ಬೆಂಗಳೂರು: ಅಂಗಡಿಯ ಉದ್ಘಾಟನೆಗೆ ಮಹಿಳೆಯರನ್ನು ಕರೆದೊಯ್ಯುವ ನೆಪದಲ್ಲಿ ಚಿನ್ನಾಭರಣ ದೋಚುತ್ತಿದ್ದ ಆರೋಪಿಯನ್ನು ರಾಜಾಜಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪ್ರವೀಣ್ ಭಟ್ ಬಂಧಿತ. ಆರೋಪಿಯಿಂದ ₹15 ಲಕ್ಷ ಮೌಲ್ಯದ 116 ಗ್ರಾಂ ಚಿನ್ನಾಭರಣ, 409 ಗ್ರಾಂ ಬೆಳ್ಳಿ ವಸ್ತು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ದೇವಾಲಯದ ಅರ್ಚಕರನ್ನೇ ಗುರಿಯಾಗಿಸಿ ಪ್ರವೀಣ್ ಭಟ್ ಕೃತ್ಯ ಎಸಗುತ್ತಿದ್ದ. ಶ್ರೀಮಂತ ಉದ್ಯಮಿಯ ಸೋಗಿನಲ್ಲಿ ಪ್ರಸಿದ್ಧ ದೇಗುಲಗಳ ಅರ್ಚಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಆಗಾಗ ಪೂಜೆ ಮಾಡಿಸಿ, ದೇವಸ್ಥಾನಕ್ಕೆ ದೇಣಿಗೆ ನೀಡುವ ಮೂಲಕ ಅರ್ಚಕರ ವಿಶ್ವಾಸ ಗಳಿಸುತ್ತಿದ್ದ. ಹೊಸ ಅಂಗಡಿ ಉದ್ಘಾಟನೆಗೆ ವಿಶೇಷ ಪೂಜೆ ಮಾಡಿಸಲಾಗುತ್ತಿದೆ. ಇದಕ್ಕೆ ಮುತ್ತೈದೆಯರು ಬೇಕೆಂದು ಆರೋಪಿ ಹೇಳುತ್ತಿದ್ದ. ಇದಕ್ಕಾಗಿ ಅರ್ಚಕರ ಪತ್ನಿಯರು ಅಥವಾ ಅವರ ಮನೆಯ ಮಹಿಳೆಯರನ್ನು ಕಳುಹಿಸುವಂತೆ ಮನವಿ ಮಾಡುತ್ತಿದ್ದ. ಆರೋಪಿ ಮಾತು ನಿಜವೆಂದು ನಂಬಿದ್ದ ಕೆಲವು ಅರ್ಚಕರು, ಪತ್ನಿಯರನ್ನು ಪೂಜೆಗೆ ಕಳುಹಿಸಿದ್ದರು.

ಪೂಜೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಮಹಿಳೆಯರನ್ನು ಆಟೊದಲ್ಲಿ ಆರೋಪಿ ಪ್ರವೀಣ್ ಕರೆದೊಯ್ಯುತ್ತಿದ್ದ. ಮಾರ್ಗ ಮಧ್ಯೆದಲ್ಲಿಯೇ ‘ನೀವು ಹೋಗುವ ಜಾಗದಲ್ಲಿ ಒಡವೆಗಳನ್ನು ಹಾಕಿಕೊಳ್ಳಬಾರದು, ನನ್ನ ಬಳಿ ಕೊಡಿ. ನಂತರ ನಾನೇ ಕೊಡುತ್ತೇನೆ’ ಎಂದು ಹೇಳುತ್ತಿದ್ದ. ಆರೋಪಿಯ ಮಾತು ನಂಬುತ್ತಿದ್ದ ಮಹಿಳೆಯರು, ಧರಿಸಿದ್ದ ಆಭರಣಗಳನ್ನು ಆತನ ಕೈಗೆ ಕೊಡುತ್ತಿದ್ದರು. ಬಳಿಕ ಮಾರ್ಗಮಧ್ಯೆ ಮಹಿಳೆಯರನ್ನು ಬಿಟ್ಟು ಚಿನ್ನಾಭರಣಗಳ ಜತೆಗೆ ಪರಾರಿಯಾಗುತ್ತಿದ್ದ’ ಎಂದು ಪೊಲೀಸರು ಹೇಳಿದರು.

ಆರೋಪಿ ಇದೇ ಮಾದರಿಯಲ್ಲಿ ಹಲವು ಕಡೆ ವಂಚಿಸಿದ್ದಾನೆ. ಆರೋಪಿಯ ವಿರುದ್ಧ ಹೆಬ್ಬಾಳ, ರಾಮಮೂರ್ತಿನಗರ, ಸಿಟಿ ಮಾರ್ಕೆಟ್, ರಾಜಾಜಿನಗರ ಹಾಗೂ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.