ಬೆಂಗಳೂರು: ರಾಜ್ಯದ ವಿವಿಧೆಡೆ ಎನ್ಸಿಬಿಯ ಬೆಂಗಳೂರು ಪ್ರಾದೇಶಿಕ ಘಟಕದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಆರೋಪಿಗಳಿಂದ ವಶ ಪಡಿಸಿಕೊಂಡಿದ್ದ ₹38 ಕೋಟಿ ಮೌಲ್ಯದ ನೈಸರ್ಗಿಕ–ಸಿಂಥೆಟಿಕ್ ಡ್ರಗ್ಸ್ ಅನ್ನು ಹೊಸಕೋಟೆಯ ಘಟಕದಲ್ಲಿ ಶುಕ್ರವಾರ ನಾಶಪಡಿಸಲಾಯಿತು.

ಒಟ್ಟು 13 ಪ್ರಕರಣಗಳಲ್ಲಿ ವಿವಿಧ ಮಾದರಿಯ 128.75 ಕೆ.ಜಿ. ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳ ಲಾಗಿತ್ತು. ಗಾಂಜಾ, ಹೈಡ್ರೊಪೋನಿಕ್ ಗಾಂಜಾ, ಕೊಕೇನ್, ಎಂಡಿಎಂಎ ಕ್ರಿಸ್ಟಲ್ಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿತ್ತು. ಅದನ್ನು ನಾಶಪಡಿಸಲಾಯಿತು. ಕಳೆದ ಫೆಬ್ರುವರಿಯಲ್ಲೂ ₹11 ಕೋಟಿ ಮೌಲ್ಯದ 1,607 ಕೆ.ಜಿ. ಡ್ರಗ್ಸ್ ನಾಶಪಡಿಸಲಾಗಿತ್ತು. ಈ ವರ್ಷ ಒಟ್ಟು ₹49 ಕೋಟಿ ಮೌಲ್ಯದ ಡ್ರಗ್ಸ್ ನಾಶ ಪಡಿಸಿದಂತಾಗಿದೆ ಎಂದು ಎನ್ಸಿಬಿ ಬೆಂಗಳೂರು ಪ್ರಾದೇಶಿಕ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎನ್ಸಿಬಿಯ ಪ್ರಾದೇಶಿಕ ನಿರ್ದೇಶಕ ಸಚಿನ್ ಘೋರ್ಪಡೆ, ಸಿಸಿಬಿ ಕ್ರೈಂ–2 ವಿಭಾಗದ ಡಿಸಿಪಿ ರಾಜಾ ಇಮಾಮ್ ಖಾಸೀಂ, ಎನ್ಸಿಬಿಯ ಸಹಾಯಕ ನಿರ್ದೇಶಕ ಎಂ.ಆರ್.ಅರವಿಂದ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.