ಬೆಂಗಳೂರು: ಐಪಿಎಲ್ ಸಮಯದಲ್ಲಿ ಆನ್ಲೈನ್ ಬೆಟ್ಟಿಂಗ್ ಜಾಲದ ಮೇಲೆ ಕಾರ್ಯಾಚರಣೆ ನಡೆಸಿರುವ ಸೈಬರ್ ಕಮಾಂಡ್ ಘಟಕವು, ಬೆಟ್ಟಿಂಗ್ ಆ್ಯಪ್, ವೈಬ್ಸೈಟ್ ಸೇರಿ 8,750 ತಂತ್ರಾಂಶಗಳ ಕಾರ್ಯಚಟುವಟಿಕೆ ಪತ್ತೆ ಹಚ್ಚಿದ್ದು, ತನಿಖೆ ವೇಳೆ ನೂರಾರು ಕೋಟಿ ರೂಪಾಯಿ ವಹಿವಾಟು ನಡೆದಿರುವುದು ಗೊತ್ತಾಗಿದೆ.

ಹಣದ ವಹಿವಾಟು ಸಂಬಂಧ ತನಿಖೆ ಚುರುಕುಗೊಳಿಸಿರುವ ಸೈಬರ್ ಘಟಕವು, 137 ವೆಬ್ಸೈಟ್ ಏಜೆನ್ಸಿಗಳಿಗೆ ಪತ್ರ ಬರೆದು ಶಾಶ್ವತವಾಗಿ ಬ್ಲಾಕ್ ಮಾಡುವಂತೆ ತಿಳಿಸಿದೆ. ವಿಚಾರಣೆಗೆ ಸಂಬಂಧಿಸಿದಂತೆ ಪೂರಕ ಮಾಹಿತಿ ನೀಡುವಂತೆಯೂ ಕೇಳಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೈಬರ್ ಕಮಾಂಡ್ ಸೆಂಟರ್ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಚಂದ್ರಶೇಖರ್, ‘ಈ ಅಕ್ರಮ ವೆಬ್ಸೈಟ್ ಹಾಗೂ ಆ್ಯಪ್ಗಳ ಮೂಲಕ ನೂರಾರು ಕೋಟಿ ರೂಪಾಯಿ ವಹಿವಾಟು ನಡೆದಿರುವುದು ಗೊತ್ತಾಗಿದೆ. ಹೀಗಾಗಿ ಅವುಗಳ ಮೂಲ ಕಂಡುಹಿಡಿಯಲು 37 ಸೇವಾ ಪೂರೈಕೆದಾರರ ಮೂಲಕ 127 ವೆಬ್ಸೈಟ್ ಏಜೆನ್ಸಿಗಳಿಗೆ ಪತ್ರ ಬರೆದು ಶಾಶ್ವತವಾಗಿ ಬ್ಲಾಕ್ ಮಾಡುವಂತೆ ಸೂಚಿಸಲಾಗಿದೆ. ಜತೆಗೆ ಕೆಲವೊಂದು ಮಾಹಿತಿ ನೀಡುವಂತೆಯೂ ಕೋರಲಾಗಿದೆ’ ಎಂದರು.

‘ಇಂಡಿಯನ್ ಸೈಬರ್ ಕ್ರೈಂ ಕೋ-ಆರ್ಡಿನೇಷನ್ ಸೆಂಟರ್ (ಐ4ಸಿ) ಸಹಕಾರದೊಂದಿಗೆ ದೇಶದಾದ್ಯಂತ ಅಕ್ರಮ ಬೆಟ್ಟಿಂಗ್ ಜಾಲತಾಣಗಳ ಯುಆರ್ಎಲ್ಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿತ್ತು. ಈ ವೇದಿಕೆಗಳನ್ನು ಬ್ಲಾಕ್ ಮಾಡಿದರೂ ನಕಲಿ ಯುಆರ್ಎಲ್ ಸೃಷ್ಟಿಸಿ ಮಿರರ್ ಡೊಮೈನ್ ಹಾಗೂ ಸಬ್ಡೊಮೈನ್ಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದವು. ಆದ್ದರಿಂದ ಶಾಶ್ವತವಾಗಿ ಬೆಟ್ಟಿಂಗ್ ದಂಧೆ ನಡೆಸದಂತೆ ಮೂಲ ಸೇವಾ ಪೂರೈಕೆದಾರರ ಮೂಲಕವೇ 137 ವೆಬ್ಸೈಟ್ ಏಜೆನ್ಸಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

‘ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ನಿಂದ ಸಾವಿರಾರು ಜನರು ಹಣ ಕಳೆದುಕೊಂಡು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಹಣಕಾಸಿನ ಮುಗ್ಗಟ್ಟಿನಿಂದ ಮಾನಸಿಕ ಖಿನ್ನತೆಗೆ ಜಾರಿದ್ದಾರೆ. ದೇಶದೆಲ್ಲೆಡೆ ಪಸರಿಸಿದ್ದ ಬೆಟ್ಟಿಂಗ್ ವೇದಿಕೆಗಳನ್ನು ಗುರುತಿಸಿ ನಿಷ್ಕ್ರಿಯಗೊಳಿಸಲಾಗಿದೆ. ಇದುವರೆಗೂ ನೂರಾರು ಕೋಟಿ ಹಣದ ವಹಿವಾಟು ನಡೆದಿರುವ ಸಾಧ್ಯತೆಯಿದೆ. ವಂಚಕ ಕಂಪನಿಗಳ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

ಆನ್ಲೈನ್ ಬೆಟ್ಟಿಂಗ್ ಹಾಗೂ ಜೂಜು ನಿಷೇಧಿಸಿ 2025ರಲ್ಲಿ ಸರ್ಕಾರ ಹೊಸ ಕಾಯ್ದೆ ತಂದಿತ್ತು. ಅದನ್ನು ಪ್ರಶ್ನಿಸಿ ಬೆಟ್ಟಿಂಗ್ ಕಂಪನಿಗಳು ಸುಪ್ರೀಂ ಕೋರ್ಟ್ ಮೊರೆಹೋಗಿದ್ದವು. ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಮೇ 27ರಂದು ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿತ್ತು. ಅದರಿಂದ ಆನ್ಲೈನ್ ಬೆಟ್ಟಿಂಗ್ ದಂಧೆ ಪತ್ತೆ ಹಚ್ಚಲು ಪೂರಕವಾಯಿತು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಐಜಿ ಎಚ್.ಡಿ.ಆನಂದ್ ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-1516279183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.