ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸುಧಾರಣೆಗೆ ಕಾರಾಗೃಹ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಅಲ್ಲಿ ನಡೆಯುತ್ತಿರುವ ‘ಅಕ್ರಮ’ಗಳಿಗೆ ಕಡಿವಾಣ ಬಿದ್ದಿಲ್ಲ.

ಕಾರಾಗೃಹದೊಳಗೆ ಡ್ರಗ್ಸ್ ಪೂರೈಕೆ, ಮೊಬೈಲ್ ಫೋನ್ಗಳನ್ನು ಕದ್ದುಮುಚ್ಚಿ ಸಾಗಣೆ ಮಾಡುತ್ತಿರುವ ಪ್ರಕರಣಗಳು ವರದಿ ಆಗುತ್ತಲೇ ಇವೆ. ಸಜಾಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳು ಜೈಲಿನ ವಿವಿಧ ಬ್ಯಾರಕ್ಗಳಲ್ಲಿ ವಿಡಿಯೊ ಕರೆ ಮಾಡುತ್ತಿರುವ, ಜೈಲಿನ ಒಳಗಿಂದ ಹೊರಗಿದ್ದವರಿಗೆ ಬೆದರಿಕೆ ಹಾಕುವ, ಜೈಲಿನ ಸಿಬ್ಬಂದಿಗೆ ನಿಂದನೆಯಂತಹ ಪ್ರಕರಣಗಳು ಸಾಮಾನ್ಯವಾಗಿವೆ. ಕಳೆದ ಆರು ತಿಂಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ, ಸಜಾಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳ ವಿರುದ್ಧ 44 ಪ್ರಕರಣಗಳು ದಾಖಲಾಗಿವೆ.

ಮೊಬೈಲ್ ಹಾಗೂ ಸಿಮ್ ಪೂರೈಸಿದ್ದವರ ವಿರುದ್ಧ 32, ಡ್ರಗ್ಸ್ ಪೂರೈಸಿದ್ದವರ ವಿರುದ್ಧ ನಾಲ್ಕು, ರೌಡಿಗಳ ನಡುವೆ ಜೈಲಿನ ಒಳಗೆ ಗಲಾಟೆ ನಡೆದ ಸಂಬಂಧ 3, ಜೈಲಿನ ಒಳಗೆ ಹಣ ಸಿಕ್ಕಿದ್ದ ಪ್ರಕರಣದಲ್ಲಿ ನಾಲ್ಕು ಹಾಗೂ ಪೆರೋಲ್ ಮೇಲೆ ಹೊರಬಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಿ, ಮತ್ತೆ ಜೈಲು ಸೇರಿದ್ದ ವಿಚಾರವಾಗಿ ಪ್ರಕರಣಗಳು ದಾಖಲಾಗಿವೆ.

ಅತ್ಯಾಚಾರ, ಸರಣಿ ಕೊಲೆ ಪಾತಕಿ ಉಮೇಶ್ ರೆಡ್ಡಿ, ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಭಯೋತ್ಪಾದಕ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ, ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದ ಆರೋಪಿ ತರುಣ್ ರಾಜ್ ತಾವಿರುವ ಬ್ಯಾರಕ್ನಲ್ಲಿ ಮೊಬೈಲ್ ಹಿಡಿದು ಮಾತನಾಡುತ್ತಿರುವ, ಟಿ.ವಿ ವೀಕ್ಷಣೆ ಮಾಡುತ್ತಿರುವ ವಿಡಿಯೊಗಳು ಕಳೆದ ನವೆಂಬರ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಅದರ ಬೆನ್ನಲ್ಲೇ, ಮಾಂಸ, ಮದ್ಯ ಸೇವಿಸಿ, ಜೈಲಿನಲ್ಲಿ ವಿಚಾರಣಾ ಕೈದಿಗಳು ನೃತ್ಯ ಮಾಡುತ್ತಿರುವ ವಿಡಿಯೊವೊಂದು ಜಾಲತಾಣದಲ್ಲಿ ಹರಿದಾಡಿತ್ತು.

ಬ್ಯಾರಕ್ಗಳಲ್ಲಿ ನೃತ್ಯ ಮಾಡಲು ಅವಕಾಶ ಕಲ್ಪಿಸಿದ ಆರೋಪದ ಮೇಲೆ ಜೈಲಿನ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಸೂಪರಿಂಟೆಂಡೆಂಟ್ ಅವರನ್ನು ಬೇರೆ ಜಿಲ್ಲೆಗೆ ಎತ್ತಂಗಡಿ ಮಾಡಲಾಗಿತ್ತು. ಈ ಪ್ರಕರಣವು ಸಾಕಷ್ಟು ಸದ್ದು ಮಾಡಿದ ನಂತರ ತನಿಖೆಗೆ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಅವರ ನೇತೃತ್ವದ ಉನ್ನತಮಟ್ಟದ ಸಮಿತಿ ರಚಿಸಲಾಗಿತ್ತು.

ಸಮಿತಿ ತನಿಖೆ ನಡೆಸಿ, ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಕಾರಾಗೃಹದ ಸುಧಾರಣೆಗೆ ವರದಿಯಲ್ಲಿ ಇರುವ ಕೆಲವು ಅಂಶಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದ್ದರೂ ‘ಅಕ್ರಮ’ಗಳಿಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಬಿದ್ದಿಲ್ಲ ಎಂಬ ಆರೋಪವಿದೆ.

‘ಕೈದಿಗಳಿಗೆ ಸಿಗರೇಟ್ ಹಾಗೂ ಡ್ರಗ್ಸ್ ಪೂರೈಸುತ್ತಿದ್ದ ಪ್ರಕರಣದಲ್ಲಿ ಎರಡು ತಿಂಗಳ ಹಿಂದೆ ಜೈಲಿನ ಇಬ್ಬರು ವೀಕ್ಷಕರನ್ನು ಬಂಧಿಸಲಾಗಿತ್ತು. ಆ ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನೂ ಕೆಲವರ ಪಾತ್ರವಿರುವುದು ಕಂಡುಬಂದಿದೆ. ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜೈಲಿನ ಮೂಲಗಳು ಹೇಳಿವೆ.

ಸುಧಾರಣೆಗೆ ಉನ್ನತ ಮಟ್ಟದ ಸಮಿತಿ ವರದಿ ಸಲ್ಲಿಸಿದರೂ ಜಾರಿಯಾಗದ ಕ್ರಮ

ಕಾರಾಗೃಹ: ‘ಅಕ್ರಮ’ಕ್ಕಿಲ್ಲ ಕಡಿವಾಣ

[Photo: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ]

70ಕ್ಕೂ ಅಧಿಕ ಮೊಬೈಲ್ ಪತ್ತೆ: ಜೈಲಿನ ಬ್ಯಾರಕ್ಗಳಲ್ಲಿ ಮೊಬೈಲ್ ಫೋನ್ಗಳು ಪತ್ತೆಯಾಗುವುದು ಸಾಮಾನ್ಯ ಸಂಗತಿಯಾಗಿದೆ. ಅಲೋಕ್ಕುಮಾರ್ ಅವರು ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ಡಿಜಿಪಿಯಾದ ಮೇಲೆ ನಿರಂತರ ಕಾರ್ಯಾಚರಣೆಗೆ ಸೂಚನೆ ನೀಡಿದ್ದಾರೆ. ಕಾರ್ಯಾಚರಣೆ ವೇಳೆ 70ಕ್ಕೂ ಹೆಚ್ಚು ಮೊಬೈಲ್ ಫೋನ್ಗಳು, ಚಾರ್ಜರ್ಗಳು, ನಗದು, ಸಿಗರೇಟ್ ಪ್ಯಾಕ್ಗಳು ಸಿಕ್ಕಿದ್ದವು. ಅದಾದ ಮೇಲೂ ಜೈಲಿಗೆ ಮೊಬೈಲ್ ಪೂರೈಕೆ ನಿಂತಿಲ್ಲ. ಜೈಲಿನ ಸಿಬ್ಬಂದಿ ಹಾಗೂ ಜೈಲಿನ ಒಳಗಿರುವ ಆಸ್ಪತ್ರೆಯ ಸಿಬ್ಬಂದಿಯೇ ಕೈದಿಗಳಿಗೆ ಮೊಬೈಲ್ ಪೂರೈಸುತ್ತಿದ್ದಾರೆ ಎಂಬ ಆರೋಪವಿದೆ.

ಬಟ್ಟೆಯಲ್ಲಿ ಬಚ್ಚಿಟ್ಟು ಡ್ರಗ್ಸ್ ಸಾಗಣೆ

ವಿಚಾರಣಾಧೀನ ಕೈದಿ ಪರ್ಹಾನ್ ಖಾನ್ ಎಂಬಾತನನ್ನು ಮಾರ್ಚ್ 26ರಂದು ಭೇಟಿಯಾಗಲು ಮಹಿಳೆ ಬಂದಿದ್ದರು. ಸಂದರ್ಶಕರ ಕೊಠಡಿ ಬಳಿ ಆಕೆಯನ್ನು ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದಾಗ ಮಹಿಳೆ ಧರಿಸಿದ್ದ ಬಟ್ಟೆಯ ಒಳಗೆ ಡ್ರಗ್ಸ್ ಇರುವುದು ಪತ್ತೆ ಆಗಿತ್ತು. ಅಲ್ಲದೇ ಕವರ್ನಲ್ಲಿ ಮೂರು ಸಿಮ್ ಕಾರ್ಡ್ ಇರುವುದೂ ಕಂಡುಬಂದಿತ್ತು. ಅಷ್ಟಲ್ಲದೇ 6ನೇ ಬ್ಯಾರಕ್ನಲ್ಲಿ ದಿಢೀರ್ ದಾಳಿ ಮಾಡಿ, ಪರಿಶೀಲನೆ ನಡೆಸಿದಾಗ ಕೈದಿಗಳು ಶೌಚಗುಂಡಿಯಲ್ಲಿ ಮೊಬೈಲ್ಗಳನ್ನು ಬಚ್ಚಿಟ್ಟಿರುವುದೂ ಪತ್ತೆಯಾಗಿತ್ತು. ಹೀಗೆ ಸಾಲು ಸಾಲು ಅಕ್ರಮಗಳು ಪತ್ತೆ ಆಗುತ್ತಲೇ ಇವೆ.

ವಿಡಿಯೊ ಕರೆ

ವಿಚಾರಣಾಧೀನ ಕೈದಿಯೊಬ್ಬ ಜೈಲಿನಲ್ಲಿದ್ದಾಗ ಪತ್ನಿಗೆ ವಿಡಿಯೊ ಕರೆ ಮಾಡಿ ಮಾತನಾಡಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಕಳೆದ ವಾರವಷ್ಟೇ ಹರಿದಾಡಿತ್ತು.

‘ಇನ್ಸ್ಟಾಗ್ರಾಂ ಖಾತೆಯಿಂದ ವಿಡಿಯೊ ಡಿಲಿಟ್ ಮಾಡಲಾಗಿದೆ. ಅದು ಪರಪ್ಪನ ಅಗ್ರಹಾರದಲ್ಲಿದ್ದ ಕೈದಿಯೇ ವಿಡಿಯೊ ಕರೆ ಮಾಡಿದ್ದು ಹೌದೊ ಅಲ್ಲವೇ ಎಂಬುದನ್ನು ಪರಿಶೀಲನೆ ನಡೆಸ ಲಾಗುತ್ತಿದೆ. ತನಿಖೆಗೆ ಸೂಚನೆ ನೀಡಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಎಂಜಿನಿಯರಿಂಗ್ ಕಾಲೇಜು, ಇಲಾಖೆ ನಡುವೆ ಒಪ್ಪಂದ

ಕೈದಿಗಳಿಗೆ ವಿವಿಧ ಮಾದರಿಯ ತರಬೇತಿ ನೀಡಲು ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆ ಹಾಗೂ ಆರ್.ವಿ. ಕಾಲೇಜು ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಸನ್ನಡತೆ ಅಥವಾ ಶಿಕ್ಷೆಯ ಅವಧಿ ಮುಕ್ತಾಯವಾದ ಮೇಲೆ ಜೈಲಿನಿಂದ ಬಿಡುಗಡೆ ಆದವರು ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಜೈಲಿನಲ್ಲಿ ಇದ್ದವರಿಗೆ ತರಬೇತಿ ನೀಡಲಾಗುವುದು. ಡಿಜಿಟಲ್ ಸಾಕ್ಷರತೆ, ತಂತ್ರಜ್ಞಾನ ಆಧಾರಿತ ತರಬೇತಿ ನೀಡಲಾಗುವುದು. ಈ ತರಬೇತಿಯ ಮೂಲಕ ಸುಸ್ಥಿರ ಜೀವನೋಪಾಯದ ಅವಕಾಶ ಗಳನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಕೆಲವರು ಶಿಕ್ಷೆ ಅನುಭವಿಸುತ್ತಿದ್ದರೂ, ಜೈಲಿನ ಒಳಗೂ ಅಕ್ರಮ ನಡೆಸುವುದನ್ನು ಬಿಟ್ಟಿಲ್ಲ. ಅಂತಹವರನ್ನು ಉತ್ತಮ ದಾರಿಗೆ ತರುವ ನಿಟ್ಟಿನಲ್ಲೂ ಈ ತರಬೇತಿ ಆರಂಭಿಸಲಾಗಿದೆ ಎಂದು ಹೇಳಿವೆ. ಇಲಾಖೆಯ ಡಿ.ಜಿ ಅಲೋಕ್ ಕುಮಾರ್ ಹಾಗೂ ಆರ್.ವಿ ಕಾಲೇಜು ಪ್ರಾಂಶುಪಾಲ ಕೆ.ಎನ್.ಸುಬ್ರಹ್ಮಣ್ಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.