ಬೆಂಗಳೂರು: ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ–4ರ ‘ಪೀಣ್ಯ ಮೇಲ್ಸೇತುವೆ’ಗೆ ಹೊಸದಾಗಿ ಅಳವಡಿಸಿರುವ ಕೇಬಲ್ಗಳ ಸಾಮರ್ಥ್ಯ ಪರೀಕ್ಷೆಗೆಂದು ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಎರಡನೇ ದಿನ ಬುಧವಾರವೂ ಚಾಲಕರು ಪರದಾಡಿದರು.

ಮೇ 8ರ ಬೆಳಿಗ್ಗೆ 11ರವರೆಗೂ ಕೆನ್ನಮೆಟಲ್ ವಿಡಿಯಾದ ಅಪ್ಪರ್ ರ್ಯಾಂಪ್ನಿಂದ ಎಸ್ಆರ್ಎಸ್ ಡೌನ್ ರ್ಯಾಂಪ್ವರೆಗೆ ಎರಡೂ ಕಡೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಬುಧವಾರ ಸಹ ಕೆಳರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ದಟ್ಟಣೆಯಲ್ಲಿ ಆಂಬುಲೆನ್ಸ್ಗಳು ಸಿಲುಕಿ ಮುಂದಕ್ಕೆ ಸಾಗಲು ಸಾಧ್ಯವಾಗದೇ ರೋಗಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಯಶವಂತಪುರ ರೈಲು ನಿಲ್ದಾಣದ ಬಳಿ, ಗೊರಗುಂಟೆಪಾಳ್ಯ, ಪೀಣ್ಯ, ಜಾಲಹಳ್ಳಿ ಕ್ರಾಸ್, ಎಂಟನೇ ಮೈಲಿ, ನಾಗಸಂದ್ರ ಹಾಗೂ ಮಂಜುನಾಥ್ ನಗರ ಮೆಟ್ರೊ ನಿಲ್ದಾಣದ ಟೋಲ್ ಬಳಿ ವಾಹನಗಳು ಮುಂದಕ್ಕೆ ಸಾಗಲು ಸಾಧ್ಯವಾಗದೇ ಸಾಲುಗಟ್ಟಿ ನಿಂತಿದ್ದವು.

ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಹೆಸರಘಟ್ಟ ರಸ್ತೆಯ ಮೂಲಕ ವಾಹನಗಳು ಪೈಪ್ಲೈನ್ ರಸ್ತೆಗೆ ಬಂದು ಅಲ್ಲಿಂದ ಗಂಗಮ್ಮನಗುಡಿ, ಬಿಇಎಲ್ ವೃತ್ತದ ಮೂಲಕ ನಗರ ಪ್ರವೇಶಿಸುತ್ತಿದ್ದವು. ಅಲ್ಲಿಯೂ ಬೆಳಿಗ್ಗೆ ಹಾಗೂ ಸಂಜೆ ವಿಪರೀತ ದಟ್ಟಣೆ ಉಂಟಾಗಿ ದ್ವಿಚಕ್ರ ವಾಹನಗಳ ಸವಾರರು ಹಾಗೂ ವಾಹನಗಳ ಚಾಲಕರು ತೊಂದರೆ ಅನುಭವಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-4-1004867095

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.