ಬೆಂಗಳೂರು: ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮುಂಬೈಯ ಲೋಕಮಾನ್ಯ ತಿಲಕ್ ಟರ್ಮಿನಲ್ ನಡುವೆ ಹೊಸದಾಗಿ ವಾರಕ್ಕೆರಡು ದಿನ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ರೈಲ್ವೆ ಸಚಿವಾಲಯವು ಅನುಮೋದನೆ ನೀಡಿದೆ. ಮೇ 17ರಂದು ಮೊದಲ ರೈಲು ಸಂಚರಿಸಲಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಹಾಗೂ ಬೆಂಗಳೂರು, ಉತ್ತರ ಕರ್ನಾಟಕದ ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಮತ್ತು ಮಹಾರಾಷ್ಟ್ರದ ಪುಣೆ, ಮುಂಬೈ ನಗರಗಳ ನಡುವೆ ಸಂಪರ್ಕವನ್ನು ಸುಧಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಘಾಟನಾ ವಿಶೇಷ ರೈಲು ಮೇ 17ರಂದು ಬೆಳಿಗ್ಗೆ 10ಕ್ಕೆ ಎಸ್ಎಂವಿಟಿ ನಿಲ್ದಾಣದಿಂದ ಹೊರಡಲಿದೆ. ಮರುದಿನ ಬೆಳಿಗ್ಗೆ 10.30ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್ಟಿಟಿ) ತಲುಪಲಿದೆ.

ಆನಂತರ ನಿಯಮಿತ ರೈಲು ಸಂಚಾರ ಮೇ 23ಕ್ಕೆ ಎಸ್ಎಂವಿಟಿಯಿಂದ ಹಾಗೂ ಮೇ 24ಕ್ಕೆ ಎಲ್ಟಿಟಿ ಮುಂಬೈಯಿಂದ ಆರಂಭಗೊಳ್ಳಲಿದೆ. ಶನಿವಾರ ಮತ್ತು ಮಂಗಳವಾರ ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 10.35ಕ್ಕೆ ಹೊರಡುವ ರೈಲು ಮರುದಿನ ರಾತ್ರಿ 10.40ಕ್ಕೆ ಎಲ್ಟಿಟಿ ತಲುಪಲಿದೆ. ಪ್ರತಿ ಭಾನುವಾರ ಮತ್ತು ಬುಧವಾರ ರಾತ್ರಿ 21.15ಕ್ಕೆ ಎಕ್ಟಿಟಿಯಿಂದ ಹೊರಡಲಿರುವ ರೈಲು ಮರುದಿನ ರಾತ್ರಿ 10.30ಕ್ಕೆ ಎಸ್ಎಂವಿಟಿಗೆ ತಲುಪಲಿದೆ.

ಒಟ್ಟು 17 ಎಲ್.ಎಚ್.ಬಿ ಬೋಗಿಗಳನ್ನು ಹೊಂದಿರುವ ಈ ರೈಲುಗಳು ದಾವಣಗೆರೆ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್ ಜಂಕ್ಷನ್, ಸಾಂಗ್ಲಿ, ಕರಾಡ್, ಸತಾರಾ, ಲೋನಾಂಡ್, ಪುಣೆ, ಲೋನಾವಾಲಾ, ಕರ್ಜತ್, ಕಲ್ಯಾಣ್ ಮತ್ತು ಥಾಣೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.