ಕೆ.ಆರ್.ಪುರ: ವೈಟ್ಫೀಲ್ಡ್ನ ಹೂಡಿಯಲ್ಲಿ ನಿರ್ಮಿಸಿರುವ 100 ಹಾಸಿಗೆ ಸಾಮರ್ಥ್ಯದ ಮೆಡಿಕವರ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಚಿತ್ರನಟಿ ರುಕ್ಮಿಣಿ ವಸಂತ ಉದ್ಘಾಟಿಸಿದರು.

ಗರ್ಭಧಾರಣೆ, ನವಜಾತ ಶಿಶುವಿನ ತೀವ್ರ ನಿಗಾ ಘಟಕ, ಮಕ್ಕಳ ತುರ್ತು ಚಿಕಿತ್ಸೆ ಸೇವೆ ಒದಗಿಸಲಾಗುತ್ತದೆ. ಲೆವೆಲ್-3 ಎನ್ಐಸಿಯು, ಪಿಐಸಿಯು, ಮೆಟರ್ನಲ್ ಐಸಿಯು, ರೊಬೋಟಿಕ್ ಶಸ್ತ್ರಚಿಕಿತ್ಸೆ ಹಾಗೂ 24x7 ಮಕ್ಕಳ ತುರ್ತು ಚಿಕಿತ್ಸಾ ಸೇವೆಗಳು ಒಂದೇ ಸೂರಿನಡಿ ಲಭ್ಯವಿದೆ.

ಉದ್ಘಾಟನೆ ಅಂಗವಾಗಿ ವಿಶೇಷ ಪ್ಯಾಕೇಜ್ ಪರಿಚಯಿಸಿದೆ.

ನಟಿ ರುಕ್ಮಿಣಿ ವಸಂತ ಮಾತನಾಡಿ, ‘ತಾಯಿಯ ಪ್ರೀತಿ ಪ್ರತಿಯೊಂದು ಮನೆಯ ಹೃದಯ ಬಡಿತದಂತಿದೆ. ಆ ಹೃದಯವನ್ನು ಕಾಪಾಡುವ ಈ ರೀತಿಯ ಆಸ್ಪತ್ರೆಯನ್ನು ತಾಯಂದಿರ ದಿನದಂದು ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ಸಂತೋಷದ ಸಂಗತಿ’ ಎಂದರು.

ಆಸ್ಪತ್ರೆಯ ಅಧ್ಯಕ್ಷ ಡಾ.ಜಿ.ಅನಿಲ್ ಕೃಷ್ಣ ಮಾತನಾಡಿ, ‘ತಾಯಿ ಮತ್ತು ಮಕ್ಕಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ರೂಪುಗೊಂಡ ಆಸ್ಪತ್ರೆಯನ್ನು ನಗರಕ್ಕೆ ನೀಡುತ್ತಿದ್ದೇವೆ’ ಎಂದರು.

ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಹರಿಕೃಷ್ಣ ಮಾತನಾಡಿ, ‘ಈ ಆಸ್ಪತ್ರೆ ಸ್ಥಳೀಯ ಪ್ರದೇಶದ ಜನರಿಗೆ ದೀರ್ಘಕಾಲಿಕ ಆರೋಗ್ಯ ಸೇವೆಗೆ ಬದ್ಧತೆಯಾಗಲಿದೆ’ ಎಂದರು. ಆಸ್ಪತ್ರೆಯ ವೈದ್ಯರಾದ ಸಿದ್ದರೆಡ್ಡಿ, ಪ್ರವೀಣ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-4-884272459

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.