ಬೆಂಗಳೂರು: ‘ರಾಜ್ಯದಲ್ಲಿ ಮದ್ಯದಂಗಡಿಗಳ ಕಾರ್ಯನಿರ್ವಹಣಾ ಅವಧಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ’ ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರ ಬರೆದಿರುವ ಅವರು, ‘ರಾಜ್ಯದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಎಂಆರ್ಪಿ ಮಾರಾಟ ಮಳಿಗೆಗಳು ಸೇರಿ ಹಲವು ಸ್ವರೂಪದ ಮದ್ಯದಂಗಡಿಗಳು ಕಾರ್ಯನಿರ್ವ ಹಿಸುತ್ತಿವೆ. ಯಾವ ಮದ್ಯದಂಗಡಿಗಳೂ ಬೆಳಿಗ್ಗೆ 10ಕ್ಕೆ ಮೊದಲು ತೆರೆಯುವಂತಿಲ್ಲ ಮತ್ತು ರಾತ್ರಿ ನಿಗದಿಪಡಿಸಿದ ಸಮಯಕ್ಕೆ ಬಾಗಿಲು ಹಾಕಬೇಕು ಎಂಬ ನಿಯಮವಿದೆ’ ಎಂದಿದ್ದಾರೆ.

‘ನಾನು ನನ್ನ ವಿಧಾನಸಭಾ ಕ್ಷೇತ್ರದಲ್ಲಿನ ಪ್ರತಿ ವಾರ್ಡ್ಗೆ ಭೇಟಿ ಕೊಟ್ಟು, ಜನರೊಂದಿಗೆ ಮಾತನಾಡುತ್ತೇನೆ. ಕಾರ್ಯನಿರ್ವಹಣಾ ಅವಧಿಯನ್ನು ಉಲ್ಲಂಘಿಸಿ ಮದ್ಯದಂಗಡಿ ಗಳು ವ್ಯಾಪಾರ ನಡೆಸುತ್ತಿರುವುದು ಈ ವೇಳೆ ನನ್ನ ಗಮನಕ್ಕೆ ಬಂದಿದೆ. ಹಲವು ಮದ್ಯದಂಗಡಿಗಳು ಬೆಳಿಗ್ಗೆ 6ರ ಹೊತ್ತಿಗೇ ತೆರೆದಿರುತ್ತವೆ. ಅವಧಿ ಮೀರಿ ತಡರಾತ್ರಿಯಲ್ಲೂ ವ್ಯಾಪಾರ ನಡೆಸುತ್ತವೆ’ ಎಂದು ಆರೋಪಿಸಿದ್ದಾರೆ.

‘ರಾಜ್ಯದ ತೆರಿಗೆ ಆದಾಯಕ್ಕೆ ಮದ್ಯದಂಗಡಿಗಳು ಮಹತ್ವದ ಕೊಡುಗೆ ನೀಡುತ್ತವೆ ಎಂಬುದು ಸತ್ಯ. ಆದರೆ ಜನರ ಆರೋಗ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನೂ ಕಾಪಾಡಿಕೊಳ್ಳುವುದು ಸರ್ಕಾರದ ಹೊಣೆಗಾರಿಕೆ. ಕೇವಲ ಹೆಸರಿಗೆಂದು ‘ಮದ್ಯಪಾನ ಸಂಯಮ ಮಂಡಳಿ’ ಸ್ಥಾಪಿಸಿದರೆ ಸಾಲದು. ಮದ್ಯದಂಗಡಿಗಳ ಕಾರ್ಯನಿರ್ವಹಣಾ ಅವಧಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ. ಇಲ್ಲವೇ ‘ರಾಜ್ಯದಲ್ಲಿ ಮದ್ಯದಂಗಡಿಗಳು ದಿನದ 24 ಗಂಟೆಯೂ ತೆರೆದಿರಬಹುದು’ ಎಂದು ಫರ್ಮಾನು ಹೊರಡಿಸಿ’ ಎಂದು ಸವಾಲು ಹಾಕಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-4-2294453

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.