ಪ್ರಾಥಮಿಕ ಹಂತದ ಪರೀಕ್ಷೆ ಆರಂಭವಾಗಿದೆ. ಸುಮಾರು 15 ದಿನ ಈ ಪರೀಕ್ಷೆ ನಡೆದ ಬಳಿಕ 45 ದಿನಗಳು ಸಿಗ್ನಲಿಂಗ್, ದೂರಸಂಪರ್ಕ, ವಿದ್ಯುತ್ ಸರಬರಾಜು ವ್ಯವಸ್ಥೆಗಳೊಂದಿಗೆ ಸಿಸ್ಟಂ ಸಂಯೋಜನೆ, ಸಾಮರ್ಥ್ಯ ಪರಿಶೀಲನೆ ಸಹಿತ ಪ್ರಮುಖ ಪರೀಕ್ಷೆಗಳು ನಡೆಯಲಿವೆ. ಬಳಿಕ ಗುಣಮಟ್ಟ ತಪಾಸಣಾ ಸಂಸ್ಥೆಗಳು ಸುರಕ್ಷತಾ ಪರೀಕ್ಷೆ ನಡೆಸಿ ವರದಿ ನೀಡಲಿವೆ. ವರದಿ ಸ್ವೀಕರಿಸಿ ರೈಲ್ವೆ ಮಂಡಳಿಯು ಅನುಮತಿ ನೀಡಿದ ಮೇಲೆ ಮೆಟ್ರೊ ರೈಲು ಸಂಚಾರ ಆರಂಭಗೊಳ್ಳಲಿದೆ. ಈ ವರ್ಷದ ಅಂತ್ಯದೊಳಗೆ ವಾಣಿಜ್ಯ ಸಂಚಾರ ಶುರುವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.