ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಅದರಲ್ಲೂ ಬೆಂಗಳೂರಿನಲ್ಲಿಯೇ ಇಡೀ ರಾಜ್ಯದ ಮುಕ್ಕಾಲು ಪ್ರಮಾಣದಷ್ಟು ಕೇಸ್ಗಳು ಇವೆ ಎಂಬುದು ಬಹಿರಂಗವಾಗಿದೆ.

ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕದ (NCRB) 2024ರ ವರದಿಯಲ್ಲಿ ಈ ಮಾಹಿತಿ ಕಂಡು ಬಂದಿದೆ. ಅದರ ಪ್ರಕಾರ ಸೈಬರ್ ಅಪರಾಧಗಳಲ್ಲಿ ಬೆಂಗಳೂರು ನಂಬರ್ 1!

ಕರ್ನಾಟಕದಲ್ಲಿ 2024 ರಲ್ಲಿ ಒಟ್ಟು 21,993 ಸೈಬರ್ ಕೇಸ್ ದಾಖಲಾಗಿವೆ. ಅದರ ಹಿಂದಿನ ವರ್ಷ 2023 ರಲ್ಲಿ 21,889 ಪ್ರಕರಣಗಳಿದ್ದವು. ಅಂದರೆ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಬೆಂಗಳೂಂದರಲ್ಲೇ 2023 ರಲ್ಲಿ 17,631 ಸೈಬರ್ ಕೇಸ್ಗಳು ದಾಖಲಾಗಿವೆ. 2024ರಲ್ಲಿ ಈ ಕೇಸ್ಗಳ ಸಂಖ್ಯೆ ಇದ್ದಿದ್ದು 17,561. ಒಟ್ಟು 3,632 ಪ್ರಕರಣಗಳು ಮಾತ್ರ ಇತ್ಯರ್ಥವಾಗಿದ್ದು 13,929 ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಉಳಿದಿವೆ.

2024 ರಲ್ಲಿ ಕರ್ನಾಟಕದಲ್ಲಿ ಒಟ್ಟು 5,096 ಸೈಬರ್ ಅಪರಾಧಗಳು ಶಿಕ್ಷೆಗೊಳಗಾಗಿದ್ದಾರೆ ಎಂದು ಎನ್ಸಿಆರ್ಬಿ ತಿಳಿಸಿದೆ.

ಒಟ್ಟಾರೆಯಾಗಿ ದೇಶದಲ್ಲಿ 2024 ರಲ್ಲಿ ಒಟ್ಟು 34,958 ಸೈಬರ್ ಕೇಸ್ ವರದಿಯಾಗಿವೆ. 4,939 ಪ್ರಕರಣಗಳೊಂದಿಗೆ ಮುಂಬೈ ಎರಡನೇ ಸ್ಥಾನದಲ್ಲಿದೆ. ನಂತರ ಹೈದರಾಬಾದ್ (4,009), ಚೆನ್ನೈ (1,882), ಪುಣೆ (1,504) ಮತ್ತು ಲಖನೌ ಕಂಡು ಬಂದಿವೆ (1,292).

ಕರ್ನಾಟಕದಲ್ಲಿ ಸೈಬರ್ ಕೇಸ್ ಹೆಚ್ಚುತ್ತಿರುವುದಕ್ಕೆ ಬೆಂಗಳೂರು ಪೊಲೀಸರು ಹೇಳುವುದೇ ಬೇರೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ನಮ್ಮ ಪ್ರಯತ್ನದಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಹೀಗಾಗಿ ಕೇಸ್ಗಳ ದಾಖಲಾತಿ ಹೆಚ್ಚುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಬೆಂಗಳೂರಿನಲ್ಲಿ 11 ವಿಶೇಷ ಸೈಬರ್ ಪೊಲೀಸ್ ಠಾಣೆಗಳಿರುವುದು ಕೇಸ್ಗಳ ದಾಖಲಾತಿ ಹೆಚ್ಚಳಕ್ಕೆ ಕಾರಣ ಹಾಗೂ ಆನ್ಲೈನ್ನಲ್ಲೂ ದೂರುಗಳನ್ನು ನೀಡುವುದಕ್ಕೆ ವ್ಯವಸ್ಥೆ ಇದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಇಡೀ ದೇಶದಲ್ಲಿಯೇ ಬೆಂಗಳೂರು ಸೈಬರ್ ಅಪರಾಧಗಳ ತಾಣವಾಗಿರುವುದು ಆತಂಕ ಮೂಡಿಸುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.