ಬೆಂಗಳೂರು: ‘ರಾವಣನ ಬಗ್ಗೆ ವ್ಯಾಸನ ಮೂಲ ರಾಮಾಯಣಕ್ಕಿಂತ ಭಿನ್ನವಾದ ಚಿತ್ರಣವು ನಾಗಚಂದ್ರನ ‘ಪಂಪ ರಾಮಯಣ’ದಲ್ಲಿ ಸಿಗುತ್ತದೆ’ ಎಂದು ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು.

ಜೈನ್ ಮಿಲನ್, ಬೆಂಗಳೂರು ಸೆಂಟ್ರಲ್ ಹಾಗೂ ಚಕ್ರೇಶ್ವರಿ ಮಹಿಳಾ ಸಮಾಜ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜೈನ ಸಾಹಿತ್ಯ ಸಿರಿ’ ಕಾರ್ಯಕ್ರಮದಲ್ಲಿ ‘ನಾಗಚಂದ್ರ ಕವಿಯ ಪಂಪ ರಾಮಾಯಣದ ವೈಶಿಷ್ಟ್ಯ ಒಂದು ನೋಟ’ ವಿಷಯದ ಬಗ್ಗೆ ಮಾತನಾಡಿದರು.

‘ಒಮ್ಮೊಮ್ಮೆ ಸಮುದ್ರವೂ ತನ್ನ ಮೇರೆಯನ್ನು ಮೀರುವಂತೆ ರಾವಣ ಸೀತೆಯನ್ನು ನೋಡಿದಾಗ ತನ್ನ ಮನಃಸ್ಥಿತಿಯ ಮೇರೆಯನ್ನು ಮೀರುತ್ತಾನೆ. ಆದರೆ, ತನ್ನ ಉದಾತ್ತ ನಡೆಯ ಮೂಲಕ ರಾವಣನನ್ನು ನಾವು ಮೆಚ್ಚುವಂತೆ ನಾಗಚಂದ್ರ ತನ್ನ ಕಾವ್ಯದಲ್ಲಿ ಚಿತ್ರಿಸಿದ್ದಾನೆ’ ಎಂದರು.

‘ಜೀವದಯೆ ಹಾಗೂ ಅಹಿಂಸೆ ಜೈನಧರ್ಮದ ಎರಡು ಕಣ್ಣುಗಳು ಎಂಬ ಮೂಲವನ್ನು ಆಶಯವಾಗಿಟ್ಟುಕೊಂಡು ನಾಗಚಂದ್ರ ಕೃತಿಗಳನ್ನು ರಚಿಸಿದ್ದಾನೆ’ ಎಂದು ಹೇಳಿದರು.

ಜೈನ್ ಮಿಲನ್, ಬೆಂಗಳೂರು ಸೆಂಟ್ರಲ್ ಅಧ್ಯಕ್ಷೆ ಮಮತಾ ಕಾಂತರಾಜ್, ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾನೆ ಹಾಗೂ ಸಂಚಾಲಕಿ ಪದ್ಮಿನಿ ನಾಗರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.