ಬೆಂಗಳೂರು: ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ಆಗ್ರಾ ಘರಾನಾಕ್ಕೆ ಪ್ರಸಿದ್ಧರಾಗಿದ್ದ ಲಲಿತ್ ಜೆ. ರಾವ್ (84) ಬುಧವಾರ ನಗರದ ಮಲ್ಲೇಶ್ವರದಲ್ಲಿ ನಿಧನರಾದರು.

ಬಾಲ್ಯದಲ್ಲಿ ಪಂಡಿತ್ ರಾಮರಾವ್ ನಾಯಕ್ ಅವರಲ್ಲಿ ಸಂಗೀತ ಕಲಿತರು. 12ನೇ ವಯಸ್ಸಿನಲ್ಲಿ ಮೊದಲ ಸಂಗೀತ ಕಛೇರಿ ನೀಡಿದ್ದರು. ಆನಂತರ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಜಯವಂತ ರಾವ್ ಅವರನ್ನು ಮದುವೆಯಾದ ಬಳಿಕ ದೆಹಲಿಗೆ ಹೋಗಿದ್ದಾಗ ದಿನಕರ ಕಾಯ್ಕಿಣಿ ಅವರಲ್ಲಿ ಸಂಗೀತ ಅಭ್ಯಾಸ ಮಾಡಿದರು. ಪತಿಗೆ ಮುಂಬೈಗೆ ವರ್ಗ ಆಗಿದ್ದರಿಂದ ಮುಂಬೈಗೆ ಬಂದರು. ಅಲ್ಲಿ ಉಸ್ತಾದ್ ಖಾದಿಮ್ ಹುಸೇನ್ ಖಾನ್ ಅವರ ಶಿಷ್ಯೆಯಾಗಿ ಪ್ರಸಿದ್ಧ ಸಂಗೀತಗಾರ್ತಿಯಾಗಿ ಬೆಳೆದರು.

ಖಯಾಲ್, ಧ್ರುಪದ್, ಧಮಾರ್, ಠುಮ್ರಿ, ತರನಾ, ಹರಿ ಮುಂತಾದ ಗಾಯನ ಪ್ರಕಾರಗಳಲ್ಲಿ ಪ್ರವೀಣರಾಗಿದ್ದರು. ‘ಸಜನ್ ಮಿಲಾಪ್’ ಎಂಬ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾಗಿದ್ದರು. ಭಾರತ ಸರ್ಕಾರದಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವ ಸೇರಿದಂತೆ ಹಲವು ಗೌರವಗಳು ಅವರಿಗೆ ಬಂದಿದ್ದವು.

ಲಲಿತ್ ಜೆ. ರಾವ್ ಅವರಿಗೆ ಪತಿ ಜಯವಂತ ರಾವ್, ಪುತ್ರ ಸಂಜೀವ್ ರಾವ್ ಇದ್ದಾರೆ. ಪುತ್ರ ಫ್ರಾನ್ಸ್ನಲ್ಲಿದ್ದು, ಅವರು ಬಂದ ಬಳಿಕ ಶುಕ್ರವಾರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-572724295

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.