ಬೆಂಗಳೂರು: ವಾರದಿಂದ ಎಲ್ಪಿಜಿ ಸಿಲಿಂಡರ್ ವಿತರಣೆಯಲ್ಲಿ ಆಗುತ್ತಿದ್ದ ಅಡಚಣೆ ಪ್ರಮಾಣ ತಗ್ಗಿದ್ದು, ಗ್ರಾಹಕರ ಆತಂಕ ನಿಧಾನವಾಗಿ ದೂರವಾಗುತ್ತಿದೆ.

ಈಗಾಗಲೇ ಇಂಡೇನ್ ಹಾಗೂ ಭಾರತ್ ಗ್ಯಾಸ್ ಗ್ರಾಹಕರಿಗೆ ಬುಕ್ಕಿಂಗ್ ಆದ ನಂತರ ನಿಗದಿತ ಅವಧಿಯೊಳಗೆ ಸಿಲಿಂಡರ್ ಸರಬರಾಜು ಮಾಡಲಾಗುತ್ತಿದೆ.

ಸಿಲಿಂಡರ್ ಬುಕ್ಕಿಂಗ್ ನಂತರ ಪಡೆಯಲು ಗ್ರಾಹಕರು ನೇರವಾಗಿ ಗ್ಯಾಸ್ ಏಜೆನ್ಸಿ ಕಚೇರಿಗಳಿಗೆ ತೆರಳುವಂತಹ ಸನ್ನಿವೇಶ ಇತ್ತು. ಈಗ ಸಿಲಿಂಡರ್ ಸರಬರಾಜು ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಕಚೇರಿಗಳಿಗೆ ಬರುವ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿದೆ.

‘ಮೊದಲಿನಂತೆಯೇ ದೂರವಾಣಿ ಮೂಲಕವೇ ಬುಕ್ಕಿಂಗ್ ಪ್ರಕ್ರಿಯೆ ನಡೆದಿದ್ದು, ಗ್ರಾಹಕರಿಗೆ ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ’ ಎಂದು ಕಂಪನಿಯೊಂದರ ಪ್ರತಿನಿಧಿ ತಿಳಿಸಿದರು.

‘ಕಳೆದ ವಾರ ಸಿಲಿಂಡರ್ ವಿತರಣೆಯಲ್ಲಿ ವ್ಯತ್ಯಯ ಆಗಿದ್ದು ನಿಜ. ಜಾಗತಿಕವಾಗಿ ಆಗುತ್ತಿರುವ ಗೊಂದಲದಿಂದ ನಮಗೂ ತೊಂದರೆಯಾಗಲಿದೆ ಎಂದುಕೊಂಡು ಸಿಲಿಂಡರ್ ಸಂಗ್ರಹಿಸಿಟ್ಟುಕೊಳ್ಳಲು ಮುಂದಾದೆವು. ಬುಕ್ಕಿಂಗ್ ಕೂಡ ಖಚಿತ ಆಗುತ್ತಿರಲಿಲ್ಲ. ಈಗ ಪರಿಸ್ಥಿತಿ ಸುಧಾರಿಸಿದೆ. ಸಿಲಿಂಡರ್ ನಮಗೆ ತಲುಪಿದೆ’ ಎಂದು ಆರ್.ಆರ್. ನಗರದ ಗ್ರಾಹಕರಾದ ಆರ್.ಲಕ್ಷ್ಮಿ ತಿಳಿಸಿದರು.

ಆದರೆ, ಹಿಂದೂಸ್ಥಾನ್ ಪೆಟ್ರೋಲಿಯಂ( ಎಚ್ಪಿ) ಗ್ರಾಹಕರಿಗೆ ಮಾತ್ರ ನಿಗದಿತ ಅವಧಿಯೊಳಗೆ ಸಿಲಿಂಡರ್ ಸರಬರಾಜು ಇನ್ನೂ ಆಗುತ್ತಿಲ್ಲ. ಅಲ್ಲಲ್ಲಿ ವ್ಯತ್ಯಯದ ದೂರುಗಳು ಕೇಳಿ ಬರುತ್ತಿವೆ. ಕೆಲವರಿಗೆ ಒಂದು ವಾರವಾದರೂ ಸಿಲಿಂಡರ್ ಬಂದಿಲ್ಲ.

‘ನಮ್ಮದು ಹಾಗೂ ನಮ್ಮ ಪಕ್ಕದ ಮನೆಯವರದ್ದು ಎಚ್ಪಿ ಏಜೆನ್ಸಿ. ಬುಕ್ಕಿಂಗ್ ಮಾಡಿದರೆ ಈಗಲೂ ತಡವಾಗುತ್ತಿದೆ. ಇನ್ನೂ ಪರಿಸ್ಥಿತಿ ಸುಧಾರಿಸಿದಂತೆ ಕಾಣುತ್ತಿಲ್ಲ’ ಎಂದು ಗ್ರಾಹಕರಾದ ಶ್ರೀನಿಧಿ ಆತ್ರೇಯ ಹೇಳಿದರು.

ಮಾಂಸ ಮಾರಾಟದಲ್ಲಿ ವ್ಯತ್ಯಯ: ವಾಣಿಜ್ಯ ಸಿಲಿಂಡರ್ ಕೊರತೆಯಿಂದ ನಗರದಲ್ಲಿ ಮಾಂಸ ಹಾಗೂ ಮೀನಿನ ಮಾರಾಟದಲ್ಲೂ ವ್ಯತ್ಯಯವಾಗಿದೆ. ಒಂದು ವಾರದಲ್ಲಿ ವಹಿವಾಟಿನಲ್ಲಿ ಶೇ 30ರಷ್ಟು ಕುಸಿತ ಕಂಡು ಬಂದಿದೆ.

‘ವಾಣಿಜ್ಯ ಸಿಲಿಂಡರ್ ಸಮಸ್ಯೆಯಿಂದಾಗಿ ಮಾಂಸದೂಟ ಮಾಡುವವರ ಪ್ರಮಾಣದಲ್ಲಿ ಇಳಿಕೆಯಾದಂತೆ ಕಾಣುತ್ತಿದೆ. ಹೋಟೆಲ್, ರೆಸ್ಟೋರೆಂಟ್ಗಳ ಮೆನುಗಳಲ್ಲೂ ಕೊಂಚ ಬದಲಾವಣೆಯಾಗಿದೆ. ಇದರಿಂದ ಮಾಂಸ, ಮೀನು ಖರೀದಿಗೆ ಹೆಚ್ಚಿನ ಮಂದಿ ಬರುತ್ತಿಲ್ಲ’ ಎಂದು ವ್ಯಾಪಾರಸ್ಥರೊಬ್ಬರು ತಿಳಿಸಿದರು.

‘ಪ್ರತಿ ನಿತ್ಯ 80ರಿಂದ 100 ಕೆಜಿವೆರೆಗೂ ಕೋಳಿ ಮಾಂಸ ಖರೀದಿಸುವವರು ಇದ್ದರು. ಅವರಿಗೆ 10 ಕೆಜಿ ಖರೀದಿಸಿದರೆ ಹೆಚ್ಚು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಶಿವಾಜಿನಗರದ ರಸೆಲ್ ಮಾರುಕಟ್ಟೆ, ಯಶವಂತಪುರ ಮಾಂಸದ ಮಾರುಕಟ್ಟೆಯಲ್ಲಿ ಮೀನು ಮಾರಾಟವೂ ಕುಸಿದಿದೆ. ಅಲ್ಲಿರುವ 220 ವ್ಯಾಪಾರಸ್ಥರು ನಿತ್ಯ ಸಮುದ್ರ ಮೀನು ಮಾರಾಟ ಮಾಡುತ್ತಿದ್ದರು. 20ರಿಂದ 30 ಕೆಜಿ ಮೀನು ಖರೀದಿಸುತ್ತಿದ್ದವರು ಈಗ 3ರಿಂದ 4 ಕೆಜಿ ಮಾತ್ರ ಖರೀದಿ ಮಾಡುತ್ತಿದ್ದಾರೆ’ ಎಂದು ಮಾಂಸದ ವ್ಯಾಪಾರಿ ಸೈಯದ್ ಖಾನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.