ಬೆಂಗಳೂರು: ಎಚ್.ಎ.ಎಲ್ ಏರ್ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ತೂರು ಮುಖ್ಯರಸ್ತೆಯ ಮಾರತ್ಹಳ್ಳಿ ಸೇತುವೆಯಲ್ಲಿ ಬಿಎಂಆರ್ಸಿಎಲ್ ವತಿಯಿಂದ ‘ನಮ್ಮ ಮೆಟ್ರೊ’ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಮಾರ್ಚ್ 27ರಿಂದ ಮೂರು ದಿನ ರಾತ್ರಿ 12ರಿಂದ ನಸುಕಿನ ಜಾವ 3ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ವಾಹನ ಸಂಚಾರ ನಿರ್ಬಂಧ: ಎಚ್ಎಎಲ್ ಕಡೆಯಿಂದ ವರ್ತೂರು ಮುಖ್ಯರಸ್ತೆ ಮಾರತ್ಹಳ್ಳಿ ಸೇತುವೆ ಮೂಲಕ ವರ್ತೂರು ಮತ್ತು ವೈಟ್ಫೀಲ್ಡ್ ಕಡೆಗೆ ಹೋಗುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ವರ್ತೂರು ಮತ್ತು ವೈಟ್ಫೀಲ್ಡ್ ಕಡೆಯಿಂದ ವರ್ತೂರು ಮುಖ್ಯರಸ್ತೆ ಮಾರತ್ಹಳ್ಳಿ ಸೇತುವೆ ಮೂಲಕ ಎಚ್ಎಎಲ್ ಕಡೆಗೆ ಹೋಗುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಸಂಚಾರಕ್ಕೆ ಪರ್ಯಾಯ ಮಾರ್ಗ

* ಎಚ್.ಎ.ಎಲ್ ಕಡೆಯಿಂದ ವರ್ತೂರು ಮತ್ತು ವೈಟ್ಫೀಲ್ಡ್ ಕಡೆಗೆ ಸಂಚರಿಸುವ ವಾಹನಗಳು ವರ್ತೂರು ಮುಖ್ಯರಸ್ತೆಯ ಮೂಲಕ ಸಾಗಿ ದೊಡ್ಡನೆಕ್ಕುಂದಿ ಜಂಕ್ಷನ್ ಬಳಿಯಲ್ಲಿ ಎಡಕ್ಕೆ ತಿರುವು ಪಡೆದುಕೊಳ್ಳಬೇಕು. ಕಾರ್ತಿಕ್ನಗರ ಜಂಕ್ಷನ್ ಮೂಲಕ ಹೊರ ವರ್ತುಲ ರಸ್ತೆ ತಲುಪಿ, ನಂತರ ಎಡಕ್ಕೆ ತಿರುವು ಪಡೆದುಕೊಂಡು ಸಂಚರಿಸಿ ದೊಡ್ಡನೆಕ್ಕುಂದಿ ಮೇಲ್ಸೇತುವೆ ಕೆಳಗೆ ಯು–ಟರ್ನ್ ಪಡೆದು ಆಲ್ಪೈನ್ಸ್ ಇಕೊ ರಸ್ತೆಯ ಮೂಲಕ ಆಂಜನೇಯ ಜಂಕ್ಷನ್ ತಲುಪಿ, ಕುಂದಲಹಳ್ಳಿ ಮುಖ್ಯರಸ್ತೆ ಮತ್ತು ಗ್ರಾಪೈಟ್ ರಸ್ತೆಯ ಮೂಲಕ ವೈಟ್ ಫೀಲ್ಡ್ ಮತ್ತು ವರ್ತೂರು ಕಡೆಗೆ ಸಂಚರಿಸಬಹುದು.

* ವರ್ತೂರು, ವೈಟ್ಫೀಲ್ಡ್ ಕಡೆಯಿಂದ ಎಚ್ಎಎಲ್ ಕಡೆಗೆ ಸಂಚರಿಸುವ ವಾಹನಗಳು ವರ್ತೂರು ಮುಖ್ಯರಸ್ತೆಯ ಮೂಲಕ ಸಂಚರಿಸಿ ಕುಂದಲಹಳ್ಳಿ ಜಂಕ್ಷನ್ ಬಳಿ ಬಲಕ್ಕೆ ತಿರುವು ಪಡೆದುಕೊಳ್ಳಬೇಕು. ಕುಂದಲಹಳ್ಳಿ ಮುಖ್ಯರಸ್ತೆಯ ಮೂಲಕ ಸಂಚರಿಸಿ ಆಂಜನೇಯ ಜಂಕ್ಷನ್ ತಲುಪಿ ಎಡ ತಿರುವು ಪಡೆದುಕೊಂಡು, ಆಲ್ಪೈನ್ಸ್ ಇಕೊ ರಸ್ತೆಯ ಮೂಲಕ ಹೊರವರ್ತುಲ ರಸ್ತೆ ತಲುಪಿ ಕಾರ್ತಿಕ್ ನಗರ ಜಂಕ್ಷನ್ ಬಳಿ ಬಲ ತಿರುವು ಪಡೆದು, ದೊಡ್ಡನೆಕ್ಕುಂದಿ ಮುಖ್ಯ ರಸ್ತೆಯಲ್ಲಿ ಸಂಚರಿಸಿ ದೊಡ್ಡನೆಕ್ಕುಂದಿ ಜಂಕ್ಷನ್ ತಲುಪಿ ಬಲ ತಿರುವು ಪಡೆದುಕೊಂಡು, ವರ್ತೂರು ಮುಖ್ಯರಸ್ತೆಯ ಮೂಲಕ ಎಚ್ಎಎಲ್ ಕಡೆಗೆ ಸಂಚರಿಸಬಹುದು ಎಂದು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.