ಬೆಂಗಳೂರು: ನಮ್ಮ ಮೆಟ್ರೊ ನೀಲಿ ಮಾರ್ಗದಲ್ಲಿ ನಡೆಯುತ್ತಿರುವ ಕಾಮಗಾರಿಯ ತ್ಯಾಜ್ಯವನ್ನು ವಿಲೇವಾರಿ ಮಾಡದೇ ಹೊರವರ್ತುಲ ರಸ್ತೆ ಬದಿಯಲ್ಲೇ ರಾಶಿ ಹಾಕಲಾಗಿದೆ.

ಕೇಂದ್ರ ರೇಷ್ಮೆ ಮಂಡಳಿಯಿಂದ ಕೆ.ಆರ್.ಪುರವರೆಗೆ ಹಾಗೂ ಅಲ್ಲಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಎರಡು ಹಂತದಲ್ಲಿ ನೀಲಿ ಮಾರ್ಗದ ಕಾಮಗಾರಿಗಳು ನಡೆಯುತ್ತಿವೆ. ಹೊರವರ್ತುಲ ರಸ್ತೆಯಲ್ಲಿ ಬಾಣಸವಾಡಿಯ ವಿಜಯ ಬ್ಯಾಂಕ್ ಕಾಲೊನಿ, ಎಚ್ಬಿಆರ್ ಲೇಔಟ್, ನಾಗವಾರ ರಸ್ತೆ ಸಹಿತ ವಿವಿಧೆಡೆ ನಿರ್ಮಾಣ ತ್ಯಾಜ್ಯ ರಾಶಿ ಬಿದ್ದಿದೆ.

‘ತ್ಯಾಜ್ಯವನ್ನು ಆಗಾಗ ತೆರವು ಮಾಡಬೇಕು. ಕೆಲಸ ಮುಗಿಯುತ್ತಿದ್ದಂತೆ ಸ್ವಚ್ಛಗೊಳಿಸಬೇಕು ಎಂದು ನಿಯಮ ಇದೆ. ಆದರೆ ಗುತ್ತಿಗೆದಾರರು ನಿಯಮ ಪಾಲಿಸಿಲ್ಲ. ಅಲ್ಲಲ್ಲೇ ಸುರಿದಿಡಲಾಗಿದೆ. ಇದರಿಂದಾಗಿ ಬಿಸಿಲು ಬಂದಾಗ ರಸ್ತೆ ತುಂಬಾ ದೂಳು ತುಂಬಿರುತ್ತದೆ. ಮಳೆ ಬಂದಾಗ ಕೆಸರು ಉಂಟಾಗುತ್ತಿದೆ’ ಎಂದು ಬಾಣಸವಾಡಿಯ ಮಹೇಶ್ ದೂರಿದರು.

ಸಿಲ್ಕ್ ಬೋರ್ಡ್, ಮಾರತ್ಹಳ್ಳಿ, ಮಹದೇವಪುರದಂಥ ಐಟಿ ಕಾರಿಡಾರ್ಗಳಲ್ಲಿ ಈ ತ್ಯಾಜ್ಯದಿಂದಾಗಿ ರಸ್ತೆಗಳು ಕಿರಿದಾಗಿವೆ ಎಂದು ದೂರಿದರು.

‘ಕೆಲಸ ಮುಗಿದಿರುವಲ್ಲಿ ತಾತ್ಕಾಲಿಕ ತಡೆಗೋಡೆಗಳನ್ನು ತೆರವುಗೊಳಿಸಬೇಕು. ತ್ಯಾಜ್ಯವನ್ನು ಅಲ್ಲಿಂದ ಸಾಗಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇನ್ನೂ ಕಾಮಗಾರಿ ಮುಗಿದಿಲ್ಲ. ಕಾಮಗಾರಿ ಪೂರ್ಣಗೊಂಡ ನಂತರವೇ ರಸ್ತೆಗಳು ಸಂಪೂರ್ಣವಾಗಿ ಸ್ವಚ್ಛಗೊಳ್ಳಲಿವೆ’ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-4-1961111470

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.