ಬೆಂಗಳೂರು: ಪಾರಿವಾಳಗಳ ಕಳವು ಮಾಡಿದವರನ್ನು ಪ್ರಶ್ನಿಸಲು ಹೋದಾಗ ನಡೆದ ಗಲಾಟೆಯಲ್ಲಿ ಯುವಕನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ರಾಜಗೋಪಾಲನಗರ ಠಾಣೆಯ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಲಗ್ಗೆರೆ ನಿವಾಸಿಗಳಾದ ದರ್ಶನ್ (28), ಸುರೇಂದ್ರ (27), ಮಹೇಂದ್ರ (29), ವಿಜಯ್ (26) ಹಾಗೂ ದರ್ಶನ್ (26) ಬಂಧಿತ ಆರೋಪಿಗಳು.

ಏಪ್ರಿಲ್ 21ರ ರಾತ್ರಿ ರಾಜಗೋಪಾಲ ನಗರದ ವಿಜ್ಞಾನ ಪಬ್ಲಿಕ್ ಶಾಲೆಯ ಬಳಿ ಮಲ್ಲಿಕಾರ್ಜುನ್ ರಾವ್ (24) ಎಂಬುವವರನ್ನು ಆರೋಪಿಗಳು ಕೊಲೆ ಮಾಡಿ ಪರಾರಿ ಆಗಿದ್ದರು. ಮಲ್ಲಿಕಾರ್ಜುನ್ ರಾವ್ ಅವರ ಸಂಬಂಧಿಕರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ಹೇಳಿದರು.

ಮಲ್ಲಿಕಾರ್ಜುನ್ ರಾವ್ ಅವರ ಸ್ನೇಹಿತ ಪ್ರಶಾಂತ್ ಪಾರಿವಾಳಗಳನ್ನು ಸಾಕಿದ್ದರು. ಅವುಗಳ ಕಳ್ಳತನ ನಡೆದಿತ್ತು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಐವರು ಪಾರಿವಾಳಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಕಳವು ಮಾಡಿದವರ ಸುಳಿವು ಗೊತ್ತಾದ ಮೇಲೆ ಏ.21ರ ರಾತ್ರಿ ಲಗ್ಗೆರೆ ಬಳಿ ಆರೋಪಿಗಳನ್ನು ಪ್ರಶ್ನಿಸಲು ಪ್ರಶಾಂತ್ ಜತೆಗೆ ಮಲ್ಲಿಕಾರ್ಜುನ್ ರಾವ್ ಹೋಗಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜೋರು ಗಲಾಟೆ ನಡೆದಿತ್ತು. ಮಲ್ಲಿಕಾರ್ಜನ್ ರಾವ್ ಅವರಿಗೆ ಆರೋಪಿಗಳು ಡ್ಯಾಗರ್ನಿಂದ ಇರಿದು ಕೊಲೆ ಮಾಡಿ ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

‘ಸದ್ಯಕ್ಕೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ನಾಲ್ವರಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಸ್ನೇಹಿತ ಪ್ರಶಾಂತ್ ಜತೆಗೆ ಪಾರಿವಾಳ ಕಳವು ಮಾಡಿದ್ದ ವಿಚಾರವನ್ನು ಪ್ರಶ್ನಿಸಲು ತೆರಳಿದ್ದಾಗ ಮಲ್ಲಿಕಾರ್ಜುನ್ ಅವರ ಕೊಲೆ ನಡೆದಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-4-1466666694

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.