ಬೆಂಗಳೂರು: ಸುಲಿಗೆಕೋರರ, ಕಳ್ಳಕಾಕರ, ವೇಶ್ಯಾವಾಟಿಕೆಯ ಹಾವಳಿಗೆ ಈಡಾಗಿದ್ದ ‘ಮೆಜೆಸ್ಟಿಕ್’ನಲ್ಲಿ ಕಳೆದ ಒಂದು ತಿಂಗಳಿನಿಂದ ಪರಿಸ್ಥಿತಿ ಬದಲಾಗಿದೆ. ಪೊಲೀಸರು ಪ್ರತಿದಿನ ಎರಡು ಬಾರಿ ಪಥ ಸಂಚಲನ ಮಾಡುತ್ತಿದ್ದಾರೆ. ಜನರು ನಿರ್ಭೀತಿಯಿಂದ ಓಡಾಡುವಂತಾಗಿದೆ.

ಬಿಎಂಟಿಸಿ ಬಸ್ನಿಲ್ದಾಣ, ಗುಬ್ಬಿ ತೋಟದಪ್ಪ ರಸ್ತೆ, ಧನ್ವಂತರಿ ರಸ್ತೆ ಸಂಪರ್ಕ ಕಲ್ಪಿಸುವ ಪಾದಚಾರಿ ಮೇಲ್ಸೇತುವೆ, ರೈಲು ನಿಲ್ದಾಣದ ಕಡೆಗೆ ಸಾಗುವ ಅಂಡರ್ ಪಾಸ್ಗಳು ಅಪಾಯಕಾರಿ ಸ್ಥಳಗಳಾಗಿ ಪರಿವರ್ತನೆಗೊಂಡಿದ್ದವು. ರಾತ್ರಿ ಹೊತ್ತಿಗೆ ಒಂಟಿಯಾಗಿ ಸಂಚರಿಸುವುದೇ ಕಷ್ಟವಾಗಿತ್ತು. ಹೆಣ್ಣು ಮಕ್ಕಳು ಹೋಗುತ್ತಿದ್ದರೆ ‘ಬೆಲೆವೆಣ್ಣು’ಗಳೆಂದು ತಿಳಿದು ಕರೆಯುವುದು ಒಂದು ಕಡೆಯಾದರೆ, ಪುರುಷರು ಒಂಟಿಯಾಗಿ ಹೋದರೆ ಸುಲಿಗೆ ಮಾಡಲಾಗುತ್ತಿತ್ತು. ಪಾದಚಾರಿ ಮೇಲ್ಸೇತುವೆಯು ಲೈಂಗಿಕ ಕಾರ್ಯಕರ್ತೆಯರ, ಲಿಂಗತ್ವ ಅಲ್ಪಸಂಖ್ಯಾತರ ತಾಣವಾಗಿತ್ತು.

ಈ ಸಮಸ್ಯೆಗಳ ಬಗ್ಗೆ ‘ಮೆಜೆಸ್ಟಿಕ್: ಅಕ್ರಮಗಳ ಹಾವಳಿ’ ಎಂಬ ವರದಿ ಮೂಲಕ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು. ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ಅಧಿಕಾರಿಗಳು ಸೂಚನೆ ನೀಡಿದ್ದರು. ಈ ನಡುವೆ ಯುವತಿಯರ ಮೊಬೈಲ್ ಕಿತ್ತುಕೊಂಡು ಓಡಿದ ಕಿಡಿಗೇಡಿಯನ್ನು ಹಿಡಿದು ಸ್ಥಳೀಯರು ಥಳಿಸಿದ್ದರು. ಪೊಲೀಸರ ನಿಷ್ಕ್ರಿಯತೆ ಬಗ್ಗೆ ಮತ್ತೆ ‘ಪ್ರಜಾವಾಣಿ’ಯಲ್ಲಿ ವರದಿ ಬಂದ ಬಳಿಕ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿದೆ.

ಉಪ್ಪಾರಪೇಟೆ ಪೊಲೀಸರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪಥಸಂಚಲನ ಮಾಡುತ್ತಿದ್ದಾರೆ. ಉಳಿದ ಸಮಯದಲ್ಲಿ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ.

‘ಕೆಲವರು ಮಾಡುವ ಅನುಚಿತ ವರ್ತನೆಯಿಂದಾಗಿ ನಗರದ ಪ್ರತಿಷ್ಠೆ ಹಾಳಾಗುತ್ತಿತ್ತು. ಬಸ್ ನಿಲ್ದಾಣದ ಹೆಸರೂ ಹಾಳಾಗಿತ್ತು. ಪೊಲೀಸ್ ಇಲಾಖೆಗೂ ಕೆಟ್ಟ ಹೆಸರು ತಂದಿತ್ತು. ಬೇರೆ ಬೇರೆ ಪೊಲೀಸ್ ಠಾಣೆಗಳ 15ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿರುವುದರಿಂದ ಸಮಸ್ಯೆ ನಿಯಂತ್ರಣಕ್ಕೆ ಬಂದಿದೆ. ಮೇಲ್ಸೇತುವೆ ಮೇಲೆ ಲೈಂಗಿಕ ಕಾರ್ಯಕರ್ತೆಯರನ್ನು, ಲಿಂಗತ್ವ ಅಲ್ಪಸಂಖ್ಯಾತರನ್ನು ಪ್ರವೇಶಿಸಲು ಬಿಡುತ್ತಿಲ್ಲ’ ಎಂದು ಪೊಲೀಸರೊಬ್ಬರು ತಿಳಿಸಿದರು.

‘ಪಾದಚಾರಿ ಮೇಲ್ಸೇತುವೆಯಲ್ಲಿ ಈಗ ವೇಶ್ಯಾವಾಟಿಕೆಗೆ ಗ್ರಾಹಕರನ್ನು ಕಾದು ಕುಳಿತುಕೊಳ್ಳುವ ಲೈಂಗಿಕ ಕಾರ್ಯಕರ್ತೆಯರು, ಲಿಂಗತ್ವ ಅಲ್ಪಸಂಖ್ಯಾತರು ಕಾಣುತ್ತಿಲ್ಲ. ಕೆಎಸ್ಆರ್ಟಿಸಿ, ಬಿಎಂಟಿಸಿ, ರೈಲು ನಿಲ್ದಾಣಗಳಿಗೆ ಜನರು ಯಾವುದೇ ಅಳುಕು ಇಲ್ಲದೇ ಸಂಚರಿಸುತ್ತಿದ್ದಾರೆ’ ಎಂದು ಬಿಎಂಟಿಸಿ ನೌಕರರು ಮಾಹಿತಿ ನೀಡಿದರು.

‘ಬಂದೋಬಸ್ತ್ ಮುಂದುವರಿಯಲಿ’

‘ನಾನು ಬಹಳ ಸಮಯದಿಂದ ಬಸ್ ರೈಲ್ವೆ ಸ್ಟೇಷನ್ಗೆ ಊರಿಗೆ ಹೋಗಲು ಪಾದಚಾರಿ ಮೇಲ್ಸೇತುವೆಯನ್ನು ಬಳಸುತ್ತಿದ್ದೇನೆ. ಮರ್ಯಾದಸ್ಥರು ಓಡಾಡಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇತ್ತು. ಆದರೂ ಅನಿವಾರ್ಯವಾಗಿ ಜನರು ಸಂಚರಿಸುತ್ತಿದ್ದರು. ಕೆಲವು ದಿನಗಳಿಂದ ಈಚೆಗೆ ಪೊಲೀಸರ ಬಂದೋಬಸ್ತ್ನಿಂದಾಗಿ ಕುಟುಂಬ ಸಮೇತ ಎಲ್ಲರೂ ಓಡಾಡುವ ಸ್ಥಿತಿಗೆ ಮರಳಿದೆ’ ಎಂದು ಪ್ರಯಾಣಿಕ ನವೀನ ಮಳವಳ್ಳಿ ತಿಳಿಸಿದರು. ಪೊಲೀಸರು ನಿಗಾ ವಹಿಸಿರುವುದರಿಂದ ಸಾರ್ವಜನಿಕರಿಗೆ ಒಳ್ಳೆಯದಾಗಿದೆ. ಇದನ್ನು ನಾಲ್ಕು ದಿನ ಮಾಡಿ ನಿಲ್ಲಿಸಬಾರದು. ಬಂದೋಬಸ್ತ್ ಮುಂದುವರಿಯಬೇಕು. ವೇಶ್ಯಾವಾಟಿಕೆ ಸುಲಿಗೆ ಕಳ್ಳತನ ಪ್ರಕರಣಗಳು ಮರುಕಳಿಸಬಾರದು ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.