ಬೆಂಗಳೂರು: ಪ್ರೇಯಸಿ ಜತೆಗಿದ್ದ ದೃಶ್ಯವನ್ನು ವಿಡಿಯೊ ಮಾಡಿಕೊಂಡಿದ್ದ ಸ್ನೇಹಿತನನ್ನು ಅಪಹರಿಸಿ, ಹಲ್ಲೆ ನಡೆಸಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂನ ಸಾಜೀದ್ (23), ಈತನ ಸಹಚರರಾದ ಟಿ.ಸಿ.ಪಾಳ್ಯ ನಿವಾಸಿ ಸುಬ್ರಹ್ಮಣಿ (19), ಆಟೊ ಚಾಲಕ ವಿನ್ಸೆಂಟ್ (21) ಮತ್ತು ಚಿಂಟು(23) ಬಂಧಿತರು. ಇದೇ ಪ್ರಕರಣದಲ್ಲಿ ಬಾಲಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಶಬ್ಬೀರ್ ಎಂಬಾತನನ್ನು ಅಪಹರಣ ಮಾಡಿ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಅಸ್ಸಾಂನ ಶಬ್ಬೀರ್ ಮತ್ತು ಸಾಜೀದ್ ಸ್ನೇಹಿತರು. ಮೂರು ವರ್ಷಗಳಿಂದ ನಗರದಲ್ಲಿ ಕೆಲಸ ಮಾಡಿಕೊಂಡು, ಟಿ.ಸಿ.ಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶಬ್ಬೀರ್ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ಸಾಜೀದ್, ಬ್ಲಿಂಕಿಟ್ನಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಸಾಜೀದ್, ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇತ್ತೀಚೆಗೆ ಕೆ.ಆರ್.ಪುರದಲ್ಲಿ ಆಕೆ ಜತೆ ಆತ್ಮೀಯವಾಗಿ ಮಾತನಾಡುತ್ತಿದ್ದ ದೃಶ್ಯಗಳನ್ನು ಶಬ್ಬೀರ್ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡಿದ್ದ. ಈ ವಿಚಾರ ತಿಳಿದ ಆರೋಪಿ, ಅದನ್ನು ಡಿಲೀಟ್ ಮಾಡುವಂತೆ ಹೇಳಿದ್ದಾನೆ. ಆದರೆ, ಶಬ್ಬೀರ್ ಒಪ್ಪಿಕೊಂಡಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ಹೇಳಿದರು.

ಮಾರ್ಚ್ 15ರಂದು ರಾತ್ರಿ 11 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಲಕ್ಷ್ಮೀ ಸಾಗರ್ ಲೇಔಟ್ನಲ್ಲಿ ಸ್ನೇಹಿತರ ಮನೆ ಬಳಿ ಹೋಗುವಾಗ ಆಟೋದಲ್ಲಿ ಬಂದ ಆರೋಪಿಗಳು, ಶಬ್ಬೀರ್ನನ್ನು ಅಪಹರಿಸಿದ್ದಾರೆ. ಬಳಿಕ ರಾಮಮೂರ್ತಿ ನಗರದ ಕಡೆ ಕರೆದೊಯ್ದು ಹಲ್ಲೆ ನಡೆಸಿ, ಆತನ ಮೊಬೈಲ್ನಲ್ಲಿರುವ ಸಾಜೀದ್ ಮತ್ತು ಆತನ ಪ್ರೇಯಸಿಯ ವಿಡಿಯೊವನ್ನು ಡಿಲೀಟ್ ಮಾಡಿಸಿ, ಬಳಿಕ ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ಶಬ್ಬೀರ್ ದೂರು ನೀಡಿದ್ದ. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.