ಶುಕ್ರವಾರ, ಜನವರಿ 27, 2023
17 °C

ಮಕ್ಕಳ ಸಾವು ಕೊನೆಯವರೆಗೂ ಕಾಡುತ್ತದೆ: ನಟ ಕಬೀರ್‌ ಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಬೆಂಗಳೂರು: ಮಕ್ಕಳ ಸಾವು ಯಾವುದೇ ಪೋಷಕರನ್ನು ಕೊನೆಯವರೆಗೂ ಕಾಡುತ್ತದೆ. ತಂದೆ, ತಾಯಿಗೆ ಮಕ್ಕಳನ್ನು ಕಳೆದುಕೊಳ್ಳು
ವುದಕ್ಕಿಂತ ದೊಡ್ಡ ನೋವು ಬೇರೆ ಇರುವುದಿಲ್ಲ ಎಂದು ಚಿತ್ರನಟ ಕಬೀರ್‌ ಬೇಡಿ ಹೇಳಿದರು.

ಬೆಂಗಳೂರು ಸಾಹಿತ್ಯೋತ್ಸವದ ಎರಡನೇ ದಿನವಾದ ಭಾನುವಾರ, ‘ನಿಮ್ಮ ಆತ್ಮಕತೆಯಲ್ಲಿ ಮಗನ ಮರಣಪತ್ರದ ಕುರಿತು ಉಲ್ಲೇಖಿಸಿದ್ದೀರಿ. ತಂದೆಯಾದ ನಿಮ್ಮ ಬಗ್ಗೆ ಮಗ ಏನು ಹೇಳಿದ್ದ ಎಂಬುದರ ವಿವರವೇ ಕೃತಿಯಲ್ಲಿಲ್ಲ. ನಿಜವಾಗಿಯೂ ಏನಿತ್ತು’ ಎಂದು ಸಭಿಕರೊಬ್ಬರು ಪ್ರಶ್ನಿಸಿದಾಗ, ಭಾವುಕರಾದ ಬೇಡಿ, ಮಗನ ಸಾವಿನ ಕುರಿತು ಹೆಚ್ಚು ಮಾತನಾಡಲು ನಿರಾಕರಿಸಿದರು.

‘ಆಕಾಶವಾಣಿಯಲ್ಲಿ ಉದ್ಯೋಗ
ದಲ್ಲಿದ್ದೆ. ಕೆಲವರ ಅಸೂಕ್ಷ್ಮತೆಯ ಕಾರಣದಿಂದ ಅಲ್ಲಿಂದ ಹೊರಬಂದೆ. ನಂತರ ಸಿನಿಮಾ ರಂಗ ಪ್ರವೇಶಿಸಿದೆ. ಮಾಡೆಲಿಂಗ್‌ ಕ್ಷೇತ್ರದಲ್ಲಿರುವವರನ್ನು ಪ್ರೀತಿಸಬಾರದು ಎಂದು ನಿರ್ಧರಿಸಿದ್ದೆ. ಆದರೂ, ಪ್ರೊತಿಮಾ ಬೇಡಿಯೊಂದಿಗೆ ಪ್ರೇಮಾಂಕುರವಾಯಿತು. ಪಾಶ್ಚಿಮಾತ್ಯ ಶೈಲಿಯ ನೃತ್ಯಗಾತಿಯಾಗಿದ್ದ ಪ್ರೊತಿಮಾ, ಒಡಿಸ್ಸಿ ನೃತ್ಯ ಕಲಿಯಲು ಬಯಸಿದ್ದರು. ಆಗ ಸಂಪೂರ್ಣ ಬೆಂಬಲಕ್ಕೆ ನಿಂತಿದ್ದ ನಾನು, ಮಕ್ಕಳ ನಿರ್ವಹಣೆ ಮಾಡಿದೆ’ ಎಂದರು.

ನೃತ್ಯ ಶಾಲೆ ತೆರೆಯಲು ಪ್ರೊತಿಮಾ
ಸಾಕಷ್ಟು ಕಷ್ಟಪಟ್ಟಿದ್ದರು. ನೆರವು ಕೋರಿ ರಾಜೀವ್‌ ಗಾಂಧಿ ಸೇರಿದಂತೆ ಹಲವರಲ್ಲಿ ಮನವಿ ಮಾಡಿದ್ದರು. ರಾಮಕೃಷ್ಣ ಹೆಗಡೆ ನೆರವಿಗೆ ಬಂದರು. ನಂತರ ಹಲವರು ಕೈಜೋಡಿಸಿದರು. ಇದರಿಂದಾಗಿ ನೃತ್ಯಗ್ರಾಮ ಸ್ಥಾಪನೆ
ಯಾಯಿತು ಎಂದು ವಿವರಿಸಿದರು.

‘ಹಾಲಿವುಡ್‌ ಸೇರಿದಂತೆ ಹಲವು ದೇಶಗಳ, ಭಾಷೆಗಳ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ಹಲವು ಘಟನೆಗಳು ಜೀವನವನ್ನು ಅರಿಯಲು ಮತ್ತು ಬೆಳೆಯಲು ಸಹಕರಿಸಿದವು. ಭಾರತಕ್ಕೆ ಬರಬೇಕು ಎಂದು ಯಾವಾಗಲೂ ನನ್ನ ಮನಸ್ಸು ತುಡಿಯುತ್ತಿತ್ತು. ನಾನು ಇಲ್ಲಿಯವ, ಇದು ನನ್ನ ನೆಲ ಎಂಬ ಸಂತೋಷವೇ ಅದಕ್ಕೆ ಕಾರಣ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು