ಬೆಂಗಳೂರು: ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಕೊಲೆ ಮಾಡಿ ಮೃತದೇಹವನ್ನು ರಾಜಕಾಲುವೆಗೆ ಎಸೆದಿದ್ದ ತಂದೆ ಹಾಗೂ ಅವರ ಸಂಬಂಧಿಕರನ್ನು ಯಲಹಂಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಚಿಮ್ಮುಡ ಗ್ರಾಮದ ಈರಯ್ಯ ದುಂಡಯ್ಯ ಮಠಪತಿ (44), ಅದೇ ಜಿಲ್ಲೆಯ ಅಂತಾಪುರ ಗ್ರಾಮದ ಚಿನ್ನಯ್ಯ ಮಠಪತಿ (29), ಚೇತನ್ ಮಾದರ (26) ಹಾಗೂ ವಿನಾಯಕ ಗುರುವ (19) ಬಂಧಿತರು.

ಆರೋಪಿಗಳು ಏ.27ರಂದು ರಮೇಶ್ ಪಟ್ಟದಕಲ್ಲು(28) ಅವರನ್ನು ಕೊಲೆ ಮಾಡಿ ಮೃತದೇಹವನ್ನು ಎಸೆದು ಪರಾರಿ ಆಗಿದ್ದರು. ರಮೇಶ್ ಪಟ್ಟದಕಲ್ಲು ಅವರ ಸಂಬಂಧಿಕರು ನೀಡಿದ ದೂರಿನ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಈರಯ್ಯ ದುಂಡಯ್ಯ ಮಠಪತಿಗೆ ಮಗಳಿದ್ದು, ಮುಧೋಳದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈರಯ್ಯ ಅವರ ಪುತ್ರಿಯನ್ನು ಮದುವೆ ಆಗುವಂತೆ ರಮೇಶ್ ಪಟ್ಟದಕಲ್ಲು ದುಂಬಾಲು ಬಿದ್ದಿದ್ದರು. ಆದರೆ, ಆಕೆ ನಿರಾಕರಿಸಿದ್ದಳು. ಅದರಿಂದ ಕೋಪಗೊಂಡಿದ್ದ ರಮೇಶ್ ಅಸಭ್ಯವಾಗಿ ವರ್ತಿಸಿದ್ದರು. ಹೀಗಾಗಿ ರಮೇಶ್ ವಿರುದ್ಧ 2020ರಲ್ಲಿ ಈರಯ್ಯ ದೂರು ನೀಡಿದ್ದರು. ದೂರಿನ ಮೇರೆಗೆ ಬಾಗಲಕೋಟೆ ಪೊಲೀಸರು ರಮೇಶನನ್ನು ಪೋಕ್ಸೊ ಪ್ರಕರಣದ ಅಡಿ ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಹೊರಬಂದಿದ್ದ ರಮೇಶ್, ಮತ್ತೊಮ್ಮೆ ಯುವತಿಗೆ ಕಿರುಕುಳ ನೀಡಲು ಆರಂಭಿಸಿದ್ದರು ಎನ್ನಲಾಗಿದೆ. ಹೀಗಾಗಿ, 2024ರಲ್ಲಿ ಮತ್ತೆ ಆತನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಬಳಿಕವೂ ಜೈಲಿನಿಂದ ಬಿಡುಗಡೆಯಾಗಿದ್ದ ರಮೇಶ್, ಬೆಂಗಳೂರಿಗೆ ಬಂದು ಸ್ವಿಗ್ಗಿ, ಜೊಮ್ಯಾಟೊದಲ್ಲಿ ಆಹಾರ ಪದಾರ್ಥಗಳ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ಮದ್ಯ ಸೇವಿಸಲು ಕರೆದೊಯ್ದು ಕೊಲೆ: ಈ ನಡುವೆ ಈರಯ್ಯ ದುಂಡಯ್ಯ ಮಠಪತಿ, ಮಗಳನ್ನು ಬೆಂಗಳೂರಿನ ಕಾಲೇಜೊಂದಕ್ಕೆ ಸೇರಿಸಿದ್ದರು. ಈ ವಿಷಯ ತಿಳಿದಿದ್ದ ರಮೇಶ್, ಆಕೆಯನ್ನು ಭೇಟಿ ಮಾಡಿದ್ದರು. ಅಲ್ಲದೇ ಕಿರುಕುಳ ಸಹ ನೀಡಿದ್ದರು ಎನ್ನಲಾಗಿದೆ. ವಿಷಯ ತಿಳಿದು ಈರಯ್ಯ ತನ್ನ ಸಂಬಂಧಿಕರನ್ನು ಬೆಂಗಳೂರಿಗೆ ಕರೆಸಿಕೊಂಡಿಸಿದ್ದರು ಎಂದು ಪೊಲೀಸರು ಹೇಳಿದರು.

ಏ.27ರಂದು, ರಮೇಶ್ನನ್ನು ಪತ್ತೆ ಹಚ್ಚಿ, ‘ಊಟಕ್ಕೆ ಹೋಗೋಣ’ ಎಂದು ತಮ್ಮ ಕಾರಿನಲ್ಲಿ ಬಾರ್ಗೆ ಕರೆದೊಯ್ದು ಕಂಠಪೂರ್ತಿ ಮದ್ಯ ಕುಡಿಸಿದ್ದರು. ಬಳಿಕ ಅಲ್ಲಾಳಸಂದ್ರದ ರಾಜಕಾಲುವೆ ಬಳಿ ಕರೆದೊಯ್ದು ಕುತ್ತಿಗೆ ಬಿಗಿದು ಕೊಲೆ ಮಾಡಿ ರಾಜಕಾಲುವೆಯಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-4-1814997129

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.