ಬೆಂಗಳೂರು: ಮನೆ ಖರೀದಿದಾರರು, ಹೂಡಿಕೆದಾರರು ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರಮುಖ ಸಂಸ್ಥೆಗಳನ್ನು ‘ನ್ಯೂಸ್ ಫಸ್ಟ್ ಪ್ರಾಪರ್ಟಿ ಹಬ್ಬ’ ಮೇ 30 ಮತ್ತು 31ರಂದು ಒಂದೇ ವೇದಿಕೆಗೆ ತರಲಿದೆ. ಮನೆ ಅಥವಾ ಜಾಗ ಖರೀದಿಸಲು ಜನರು ನಗರದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಸುತ್ತಾಡಬೇಕು ಮತ್ತು ಪ್ರತ್ಯೇಕ ಡೆವಲಪರ್ ಕಚೇರಿಗಳಿಗೆ ಭೇಟಿ ನೀಡಬೇಕು. ಬಜೆಟ್, ಲೊಕೇಶನ್ ಹಾಗೂ ಸೌಲಭ್ಯಗಳ ಹೋಲಿಕೆ ಮಾಡಲು ದಿನ ಮೀಸಲಿಡಬೇಕು. ಆದರೆ ಈ ‘ಪ್ರಾಪರ್ಟಿ ಹಬ್ಬ'ದಲ್ಲಿ ಈ ಎಲ್ಲವೂ ಒಂದೇ ಕಡೆ ಲಭ್ಯವಾಗಲಿವೆ. ಅರಮನೆ ಮೈದಾನದಲ್ಲಿರುವ ರಾಯಲ್ ಸೆನೆಟ್ನಲ್ಲಿ ಈ ಹಬ್ಬ ನಡೆಯಲಿದೆ.

ನಿವೇಶನ, ಅಪಾರ್ಟ್ಮೆಂಟ್, ವಿಲ್ಲಾ, ಲಕ್ಷುರಿ ಹೋಮ್, ಫಾರ್ಮ್ ಲ್ಯಾಂಡ್ ಹಾಗೂ ಗೇಟೆಡ್ ಕಮ್ಯುನಿಟಿಗಳು ಇಲ್ಲಿ ಲಭ್ಯವಿವೆ. ಮಧ್ಯಮ ವರ್ಗದ ಕುಟುಂಬಗಳಿಂದ ಹಿಡಿದು ಪ್ರೀಮಿಯಂ ಹೂಡಿಕೆದಾರರ ತನಕ ಎಲ್ಲರ ಬಜೆಟ್ಗೆ ಹೊಂದುವ ಆಯ್ಕೆಗಳು ಇಲ್ಲಿರಲಿವೆ. ಒಂದು ಮನೆ ಕಟ್ಟಲು ಅಥವಾ ಖರೀದಿಸಲು ಬೇಕಾಗುವ ಬಹುತೇಕ ಎಲ್ಲಾ ಸೇವೆಗಳು ಸಿಗಲಿವೆ.

ಪ್ರಮುಖ ನಿರ್ಮಾಣ ಕಂಪನಿಗಳು, ಒಳಾಂಗಣ ವಿನ್ಯಾಸ ಸಂಸ್ಥೆಗಳು, ಹೋಮ್ ಆಟೋಮೇಶನ್, ಬ್ಯಾಂಕ್ ಹಾಗೂ ಗೃಹ ಸಾಲ ಸಲಹೆಗಾರರು, ವಾಸ್ತು ಹಾಗೂ ವಿನ್ಯಾಸ ತಜ್ಞರು ಸಹ ಲಭ್ಯವಿರುತ್ತಾರೆ. ಮಕ್ಕಳಿಂದ ಹಿರಿಯರ ತನಕ ಎಲ್ಲರಿಗೂ ಅನುಕೂಲವಾಗುವ ವ್ಯವಸ್ಥೆಗಳಿರಲಿವೆ. ವಿಶೇಷವಾಗಿ ಎಕ್ಸ್ಪೋದಲ್ಲಿ ಆಹಾರ ಮೇಳ ಹಾಗೂ ‘ಕಿಡ್ಸ್ ಪ್ಲೇ ಜೋನ್’ ಕೂಡ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-4-812874187

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.