ಬೆಂಗಳೂರು: ದೀಕ್ಷಾ ವೇದಾಂತು ಸಂಸ್ಥೆಯು ‘ರೀ–ನೀಟ್’ ಕಾರ್ಯ ಕ್ರಮ ಆಯೋಜಿಸಿದ್ದು, ನೀಟ್ ಆಕಾಂಕ್ಷಿಗಳಿಗೆ ಉಚಿತವಾಗಿ ಆನ್ಲೈನ್ ತರಬೇತಿ ನೀಡುವುದರ ಜತೆಗೆ ಕ್ಯಾಂಪಸ್ಗಳಲ್ಲಿ ಆಫ್ಲೈನ್ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಿದೆ.

ಇದರ ಉದ್ದೇಶ ಶೈಕ್ಷಣಿಕ ಸಿದ್ಧತೆ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು, ಸ್ಥಿರತೆ ಕಾಪಾಡಿ ಕೊಳ್ಳಲು, ಮರುಪರೀಕ್ಷೆಯನ್ನು ಶಾಂತ ರೀತಿಯಲ್ಲಿ ಎದುರಿಸಲು ಸಹಾಯ ಮಾಡುವುದಾಗಿದೆ ಎಂದು ದೀಕ್ಷಾ ವೇದಾಂತುವಿನ ಸಂಸ್ಥಾಪಕ ಶ್ರೀಧರ್ ಜಿ. ಹೇಳಿದ್ದಾರೆ.

ನೀಟ್ಗೆ ಉಚಿತವಾಗಿ ಕಠಿಣ ಮಾದರಿಯ ಅಣಕು ಪರೀಕ್ಷೆ, ನೈಜ ಪರೀಕ್ಷಾ ಸ್ಥಿತಿಯ ಅಭ್ಯಾಸ, ಕಾರ್ಯಕ್ಷಮತೆ ವಿಶ್ಲೇಷಣೆ ಮತ್ತು ಸುಧಾರಣೆಗೆ ಮಾರ್ಗದರ್ಶನ, ಕಾರ್ಯತಂತ್ರದ ಪರಿಷ್ಕರಣೆಗೆ ಬೆಂಬಲ ಮತ್ತು ಗೊಂದಲ ಬಗೆಹರಿಸುವಿಕೆ, ಸಮಯ ನಿರ್ವಹಣೆ ಮತ್ತು ಪರೀಕ್ಷಾ ತರಬೇತಿ, ಅನುಭವಿ ಶೈಕ್ಷಣಿಕ ತಂಡಗಳಿಂದ ಸಕಾರಾತ್ಮಕವಾಗಿ ತಯಾರಿಗೆ ನೆರವು ಮೊದಲಾದವು ಉಚಿತ ತರಬೇತಿ ಕಾರ್ಯಕ್ರಮದ ಭಾಗವಾಗಿವೆ.

ನೋಂದಣಿಯು ಸೀಮಿತ ಅವಧಿಯಲ್ಲಿ ಲಭ್ಯವಿದೆ. ಮಾಹಿತಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಸಮೀಪದ ದೀಕ್ಷಾ ವೇದಾಂತು ಕ್ಯಾಂಪಸ್ ಸಂಪರ್ಕಿಸಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-4-272756785

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.