ಬೆಂಗಳೂರು: ವಿವಾಹಕ್ಕೆ ಸಂಬಂಧಿಸಿದ ವೆಬ್ಸೈಟ್ನಲ್ಲಿ ಪರಿಚಯವಾಗಿದ್ದ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ, ಹಣಕ್ಕೆ ಬೇಡಿಕೆಯೊಡ್ಡಿ ವಂಚಿಸಿದ ಆರೋಪದ ಅಡಿ ಯುವಕನ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನ ಪ್ರದೀಪ್ ಸೋಲೊಮನ್ ಹಾಗೂ ಅವರ ತಾಯಿ ಕಲಾವತಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಆಡುಗೋಡಿಯ ಪ್ಯಾಟ್ರಿಕ್ ರಾಜು ಎಂಬುವರು ದೂರು ನೀಡಿದ್ದಾರೆ.

‘ಪ್ಯಾಟ್ರಿಕ್ ರಾಜುಗೆ 25 ವರ್ಷದ ಪುತ್ರಿ ಇದ್ದಾರೆ. ವಿವಾಹಕ್ಕೆ ಸಂಬಂಧಿಸಿದ ವೆಬ್ಸೈಟ್ನಲ್ಲಿ ವರನನ್ನು ಹುಡುಕುತ್ತಿದ್ದರು. ಆ ವೇಳೆ ಪ್ರದೀಪ್ ಸೋಲೊಮನ್ ಹಾಗೂ ಅವರ ತಾಯಿ ಕಲಾವತಿ ಅವರು ಪ್ಯಾಟ್ರಿಕ್ ರಾಜು ಅವರನ್ನು ಸಂಪರ್ಕಿಸಿದ್ದರು’ ಎಂಬ ದೂರು ಆಧರಿಸಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

‘ನ್ಯಾಯಾಧೀಶ ಹುದ್ದೆಗೆ ಪರೀಕ್ಷೆ ಬರೆದಿದ್ದು, ಈ ಬಾರಿ ನ್ಯಾಯಾಧೀಶ ಆಗುತ್ತೇನೆ’ ಎಂಬುದಾಗಿ ಪ್ರದೀಪ್ ಸುಳ್ಳು ಹೇಳಿದ್ದರು. ಮೈಸೂರಿನಲ್ಲಿ ಇರುವ ಆರೋಪಿಯ ಮನೆಗೆ ಪ್ಯಾಟ್ರಿಕ್ ರಾಜು ಕುಟುಂಬಸ್ಥರೊಂದಿಗೆ ಹೋಗಿದ್ದರು. ಆಗ ಮೈಸೂರಿನಲ್ಲಿ ಮೂರು ಎಕರೆ ಜಾಗ, ಒಂದು ಕಾಂಪ್ಲೆಕ್ಸ್ ಇರುವುದಾಗಿ ಪ್ರದೀಪ್ ನಂಬಿಸಿದ್ದರು. ಜೊತೆಗೆ, ಪಿಎಚ್.ಡಿ ಪದವೀಧರ ಎಂಬುದಾಗಿ ಸುಳ್ಳು ಮಾಹಿತಿ ನೀಡಿದ್ದರು’ ಎಂದು ದೂರಲಾಗಿದೆ.

‘ಪ್ಯಾಟ್ರಿಕ್ ರಾಜು ಮನೆಗೆ ಬಂದಿದ್ದ ಪ್ರದೀಪ್ ಹಾಗೂ ವರನ ತಾಯಿ, ವರದಕ್ಷಿಣೆಯಾಗಿ ಒಂದು ಕಾರು, 1 ಕೆ.ಜಿ ಚಿನ್ನ, ಬೆಂಗಳೂರಿನಲ್ಲಿ1 ಮನೆ ಮತ್ತು ಹುಡುಗನಿಗೆ ಚಿನ್ನದ ಚೈನು, ಉಂಗುರ ಹಾಗೂ ಕೈಗಡಿಯಾರ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ನಿಶ್ಚಿತಾರ್ಥ ಮುಗಿದ ಬಳಿಕ ವರದಕ್ಷಿಣೆ ಹಣ ಮತ್ತು ಚಿನ್ನದ ಒಡವೆಯೊಂದಿಗೆ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಟ್ಟರೆ ಮದುವೆ ಮಾಡಿಕೊಳ್ಳುತ್ತೇನೆ. ಇಲ್ಲವಾದಲ್ಲಿ ಮದುವೆ ನಿಲ್ಲಿಸುವುದಾಗಿ ಆರೋಪಿ ಪ್ರದೀಪ್ ತಿಳಿಸಿದ್ದರು’ ಎಂದು ದೂರು ನೀಡಲಾಗಿದೆ.

‘ವರದಕ್ಷಿಣೆಯಾಗಿ ₹20 ಲಕ್ಷ ಪಡೆಯಲಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-18-1761175168

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.