್ಪಿಗೆ ನೀಡಲಿಲ್ಲ. ಆ ವಿಚಾರವಾಗಿ ಬಾಡಿಗೆದಾರರು ಮತ್ತು ಮಾಲೀಕರ ಮಧ್ಯೆ ಗಲಾಟೆ ಆಗಿತ್ತು. ಶೋಭಾ ಹಾಗೂ ರೇಖಾ ಜುಟ್ಟು ಹಿಡಿದುಕೊಂಡು ಹೊಡೆದಾಟ ಮಾಡಿಕೊಂಡಿದ್ದಾರೆ. ಅಲ್ಲದೇ ಮನೆಯ ಮಾಲೀಕರು, ಪರಿಚಯಸ್ಥರನ್ನೂ ಕರೆಸಿ ಹಲ್ಲೆ ನಡೆಸಿದ್ದಾರೆ ಎಂದೂ ದೂರು ನೀಡಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಬಾಡಿಗೆದಾರರು ಆಧಾರ್ ಕಾರ್ಡ್ ಕೊಟ್ಟಿರಲಿಲ್ಲ. ಐದು ದಿನ ಕಳೆದರೂ ಒಪ್ಪಂದದ ಪತ್ರ ಮಾಡಿಸಿರಲಿಲ್ಲ. ಅನುಮಾನ ಬಂದು ಮನೆ ಖಾಲಿ ಮಾಡುವಂತೆ ಕೇಳಿದ್ದೆವು. ಆಗ ನಮ್ಮ ಮೇಲೆ ಹಲ್ಲೆ ನಡೆಸಿದ್ದರು’ ಎಂದು ಮನೆಯ ಮಾಲೀಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.